ಶಿವಮೊಗ್ಗ ಜನತೆಗೆ 50 ಕೋಟಿ ಬಿಡುಗಡೆ ನಂತರ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದ ಯಡಿಯೂರಪ್ಪ

ಶಿವಮೊಗ್ಗ ಜನತೆಗೆ 50 ಕೋಟಿ ಬಿಡುಗಡೆ ನಂತರ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದ ಯಡಿಯೂರಪ್ಪ

ಇಂದು ಬಿ ಎಸ್ ಯಡಿಯೂರಪ್ಪ ನವರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತುರ್ತು ಪರಿಹಾರವಾಗಿ 50 ಕೋಟಿ ರೂಗಳನ್ನು ತಕ್ಷಣವಾಗಿ ಬಿಡುಗಡೆ ಮಾಡಿದರು. ಈ ವಿಷಯ ತಿಳಿದು ಪ್ರವಾಹಪೀಡಿತ ಜನರು ನಿಟ್ಟುಸಿರು ಬಿಡುತ್ತಿರುವ ಸಂದರ್ಭದಲ್ಲಿ ಹಲವಾರು ದಿನಗಳ ಶಿವಮೊಗ್ಗ ಜಿಲ್ಲೆಯ ಜನರ ಹೋರಾಟಕ್ಕೆ ಇದೀಗ ಯಡಿಯೂರಪ್ಪ ನವರು ಅಸ್ತು ಎಂದಿದ್ದಾರೆ. ಕಳೆದ ಮೈತ್ರಿ ಸರ್ಕಾರವು ಶಿವಮೊಗ್ಗ ಜಿಲ್ಲೆಯ ಜನರನ್ನು ಕೆರಳಿಸುವಂತಹ ಯೋಜನೆಯನ್ನು ಜಾರಿಗೆ ತಂದಿದ್ದರು. ಸಾಮಾನ್ಯವಾಗಿ ಶಾಂತ ಸ್ವರೂಪಿ ಯಾಗಿರುವ ಶಿವಮೊಗ್ಗದ ಜನ ಒಗ್ಗಟ್ಟಾಗಿ ಯೋಜನೆಯ ವಿರುದ್ಧವಾಗಿ ದೋಸ್ತಿ ಸರ್ಕಾರದ ವಿರುದ್ಧ ತೊಡೆ ತಟ್ಟಿದರು.

ಅದುವೇ ಬೆಂಗಳೂರಿಗೆ ಶರಾವತಿ ನದಿ ನೀರು ತೆಗೆದುಕೊಂಡು ಹೋಗುವ ಅತಿ ದೊಡ್ಡ ಯೋಜನೆ. ಹೌದು ತಾಂತ್ರಿಕವಾಗಿ ಈ ಯೋಜನೆ ಬಹಳ ಅಪಾಯಕಾರಿ ಯಾಗಿದ್ದರೂ ಸಹ ದೋಸ್ತಿ ಸರ್ಕಾರ ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಗೆ ಅಸ್ತು ಎಂದಿತ್ತು. ಸತ್ಯ ಹೇಳುತ್ತೇನೆ ನಾನು ಸಹ ಬೆಂಗಳೂರಿಗನಾಗಿದ್ದು ಈ ಮಾತನ್ನು ಹೇಳುತ್ತಿದ್ದೇನೆ, ಶರಾವತಿ ನೀರು ಬೆಂಗಳೂರಿಗೆ ತರುವುದು ಒಂದು ಅವೈಜ್ಞಾನಿಕ ಹಾಗೂ ಅರ್ಥವಿಲ್ಲದ ಸಂಗತಿ. ಹೀಗಿರುವಾಗ ಮಲೆನಾಡಿನ ಜನರು ಈ ಯೋಜನೆಯ ವಿರುದ್ಧ ಧ್ವನಿಯೆತ್ತಿದ್ದರು, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪ್ರತಿಭಟನೆ ನಡೆದಿತ್ತು. ಇದೀಗ ಇದೇ ವಿಚಾರವನ್ನು ಗಣನೆಗೆ ತೆಗೆದು ಕೊಂಡಿರುವ ಬಿಎಸ್ ಯಡಿಯೂರಪ್ಪ ನವರು ಈ ಯೋಜನೆಗೆ ಎಳ್ಳುನೀರು ಬಿಟ್ಟಿದ್ದಾರೆ, ಹಾಗೂ ಯಾವುದೇ ಕಾರಣಕ್ಕೂ ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಖಚಿತ ಪಡಿಸಿದ್ದಾರೆ..