ಜೈ ಶ್ರೀರಾಮ್ ಎಂದರೆ ಉರಿದು ಬೀಳುತ್ತಿದ್ದ ಮಮತಾ ಇದೀಗ ಹಿಂದೂ ಗಳ ಮುಂದೆ ಮಂಡಿಯೂರಿದ್ದು ಹೇಗೆ ಗೊತ್ತೇ??

ಜೈ ಶ್ರೀರಾಮ್ ಎಂದರೆ ಉರಿದು ಬೀಳುತ್ತಿದ್ದ ಮಮತಾ ಇದೀಗ ಹಿಂದೂ ಗಳ ಮುಂದೆ ಮಂಡಿಯೂರಿದ್ದು ಹೇಗೆ ಗೊತ್ತೇ??

ಕಳೆದ ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆದ ಘಟನೆ ಇಡೀ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು . ಕೆಲವು ಹಿಂದೂ ಯುವಕರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದಕ್ಕಾಗಿ ಸರ್ವಾಧಿಕಾರಿ ಎಂದೇ ಬಿಂಬಿತವಾಗಿರುವ ಮಮತಾ ಬ್ಯಾನರ್ಜಿ ರವರು ಬಂಧನ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.ಮೊದಲಿಂದಲೂ ಕೇವಲ ಓಲೈಕೆ ರಾಜಕಾರಣ ಮಾಡಿಕೊಂಡು ಬದುಕುತ್ತಿದ್ದ ಮಮತಾ ರವರು ಕೆಲವು ಅಲ್ಪ ಸಂಖ್ಯಾತರವನ್ನು ಓಲೈಕೆ ಮಾಡಿದರೆ ಸಾಕು, ಚುನಾವಣೆಯಲ್ಲಿ ಗೆದ್ದು ಬೀಗುತ್ತೇನೆ ಎಂದು ತಮ್ಮ ಸರ್ವಾಧಿಕಾರವನ್ನು ಮೆರೆಯುತ್ತಿದ್ದರು. ಹಿಂದೂಗಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಯನ್ನು ಗಮನೇ ಹರಿಸದೆ, ಬಂಗಾಳ ರಾಷ್ಟ್ರವನ್ನು ಅಕ್ಷರಸಹ ಕೊತ ಕೊತ ಕುದಿಯುವಂತೆ ಮಾಡಿದ್ದರು. ಜೈ ಶ್ರೀ ರಾಮ್ ಘೋಷಣೆ ಕೂಗಿದ ಎಲ್ಲರನ್ನು ಬಂಧಿಸಿ ಉದ್ದತನ ಮೆರೆಯುತ್ತಿದ್ದ ಮಮತಾ ರವರು ಇದೀಗ ಅದರ ಮಹತ್ವ ಅರ್ಥ ಮಾಡಿಕೊಂಡಿದ್ದಾರೆ.

ಹೌದು, ಬಿಜೆಪಿ ಪಕ್ಷ ಪಕ್ಷಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯುವ ಭರವಸೆ ನೀಡಿ, ಹಿಂದೂ ಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳಿಗೆ ಬ್ರೇಕ್ ಹಾಕುತ್ತೇವೆ ಎಂದು ಕಳೆದ ಬಾರಿ ಚುನಾವಣೆ ಎದುರಿಸಿ ತನ್ನ ಅಸ್ತಿತ್ವವೇ ಇಲ್ಲದ ಬಂಗಾಳದಲ್ಲಿ ಸರ್ವಾಧಿಕಾರಿ ಮಮತಾ ರವರ ಮುಂದೆ ಗೆದ್ದು ತೋರಿಸಿದ್ದರು. ಇದರಿಂದ ಮತ್ತಷ್ಟು ಕೆರಳಿದ ಮಮತಾ ರವರು ಚುನಾವಣೆಯ ನಂತರ ಮತ್ತಷ್ಟು ತಮ್ಮ ಆಟಗಳನ್ನು ಆರಂಭಿಸಿದ್ದರು. ಆದರೆ ಬಹುಶಃ ಈಗ ಇವರಿಗೆ ಹಿಂದೂಗಳ ಮತಗಳ ಮಹತ್ವ ಅರ್ಥ ಆದಂತೆ ಕಾಣುತ್ತಿದೆ. ನಾವು ಮತಗಳ ಮಹತ್ವ ಎಂದು ಯಾಕೆ ಹೇಳುತ್ತಿದ್ದೇವೆ ಎಂದರೆ, ಮಮತಾ ರವರ ಇಂದಿನ ನಡೆಯ ಹಿಂದೆ ಇರುವುದು ಕೇವಲ ರಾಜಕೀಯ ಉದ್ದೇಶ ಎಂದು ಎಲ್ಲರಿಗೂ ತಿಳಿದಿದೆ. ಆದ್ಯಾಗೂ ಇದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ರವರ ಪ್ಲಾನ್ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ನಡೆದ್ದದ್ದೆನು ಗೊತ್ತೇ ?

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಮಮತಾ ರವರು ಓಲೈಕೆ ರಾಜಕಾರಣದಲ್ಲಿ ಮುಳುಗಿ ಹಿಂದೂ ಧರ್ಮದ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಹಿಂದೂಗಳ ಹಲವಾರು ಆಚರಣೆಗಳಿಗೆ ಸರಿಯಾದ ಬೆಂಬಲ ನೀಡದೆ, ಮನ ಬಂದಂತೆ ಟ್ಯಾಕ್ಸ್ ಸೇರಿದಂತೆ ಮುಂಗಡ ಹಣ ಪಾವತಿ ಎಂಬ ಮನ ಬಂದ ಕಾನೂನುಗಳನ್ನು ಜಾರಿ ಮಾಡಿ, ಹಣ ವಸೂಲು ಮಾಡುತ್ತಿದ್ದರು ಎಂಬ ಆರೋಪಗಳು ಮೊದಲಿಂದಲೂ ಕೇಳಿಬಂದಿವೆ. ಅದರಲ್ಲಿಯೂ ಏನೇ ಮಾಡಿದರೂ ದುರ್ಗಾ ಮಾತೆ ಆರಾಧನೆ ನಿಲ್ಲುವುದಿಲ್ಲ ಎಂಬುದನ್ನು ಅರಿತಿದ್ದ ಮಮತಾ ರವರು, ದಸರಾ ಸಮಯ ಬಂದರೆ ಸಾಕು ಕೋಟ್ಯಂತರ ರೂ ಹಣವನ್ನು ವಸೂಲಿ ಮಾಡುತ್ತಿದ್ದರು.

ಹೀಗಿರುವಾಗ ಇದೀಗ ಚುನಾವಣಾ ದೃಷ್ಟಿಯಲ್ಲಿ ಇದೀಗ ಕೋಲ್ಕತಾದಲ್ಲಿ ದುರ್ಗಾ ಮಾತೆಯ ಆರಾಧನೆಗೆ ದುರ್ಗಾ ಮಂಡಲಗಳಿಗೆ ಒಟ್ಟು 70 ಕೋಟಿ ರೂಪಾಯಿ ದಾನ ನೀಡುವುದಾಗಿ ಘೋಷಿಸಿದ್ದಾರೆ. ಇದು ಸತ್ಯ ಸ್ವಾಮಿ, ಮಮತಾ ರವರೇ ಇದರ ಘೋಷಣೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಎಲ್ಲಾ ದುರ್ಗಾ ಮಾತೆಯ ಮಂಡಲಗಳಿಗೆ ತಲಾ 25 ಸಾವಿರ ರೂಪಾಯಿ ನೀಡುವುದಾಗಿ ಟಿಎಂಸಿ ಪಕ್ಷದ ಸರ್ವಾಧಿಕಾರಿ ನಾಯಕಿ ಮಮತಾ ಬ್ಯಾನರ್ಜಿ, ಒಟ್ಟು 70 ಕೋಟಿ ರೂಪಾಯಿಗಳು ಕಾಣಿಕೆಯಾಗಿ ಕೊಡುಗೆ ದೇಣಿಗೆ ಪ್ರಕಟಿಸಿದ್ದಾರೆ. ಈಗಾಗಲೇ ಮಮತಾ ರವರ ಆಡಳಿತದಿಂದ ಲಕ್ಷಾಂತರ ಕೋಟಿ ಸಾಲದಲ್ಲಿ ಇದ್ದರೂ ಈ ಬಾರಿ ಕಳೆದ ಬಾರಿಗಿಂತ 15 ಸಾವಿರ ಹೆಚ್ಚು ಅನುಧಾನವನ್ನು ಪ್ರತಿ ಮಂಡಳಿಗೆ ಬಿಡುಗಡೆ ಮಾಡಿದ್ದಾರೆ ಹಾಗೂ ಇತರ ಸೇವಾ ಶುಲ್ಕಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಘೋಷಣೆ ಹೊರಡಿಸಿದ್ದಾರೆ. ನೋಡಿ ಕಳೆದ ಚುನಾಣೆಯಲ್ಲಿ ಕಲಿತ ಪಾಠ ಇದೀಗ ಚುನಾವಣಾ ಬಂದ ತಕ್ಷಣ ನೆನಪಾಗಿ ಹೇಗೆಲ್ಲ ನಡೆದುಕೊಳ್ಳುತ್ತಿದೆ ಎಂದು.