ಬಿಎಸ್ ವೈ ಆಟದ ಮುಂದೆ ಸೋಲೊಪ್ಪಿಕೊಂಡ ರೇವಣ್ಣ ! ಅವಿರೋಧವಾಗಿ ಗೆಲುವು ಕಂಡ ಬಿಜೆಪಿ !!

ಬಿಎಸ್ ವೈ ಆಟದ ಮುಂದೆ ಸೋಲೊಪ್ಪಿಕೊಂಡ ರೇವಣ್ಣ ! ಅವಿರೋಧವಾಗಿ ಗೆಲುವು ಕಂಡ ಬಿಜೆಪಿ !!

ಇದೀಗ ಮಾಜಿ ಲೋಕೋಪಯೋಗಿ ಸಚಿವ ರೇವಣ್ಣ ರವರ ಮುಂದೆ ಬಿ ಎಸ್ ಯಡಿಯೂರಪ್ಪನವರು ಮತ್ತೊಮ್ಮೆ ಗೆದ್ದು ಬೀಗಿದ್ದಾರೆ, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ರೇವಣ್ಣ ರವರು ನಡೆಸಿದ ಎಲ್ಲಾ ಲಾಬಿಗಳು ವಿಫಲವಾಗಿವೆ. ತಾವು ಮೈತ್ರಿ ಸರ್ಕಾರದ ಜೊತೆಯಲಿ ಇದ್ದೇವೆ ಎಂಬುದನ್ನು ಮರೆತಿದ್ದ ರೇವಣ್ಣ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕರನ್ನು ಮುಂಬೈ ಗೆ ಶಿಫ್ಟ್ ಮಾಡಿ ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು, ಅದೇ ಸಮಯದಲ್ಲಿ ಸರಿಯಾಗಿ ಮೈತ್ರಿ ಸರ್ಕಾರ ಉರುಳಿತು. ಅಧಿಕಾರಕ್ಕೇರಿದ ಕೂಡಲೇ ರೇವಣ್ಣ ರವರ ರಾಜಕೀಯ ತಂತ್ರವನ್ನು ಅರ್ಥಮಾಡಿಕೊಂಡ ಬಿಎಸ್ ಯಡಿಯೂರಪ್ಪನವರು ಕೆಎಂಎಫ್ ಅಧ್ಯಕ್ಷ ಚುನಾವಣೆಯನ್ನು ತಮ್ಮ ಅಧಿಕಾರದ ಮೂಲಕ ಮುಂದೂಡಿದ್ದರು. ಇದೀಗ ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಬೆಂಬಲಿಗರೊಂದಿಗೆ ಬಾಲಚಂದ್ರ ಜಾರಕಿಹೊಳಿ ಅವರು ಅಧ್ಯಕ್ಷ ಸ್ಥಾನಕ್ಕೆ ಏರುವುದು ಖಚಿತವಾಗಿದ್ದು, ಇದನ್ನು ಅರಿತ ಮಾಜಿ ಸಚಿವ ರೇವಣ್ಣ ರವರು ಅಧ್ಯಕ್ಷ ಚುನಾವಣೆಗೆ ಸ್ಪರ್ಧೆ ಮಾಡದೆ ಇರಲು ನಿರ್ಧಾರ ಮಾಡಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ನಾಮಪತ್ರ ಸಲ್ಲಿಸದೇ ಹಿಂದೆ ಸರಿಯುವುದು ಇದೀಗ ಖಚಿತವಾಗಿದೆ. ಇನ್ನು ಬಾಲಚಂದ್ರ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ನಾಯಕ ಭೀಮಾ ನಾಯಕ್ ರವರ ಬೆಂಬಲಿಗರೊಂದಿಗೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಈ ಮೂಲಕ ಕೆಎಂಎಫ್ ನಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಬಿಜೆಪಿ ಪಕ್ಷ ಸಿದ್ಧವಾಗಿದ್ದು, ಬಾಲಚಂದ್ರ ಜಾರಕಿಹೊಳಿ ರವರ ಬಂಡಾಯ ಕೂಡ ಈ ಮೂಲಕ ಶಮನ ವಾಗಲಿದೆ.