ಅಬ್ಬಾ ! ಡಿಕೆಶಿ ಬೆಂಬಲಕ್ಕೆ ಬಂದಿದ್ದು ಯಾರು ಗೊತ್ತಾ?? ನೋಡಿ ಸ್ವಾಮಿ ಇವರು ವರಸೆ

ಅಬ್ಬಾ ! ಡಿಕೆಶಿ ಬೆಂಬಲಕ್ಕೆ ಬಂದಿದ್ದು ಯಾರು ಗೊತ್ತಾ?? ನೋಡಿ ಸ್ವಾಮಿ ಇವರು ವರಸೆ

ಇದೀಗ ಡಿ.ಕೆ ಶಿವಕುಮಾರ್ ಅವರಿಗೆ ಇ.ಡಿ ಇಲಾಖೆಯಿಂದ ಬಂಧನದ ಭೀತಿ ಎದುರಾಗಿದೆ. ಈಗಾಗಲೇ ದೆಹಲಿಯಲ್ಲಿ ವಿಚಾರಣೆ ಆರಂಭವಾಗಿದ್ದು ಡಿ.ಕೆ ಶಿವಕುಮಾರ್ ಅವರ ಮುಂದಿನ ಭವಿಷ್ಯ ಇಂದು ಬಹುತೇಕ ನಿರ್ಧಾರವಾಗಲಿದೆ. ಹೀಗಿರುವಾಗ ಅಚ್ಚರಿಯಾಗಿ ಡಿ.ಕೆ ಶಿವಕುಮಾರ್ ಅವರ ಬೆಂಬಲಕ್ಕೆ ಹೊಸ ಅತಿಥಿ ಬಂದಿದ್ದಾರೆ. ಹೌದು, ಇವರನ್ನು ವಿಶೇಷ ಅತಿಥಿ ಯಾಕೆ ಎಂದು ಕರೆಯುತ್ತೇವೆ ಎಂದು ನಿಮಗೆ ಈ ಲೇಖನ ಓದಿದ ನಂತರ ತಿಳಿಯುತ್ತದೆ. ಸಂಪೂರ್ಣ ವಿಷಯಕ್ಕಾಗಿ ಲೇಖನವನ್ನು ಓದಿ. ಇದೀಗ ದೇಶದ ಎಲ್ಲೆಡೆ ಹಳೆ ಹಗರಣಗಳ ಹಾಗೂ ಬೇನಾಮಿ ಆಸ್ತಿಗಳ ಮೇಲೆ ನರೇಂದ್ರ ಮೋದಿ ನೇತೃತ್ವದ ಸರಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ನಿಟ್ಟಿನಲ್ಲಿ ಕೆಲವು ದಿನಗಳಿಂದ ಹಲವಾರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ರಾಜಕೀಯ ನಾಯಕರು ಬಂಧನ ಭೀತಿ ಎದುರಿಸುತ್ತಿದ್ದಾರೆ.

ಇತ್ತೀಚಿಗೆ ಇಡೀ ದೇಶದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ರವರ ಬಂಧನದ ಸುದ್ದಿ ಭಾರಿ ಸದ್ದು ಮಾಡಿತ್ತು, ಬಂಧನವಾದ ನಂತರ ಒಂದು ಕಡೆ ಚಿದಂಬರಂ ರವರು ಕೋರ್ಟಿಗೆ ಅಲೆಯುತ್ತಿರುವ ಸಂದರ್ಭದಲ್ಲಿ, ಚಿದಂಬರಂ ರವರ ಕುರಿತು ಹಲವಾರು ವಿಷಯಗಳು ಹೊರಬಂದಿದ್ದವು. ತಮ್ಮ ಪುತ್ರನ ಜತೆ ಸೇರಿಕೊಂಡು ಮಾಡಿದ ಹಲವಾರು ಕಾರ್ಯ ತಂತ್ರಗಳು ಹೊರಗೆ ಬಿದ್ದ ಕಾರಣ ಪಿ ಚಿದಂಬರಂ ರವರಿಗೆ ಭಾರಿ ಮುಜುಗರ ಉಂಟಾಗಿತ್ತು, ಅಷ್ಟೇ ಅಲ್ಲದೆ ಪಿ. ಚಿದಂಬರಂ ರವರ ಪುತ್ರ ಕಾರ್ತಿಕ್ ಚಿದಂಬರಂ ರವರು ಸಹ ಬಂಧನವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅದರಲ್ಲಿಯೂ ತನ್ನದೇ ಪುತ್ರನ ಮನೆಯಲ್ಲಿ ಬಾಡಿಗೆ ವಾಸವಿದ್ದೇನೆ ಎಂದು ತಿಂಗಳಿಗೆ 2,00,000 ಸರ್ಕಾರದ ಹಣವನ್ನು ಪಡೆಯುತ್ತಿದ್ದ ಇವರ ಈ ನೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ಎಲ್ಲ ವಿದ್ಯಮಾನಗಳಿಂದ ಬಹುಶಹ ಕಾರ್ತಿಕ್ ಚಿದಂಬರಂ ರವರು ಭಿನ್ನ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಯಾಕೆಂದರೆ ಯಾವೊಬ್ಬ ಕಾಂಗ್ರೆಸ್ ನಾಯಕರು ಇದುವರೆಗೂ ಡಿ.ಕೆ ಶಿವಕುಮಾರ್ ಅವರ ಬೆಂಬಲಕ್ಕೆ ಬಂದಿರಲಿಲ್ಲ. ಆದರೆ ಇದೀಗ ಪಿ.ಚಿದಂಬರಂ ರವರ ಪುತ್ರ ಕಾರ್ತಿಕ್ ಚಿದಂಬರಂ ರವರು ಡಿ.ಕೆ ಶಿವಕುಮಾರ್ ಅವರ ಬೆಂಬಲಕ್ಕೆ ಬಂದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಅಟ್ಟಲು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿ ಡಿ.ಕೆ ಶಿವಕುಮಾರ್ ಅವರನ್ನು ಕೂಡಲೇ ಆರೋಪ ಮುಕ್ತ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಭಾವಿ ಹಾಗೂ ಮುಂಚೂಣಿ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಿಬಿಐ ಹಾಗೂ ಇತರ ಇಲಾಖೆಗಳನ್ನು ಬಳಸಿಕೊಂಡು ನಾಯಕರನ್ನು ಮುಜುಗರಕ್ಕೆ ಉಂಟಾಗುವ ರೀತಿ ಬಂಧನ ಮಾಡುತ್ತಿದೆ. ಕೂಡಲೇ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇದನ್ನು ನಿಲ್ಲಿಸಬೇಕು, ಹಾಗೂ ತಮ್ಮ ತಂದೆ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ಆರೋಪ ಮುಕ್ತಗೊಳಿಸಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ಮಾತುಗಳನ್ನು ಹೊರಹಾಕಿದ್ದಾರೆ.ಈ ವಿಷಯ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ, ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಫಾಲೋ ಮಾಡಿ.