ಇಸ್ರೇಲ್ ದೇಶದ ಧರ್ಮ – ಹಿಂದುತ್ವದ ಬಗ್ಗೆ ಸ್ವಾಮಿ ಹೇಳಿದ್ದೇನು ಗೊತ್ತಾ?? ಆಪ್ತ ಸ್ನೇಹಿತನನ್ನು ಕೈಜೋಡಿಸಲು ಕರೆ ನೀಡಿದ್ದು ಯಾಕೆ ಗೊತ್ತೇ?

ಇಸ್ರೇಲ್ ದೇಶ ಹಾಗೂ ಭಾರತ ದೇಶದ ನಡುವಿನ ಸ್ನೇಹದ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ, ಇಡೀ ವಿಶ್ವದಲ್ಲಿಯೇ ಭಾರತದಕ್ಕೆ ಹಲವಾರು ಮಿತ್ರ ರಾಷ್ಟ್ರಗಳು ಇದ್ದರೂ ಸಹ ಇಸ್ರೇಲ್ ದೇಶ ಮಾತ್ರ ಪ್ರತ್ಯೇಕ ಸಾಲಿನಲ್ಲಿ ನಿಲ್ಲುತ್ತದೆ. ಇಡೀ ಭಾರತೀಯರು ಇಸ್ರೇಲ್ ದೇಶವನ್ನು ಬಹಳ ಗೌರವಿಸುತ್ತಾರೆ, ಇಸ್ರೇಲಿಗರು ಕೂಡ ಭಾರತೀಯರು ಎಂದರೆ ಸಾಕು ವಿಶೇಷ ಆತಿಥ್ಯ ನೀಡುತ್ತಾರೆ. ಆಧುನಿಕ ಶಸ್ತ್ರಾಸ್ತ್ರಗಳು ಸೇರಿಂದಂತೆ ತನ್ನ ವಿವಿಧ ಅತ್ಯಾಧುನಿಕ ಟೆಕ್ನಾಲಜಿ ಯನ್ನು ಆಲೋಚನೆ ಮಾಡದೇ ಭಾರತಕ್ಕೆ ನೀಡಲು ಮುಂದಾಗುತ್ತದೆ ಹಾಗೂ ಭಾರತ ಯಾವುದಾದ್ರೂ ಸಮಸ್ಯೆ ಎದುರಿಸುತ್ತದೆ ಎಂದರೆ ಸಾಕು, ಕೇಳದೆ ಪರಿಹಾರ ನೀಡಲು ಮುಂದಾಗಿ ಭಾರತದ ಆಪ್ತ ಮಿತ್ರ ಎಂಬುದನ್ನು ಸಾಬೀತು ಪಡಿಸುತ್ತದೆ. ಇದಕ್ಕೆ ಇತ್ತೀಚೆಗಷ್ಟೇ ಭಾರತ ಕೇಳದೆ ಹೋದರೂ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮುಂದಾಗಿ ಮಹಾರಾಷ್ಟ್ರದಲ್ಲಿ ೧೦೦೦ ಕೋಟಿ ಹೂಡಿಕೆ ಮಾಡಿದ್ದೆ ಸ್ಪಷ್ಟ ಉದಾಹರಣೆ.

ಇದೀಗ ಇದೇ ಇಸ್ರೇಲ್ ದೇಶದ ಧರ್ಮವಾದ ಜುದಾಯಿಸಂ ಮತ್ತು ಹಿಂದುತ್ವದ ಬಗ್ಗೆ ಸೆಮಿನಾರ್ ಒಂದರಲ್ಲಿ ಮಾತನಾಡಿರುವ ಸ್ವಾಮಿ ರವರು ಮಾತನಾಡಿ ಮುಸ್ಲಿಂ ಉಗ್ರವಾದವನ್ನು ಮಟ್ಟ ಹಾಕಲೂ ಬನ್ನಿ ಒಟ್ಟಾಗಿ ಹೋರಾಟ ಮಾಡೋಣ ಎಂದು ಕರೆ ನೀಡಿದ್ದಾರೆ. ಹೌದು, ಇಂಡೋ-ಇಸ್ರೇಲ್ ಸ್ನೇಹ ಅಸೋಸಿಯೇಷನ್ ಆಯೋಜಿಸಿದ್ದ ಸೆಮಿನಾರ್ ನಲ್ಲಿ ಮಾತನಾಡಿದ ಸ್ವಾಮಿ ರವರು, ಹಿಂದುತ್ವ ಹಾಗೂ ಜುದಾಯಿಸಂ ನಡುವೆ ಯಾವುದೇ ವ್ಯತ್ಯಾಸವಿಲ್ಲ, ನಾವು ಹಲವು ಅವತಾರಗಳ ಒಂದು ದೇವರನ್ನು ನಂಬುತ್ತೇವೆ, ಜುದಾಯಿಸಂ ನಲ್ಲಿ ಕೂಡ ಒಂದು ದೇವರನ್ನು ಪೂಜಿಸಲಾಗುತ್ತದೆ, ಈ ಎರಡು ಧರ್ಮಗಳು ಸಕ್ರಿಯ ಮತಾಂತರವನ್ನು ನಂಬುವುದಿಲ್ಲ. ಹಿಂದೂ ಮತ್ತು ಜುದಾಯಿಸಂ ಸಮುದಾಯಗಳು ಒಟ್ಟಾಗಿ ಇಸ್ಲಾಮಿಕ್ ಉಗ್ರವಾದದ ವಿರುದ್ಧ ಹೋರಾಡಬಹುದು, ಅದು ಸಾಮಾನ್ಯ ಶತ್ರು ಎಂದು ಅಭಿಪ್ರಾಯವನ್ನು ಮಂಡಿಸಿದ್ದಾರೆ, ಈ ಮಾತುಗಳಿಗೆ ಸೆಮಿನಾರ್ ನಲ್ಲಿ ಭರಪೂರ ಪ್ರಶಂಸೆಗಳು ವ್ಯಕ್ತವಾಗಿವೆ. ಈ ಕೂಡಲೇ ವಿಶ್ವದಲ್ಲಿ ನಡೆಯುತ್ತಿರುವ ಮತಾಂತರಗೊಳಿಸುವ ಚಟುವಟಿಕೆಗಳನ್ನೂ ತಡೆಯಿಡಿಯಬೇಕು ಅಂದಿದ್ದಾರೆ.

Post Author: Ravi Yadav