ಸಿದ್ದರಾಮಯ್ಯರವರ ವಿರುದ್ಧ ಗುಡುಗಿದ ಶ್ರೀರಾಮುಲು ! ಮಾಜಿ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡ ಬಳ್ಳಾರಿ ಶಾಸಕ

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಕೆಲವು ಅಂತರದ ಮತಗಳಿಂದ ಸಿದ್ದರಾಮಯ್ಯರವರ ವಿರುದ್ಧ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲನ್ನು ಕಂಡಿದ್ದ ಶ್ರೀರಾಮುಲು ರವರು ಇದೀಗ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಗ ಈ ಸೋಲಿನ ವಿಷಯ ಈಗ ಯಾಕೆ ಎಂದು ಅಂದುಕೊಂಡಿರಾ?? ಯಾಕೆಂದರೆ ಇದೀಗ ಬಾದಾಮಿ ಕ್ಷೇತ್ರದ ಪರವಾಗಿ ಹಾಗೂ ಉತ್ತರ ಕರ್ನಾಟಕದ ಪರವಾಗಿ ಧ್ವನಿ ಎತ್ತಿರುವ ಶ್ರೀರಾಮುಲು ರವರು ಇದೇ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿಗಳು ಆಗಿರುವ ಸಿದ್ದರಾಮಯ್ಯರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತರಾಟೆಗೆ ತೆಗೆದುಕೊಂಡು ಶ್ರೀರಾಮುಲು ರವರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯರವರು ಉತ್ತರಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಉತ್ತರ ಕರ್ನಾಟಕದ ಪ್ರವಾಹದ ಸ್ಥಿತಿ ಬಗ್ಗೆ ಮಾತನಾಡಿರುವ ಶ್ರೀರಾಮುಲು ರವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಿದ್ದರಾಮಯ್ಯರವರು ತಮ್ಮ ಸ್ವಕ್ಷೇತ್ರ ಬಾದಾಮಿಗೆ ಹೋಗಲಾಗಿಲ್ಲ, ರಾಜಕೀಯವಾಗಿ ಪುನರ್ಜನ್ಮ ನೀಡಿರುವ ಬಾದಾಮಿ ಕ್ಷೇತ್ರದ ಜನತೆಯನ್ನು ಸಿದ್ದರಾಮಯ್ಯರವರು ನಿರ್ಲಕ್ಷ ಮಾಡಿದ್ದಾರೆ. ಕಣ್ಣಿನ ತೊಂದರೆ ಇದೆ ಎಂದು ತಪ್ಪಿಸಿಕೊಂಡಿರುವ ಸಿದ್ದರಾಮಯ್ಯ ರವರಿಗೆ ದೆಹಲಿಗೆ ಹೋಗುವಾಗ, ಅಥವಾ ಬಿರಿಯಾನಿ ತಿನ್ನುವಾಗ ಕಣ್ಣಿಗೇನು ಆಗಿರಲಿಲ್ಲವೆಂದೂ ಪ್ರಶ್ನೆ ಮಾಡಿದ್ದಾರೆ. ಇನ್ನು ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಾತನಾಡಿರುವ ಶ್ರೀರಾಮುಲು ರವರು ಬಿಜೆಪಿ ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧನಾಗಿರುತ್ತೇನೆ, ಮರುಮಾತನಾಡದೆ ಹೈಕಮಾಂಡ್ ನಿಲುವಿಗೆ ಒಪ್ಪುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Post Author: Ravi Yadav