ಬಹಿರಂಗವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ರವರ ವಿರುದ್ಧ ಗುಡುಗಿದ ಕಾಶ್ಮೀರ ರಾಜ್ಯಪಾಲ

ಜಮ್ಮು ಹಾಗೂ ಕಾಶ್ಮೀರ ದ ಕುರಿತಂತೆ ರಾಹುಲ್ ಗಾಂಧಿ ರವರು ಕಳೆದ ಕೆಲವು ದಿನಗಳಿಂದ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿಲ್ಲ ಎಂದು ವಾದ ಮಾಡುತ್ತಿರುವ ರಾಹುಲ್ ಗಾಂಧಿ ಅವರಿಗೆ ಇತ್ತೀಚೆಗೆ ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲಿಕ್ ರವರು, ಜಮ್ಮು ಹಾಗೂ ಕಾಶ್ಮೀರಕ್ಕೆ ಆಹ್ವಾನ ನೀಡಿ, ನೀವೇ ಇಲ್ಲಿಗೆ ಬಂದು ನೋಡಿ ಕಾಶ್ಮೀರ ಎಷ್ಟು ಶಾಂತಿಯುತವಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದನ್ನು ತಪ್ಪಾಗಿ ಅರ್ಥಮಾಡಿಕೊಂಡು ರಾಹುಲ್ ಗಾಂಧಿ ಅವರು ತಾವೊಬ್ಬರೇ ಹೋಗದೆ ತಮ್ಮ ಜೊತೆ ನಿಯೋಗವನ್ನು ಕರೆದುಕೊಂಡು ಹೋಗಲು ಮುಂದಾದರೂ, ಇದರಿಂದ ಕಾಶ್ಮೀರದ ಶಾಂತಿಗೆ ಧಕ್ಕೆ ಆಗುತ್ತದೆ ಎಂದು ಅರಿತ ಸತ್ಯಪಾಲ್ ಮಲಿಕ್ ರವರು ಕೂಡಲೇ ರಾಹುಲ್ ಗಾಂಧಿ ರವರನ್ನು ವಾಪಸು ಕಳುಹಿಸಿದರು.

ಇದೇ ವಿಷಯವನ್ನು ಹೊರಹಾಕಿರುವ ಸತ್ಯಪಾಲ್ ಮಲಿಕ್ ಅವರು ನಾನು  ಹೇಳಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಂಡು ರಾಹುಲ್ ಗಾಂಧಿ ರವರು ನಿಯೋಗದ ಜೊತೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದರು. ಆದ ಕಾರಣದಿಂದ ನಾನು ಭದ್ರತಾ ದೃಷ್ಟಿಯಿಂದ ವಾಪಸ್ ತೆರಳಲು ಆದೇಶ ನೀಡಿದೆ. ಇಷ್ಟಕ್ಕೆ ಸುಮ್ಮನಾಗದ ರಾಹುಲ್ ಗಾಂಧಿ ಅವರು ಅಲ್ಲಿನ ಪರಿಸ್ಥಿತಿಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ, ರಾಹುಲ್ ಗಾಂಧಿ ರವರ ಅಸಂಬದ್ಧ ಹೇಳಿಕೆಯಿಂದ ಪಾಕಿಸ್ತಾನಕ್ಕೆ ಬಹಿರಂಗವಾಗಿ ಮಾತನಾಡುವುದಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ. ವಿಶೇಷ ಸ್ಥಾನಮಾನ ರದ್ಧತಿಯ ನಂತರವೂ ಜಮ್ಮು ಹಾಗೂ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ, ಎಂದು ಇದೇ ವೇಳೆ ಇಲ್ಲಿ ಸತ್ಯಪಾಲ್ ಮಲಿಕ್ ತಿಳಿಸಿದ್ದಾರೆ.

Post Author: Ravi Yadav