ಇಸ್ರೇಲ್ ಅಖಾಡಕ್ಕೆ !ಭಾರತಕ್ಕೆ ಬರುತ್ತಿವೆ ವಿಶೇಷ ಶಸ್ತ್ರಾಸ್ತ್ರ ! ಬೆದರಿಕೆ ಹಾಕಿದ್ದ ಪಾಕಿಸ್ತಾನಕ್ಕೆ ಮರ್ಮಾಘಾತ

ಭಾರತದ ಜಮ್ಮು ಹಾಗೂ ಕಾಶ್ಮೀರದ ಪ್ರದೇಶಗಳನ್ನು ವಶಪಡಿಸಿಕೊಂಡು ಉಳಿದ ಪ್ರದೇಶಗಳಿಗೆ ಕಾದು ಕುಳಿತಿದ್ದ ಪಾಕಿಸ್ತಾನಕ್ಕೆ ಇತ್ತೀಚೆಗೆ ಕೇಂದ್ರ ಸರ್ಕಾರ ಭರ್ಜರಿ ಶಾಕ್ ನೀಡಿತ್ತು. ಕಾಶ್ಮೀರದ ವಿಷಯದಲ್ಲಿ ಐತಿಹಾಸಿಕ ನಿರ್ಧಾರವನ್ನು ಪ್ರಕಟಣೆ ಮಾಡಿದ ನರೇಂದ್ರ ಮೋದಿ ಅವರು ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ನಮ್ಮ ಮುಂದಿನ ಗುರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವುದು ಎಂದು ಗುಟುರು ಹಾಕಿದ್ದರು. ಸಾಮಾನ್ಯವಾಗಿಯೇ ಈ ಎಲ್ಲ ವಿದ್ಯಮಾನಗಳಿಂದ ಪಾಕಿಸ್ತಾನಕ್ಕೆ ದಿಕ್ಕೇ ತೋಚದಂತಾಗಿತ್ತು. ಕೈಯಲ್ಲಿ ಬಿಡಿಗಾಸು ಇಲ್ಲದಿದ್ದರೂ ಸಹ ಪಾಕಿಸ್ತಾನದ ಸೊಕ್ಕಿಗೇನು ಕಡಿಮೆ ಇಲ್ಲ, ಅದೇ ನಿಟ್ಟಿನಲ್ಲಿ ಭಾರತಕ್ಕೆ ಮೊದಲಿನಿಂದಲೂ ಅಣ್ವಸ್ತ್ರ ಹಾಗೂ ಯುದ್ಧದ ಬೆದರಿಕೆ ಹಾಕುತ್ತಿರುವ ಪಾಕಿಸ್ತಾನ ಇತ್ತೀಚಿಗೆ ಒಂದು ಹೆಜ್ಜೆ ಮುಂದೆ ಇಟ್ಟಿತ್ತು.

ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆಯುವುದು ಬಿಡಿ, ನಡೆಯುವ ಭೀತಿ ಎದುರಾದರೂ ಸಹ ಭಾರತದ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು ಬೀಳಲಿದೆ. ಈಗಾಗಲೇ ಚೀನಾ ಹಾಗೂ ಅಮೆರಿಕ ದೇಶಗಳ ನಡುವಿನ ಕಾದಾಟದಿಂದ ಇಡೀ ವಿಶ್ವದ ಹಲವಾರು ಬಲಾಢ್ಯ ರಾಷ್ಟ್ರಗಳು ಆರ್ಥಿಕ ಹಿಂಜರಿಕೆಯ ಭೀತಿಯನ್ನು ಎದುರಿಸುತ್ತಿವೆ. ಇದಕ್ಕೆ ಭಾರತ ಸಹ ಹೊರತಲ್ಲ, ಹೀಗಿರುವಾಗ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ದ ನಡೆದರೆ ಪಾಕಿಸ್ತಾನವು ನಾಶವಾಗುವುದಷ್ಟೇ ಅಲ್ಲದೆ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದು ಬೀಳಲಿದೆ. ಇದೇ ವಿಷಯವನ್ನು ಚೆನ್ನಾಗಿ ಅರಿತುಕೊಂಡಿರುವ ಪಾಕಿಸ್ತಾನವು ಭಾರತದ ಕಡೆಯಿಂದ ಯುದ್ಧ ನಡೆಯುವುದಿಲ್ಲ ಎಂದು ಊಹೆ ಮಾಡಿಕೊಂಡು ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ.

ಇದೇ ನಿಟ್ಟಿನಲ್ಲಿ  ಇತ್ತೀಚೆಗಷ್ಟೇ ಒಂದು ಹೆಜ್ಜೆ ಮುಂದೆ ಇಟ್ಟಿದ್ದ ಪಾಕಿಸ್ತಾನವು, ತಿನ್ನುವ ಅನ್ನಕ್ಕೆ ಒದ್ದಾಡುತ್ತಿರುವ ಸಮಯದಲ್ಲಿ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿ ಭಾರತಕ್ಕೆ ಮತ್ತೊಮ್ಮೆ ಸಂದೇಶ ರವಾನಿಸಿತ್ತು. ಕ್ಷಿಪಣಿ ಪರೀಕ್ಷೆಯ ನಂತರ, ಭಾರತಕ್ಕೆ ಪಾಕಿಸ್ತಾನದ ಸಚಿವರಿಂದ ಯುದ್ಧದ ಬೆದರಿಕೆ ಕೇಳಿಬಂದಿತ್ತು. ಮುಂದಿನ ಅಕ್ಟೋಬರ್ ಅಥವಾ ನವೆಂಬರ್ ತಿಂಗಳ ಹೊತ್ತಿಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ಧ ನಡೆಯಲಿದೆ ಎಂದು ಪಾಕ್ ಸಚಿವರು ಕೇವಲ ಎರಡು ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು. ಈ ಎಲ್ಲ ವಿದ್ಯಮಾನಗಳಿಂದ ಇನ್ನೇನು ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆದೇಹೋಗುತ್ತದೆ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಊಹಿಸಿದಂತೆ ಭಾರತದ ಆಪ್ತಮಿತ್ರ ಇಸ್ರೇಲ್ ಸಹಾಯ ಹಸ್ತ ಚಾಚಿ ಶಸ್ತ್ರಾಸ್ತ್ರಗಳ ಸರಬರಾಜುಗೆ ಮುಂದಾಗಿದೆ, ಇದರಿಂದ ಪಾಕಿಸ್ತಾನದ ಎದೆಯಲ್ಲಿ ನಡುಕ ಆರಂಭವಾಗಿದೆ.

ಹೌದು, ಕಳೆದ ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ್ದ ವಾಯು ದಾಳಿಯಲ್ಲಿ ಬಳಸಿದ ಸ್ಪೇಸ್ 2000 ಬಾಂಬ್ ಗಳ ಮುಂದಿನ ಆವೃತ್ತಿಯಾದ ಬಂಕರ್ ಬಸ್ಟರ್ ಆವೃತ್ತಿಯ ಬಾಂಬ್ ಗಳನ್ನು ಇದೀಗ ಕೇವಲ ಎರಡು ವಾರಗಳ ಒಳಗಡೆ ಭಾರತಕ್ಕೆ ತಲುಪಿಸುವುದಾಗಿ ಇಸ್ರೇಲ್ ದೇಶ ಘೋಷಣೆ ಮಾಡಿದೆ. ಸ್ಪೇಸ್ 2000 ಬಾಂಬ್ ಗಳನ್ನು, ಸೆಪ್ಟೆಂಬರ್ ನ ಎರಡನೆಯ ವಾರದ ಒಳಗಡೆ ಪೂರೈಸಲು ನಿರ್ಧಾರ ಮಾಡಿರುವ ಇಸ್ರೇಲ್ ದೇಶವು ಇದಕ್ಕಾಗಿ ಕೇವಲ ಮುನ್ನೂರು ಕೋಟಿ ರೂಗಳ ಒಪ್ಪಂದ ಮಾಡಿಕೊಂಡಿದೆ. ಈ ಹೊಸ ಆವೃತ್ತಿಯ ಸ್ಪೇಸ್ 2000 ಬಾಂಬ್ ಗಳು ಬಹಳ ಸುಲಭವಾಗಿ ಕಟ್ಟಡಗಳು ಹಾಗೂ ಟ್ಯಾಂಕರ್ ಗಳನ್ನು ಕ್ಷಣಮಾತ್ರದಲ್ಲಿ ನಾಶಪಡಿಸುತ್ತವೆ ಹಾಗೂ 60 ಕಿಲೋಮೀಟರ್ ದೂರದಲ್ಲಿರುವ ಟಾರ್ಗೆಟ್ ಗಳನ್ನು ಬಹಳ ಸುಲಭವಾಗಿ ಧ್ವಂಸ ಮಾಡಿ ಬಿಡುತ್ತವೆ. ಇದರಿಂದ ಮತ್ತೊಮ್ಮೆ ಇಸ್ರೇಲ್ ದೇಶವು ಭಾರತೀಯರ ಹೃದಯ ಗೆದ್ದಿದ್ದು, ಇಸ್ರೇಲ್ ದೇಶಕ್ಕೆ ಕರುನಾಡ ವಾಣಿ ತಂಡದ ಕಡೆಯಿಂದ ಅನಂತ ಅನಂತ ವಂದನೆಗಳು.

Post Author: Ravi Yadav