ಕನ್ನಂಬಾಡಿಯ ಹೊಸ ವಿವಾದ ಎಬ್ಬಿಸಿದ ವಾಟಾಳ್ ! ಇತಿಹಾಸ ತಿಳಿಯದೇ ಟಿಪ್ಪುಸುಲ್ತಾನ್ ಬೆಂಬಲಕ್ಕೆ ನಿಂತು ನಾಲಿಗೆ ಹರಿಬಿಟ್ಟ ವಾಟಾಳ್ !

ಕನ್ನಂಬಾಡಿಯ ಹೊಸ ವಿವಾದ ಎಬ್ಬಿಸಿದ ವಾಟಾಳ್ ! ಇತಿಹಾಸ ತಿಳಿಯದೇ ಟಿಪ್ಪುಸುಲ್ತಾನ್ ಬೆಂಬಲಕ್ಕೆ ನಿಂತು ನಾಲಿಗೆ ಹರಿಬಿಟ್ಟ ವಾಟಾಳ್ !

ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ರವರ ಜಯಂತಿ ಆಚರಣೆಯ ಮೇಲೆ ಭಾರಿ ವಿವಾದಗಳು ಸೃಷ್ಟಿಯಾಗುತ್ತೀವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಟಿಪ್ಪು ಸುಲ್ತಾನ್ ರವರ ಜಯಂತಿಯನ್ನು ಬೆಂಬಲಿಸುತ್ತಾ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಆದರೆ ಟಿಪ್ಪು ಸುಲ್ತಾನ್ ಲಕ್ಷಾಂತರ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂಬ ಆರೋಪಗಳಿಂದ ಬಿಜೆಪಿ ಪಕ್ಷದ ಹಲವಾರು ನಾಯಕರು ಹಾಗೂ ಬೆಂಬಲಿಗರು ಟಿಪ್ಪು ಸುಲ್ತಾನ್ ರವರ ಜಯಂತಿಯನ್ನು ವಿರೋಧ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಟಿಪ್ಪು ಜಯಂತಿಯ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಹಲವಾರು ವಿವಾದಗಳು ಭುಗಿಲೇಳುತ್ತಿವೆ. ಇನ್ನು ಇದೇ ವಿಚಾರವಾಗಿ ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುವ ಟಿಪ್ಪುಸುಲ್ತಾನ್ ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಬದಲಾವಣೆ ಮಾಡಬೇಕು ಎಂಬ ಮಾತು ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ.

ಇದೀಗ ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ಟಿಪ್ಪು ಸುಲ್ತಾನ್ ಹೆಸರಿನಲ್ಲಿರುವ ರೈಲಿನ ಹೆಸರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಇಂತಹ ಸಮಯದಲ್ಲಿ ಸದಾ ಪ್ರತಿಭಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಾಟಾಳ್ ನಾಗರಾಜ್ ಅವರು ಕರ್ನಾಟಕದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟಿಪ್ಪು ಸುಲ್ತಾನ್ ರವರ ಅಭಿಮಾನಿಗಳ ಓಲೈಕೆಗೆ ಮುಂದಾದಂತೆ ಹೇಳಿಕೆ ನೀಡಿದ ವಾಟಾಳ್ ನಾಗರಾಜ್ ಅವರು ಇತಿಹಾಸ ತಿಳಿಯದೆ ಮಾಡಿದ ತಪ್ಪಿನಿಂದ ಇದೀಗ ಟಿಪ್ಪುಸುಲ್ತಾನ್ ಬೆಂಬಲಿಗರು ಕೂಡ ವಾಟಾಳ್ ನಾಗರಾಜ್ ವಿರುದ್ಧ ಸಿಡಿದೆದ್ದಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?? ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕೆಆರ್ಎಸ್ ಅಣೆಕಟ್ಟನ್ನು ನಿರ್ಮಿಸಿದ್ದು ಮಹಾರಾಜ ಕೃಷ್ಣರಾಜ ವಡೆಯರ್. 1910 ರಲ್ಲಿ ಕನ್ನಂಬಾಡಿ ಎಂಬ ಹಳ್ಳಿಯನ್ನು ಅಣೆಕಟ್ಟು ನಿರ್ಮಿಸಲು ಗ್ರಾಮದ ಜನರನ್ನು ಮತ್ತೊಂದು ಹೊಸ ಗ್ರಾಮಕ್ಕೆ ವಲಸೆ ಹೋಗುವಂತೆ ಸೂಚನೆ ನೀಡಿ, ವಶಪಡಿಸಿಕೊಂಡು ಎಲ್ಲಾ ಸಿದ್ಧತೆಗಳೊಂದಿಗೆ ಇಡೀ ವಿಶ್ವಕ್ಕೆ ಮಾದರಿ ಎನಿಸಿಕೊಂಡಿರುವ ಸರ್ ಎಮ್ ವಿಶ್ವೇಶ್ವರಯ್ಯ ರವರ ಚಾಕಚಕ್ಯತೆ ಯೊಂದಿಗೆ ಕಾವೇರಿ ನದಿಗೆ 1924 ರಲ್ಲಿ ಅಣೆಕಟ್ಟು ನಿರ್ಮಿಸಲಾಯಿತು. ಈ ವಿಷಯವನ್ನು ಇಲ್ಲಿಯವರೆಗೂ ಎಲ್ಲಾ ಇತಿಹಾಸದ ಪುಸ್ತಕಗಳು ಸಾರಿ ಸಾರಿ ಹೇಳುತ್ತವೆ. ಆದರೆ ಇದೀಗ ವಾಟಾಳ್ ನಾಗರಾಜ್ ರವರು ಇತಿಹಾಸವನ್ನು ತಿರುಚಿದ್ದಾರೆ.

ಟಿಪ್ಪು ಸುಲ್ತಾನ್ ರವರ ರೈಲಿನ ಹೆಸರನ್ನು ಬದಲಾಯಿಸಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ ವಾಟಾಳ್ ನಾಗರಾಜ್ ರವರು, ಟಿಪ್ಪು ಸುಲ್ತಾನ್ ರವರನ್ನು ಹೊಗಳುವ ಭರದಲ್ಲಿ ಟಿಪ್ಪು ಸುಲ್ತಾನ್ ರವರ ಒಬ್ಬ ಅಪ್ರತಿಮ ದೇಶಭಕ್ತ, ಮಹಾನ್ ಹೋರಾಟಗಾರ, ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟಿದ್ದ ಆದರ್ಶ ವ್ಯಕ್ತಿ. ಅಷ್ಟೇ ಅಲ್ಲದೆ ಕನ್ನಂಬಾಡಿ ಗೆ ಮೊದಲ ಶಂಕುಸ್ಥಾಪನೆ ಮಾಡಿದ್ದು ಟಿಪ್ಪು ಸುಲ್ತಾನ್, ಆದಕಾರಣ ಟಿಪ್ಪುಸುಲ್ತಾನ್ ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಬದಲಾವಣೆ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ಖುದ್ದು ಟಿಪ್ಪು ಸುಲ್ತಾನ್ ಬೆಂಬಲಿಗರು ಸಹ ವಿರೋಧ ಮಾಡಿದ್ದು, ಬೆಂಬಲ ನೀಡಲು ಹೋಗಿ ಇತಿಹಾಸವನ್ನು ಬದಲಾಯಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಟಿಪ್ಪುಸುಲ್ತಾನ್ ವಿರೋಧಿಗಳಂತೂ ವಾಟಾಳ್ ನಾಗರಾಜ ರವರಿಗೆ ಮನಬಂದಂತೆ ರೊಚ್ಚಿಗೆದ್ದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.