ಗಂಜಿ ಕೇಂದ್ರ ಪ್ರಾರಂಭಿಸದ ಹರೀಶ್ ಪೂಂಜಾ ! ಬದಲಾಗಿ ಆರಂಭ ಮಾಡಿದ್ದು ಯಾವ ಕೇಂದ್ರ ಗೊತ್ತಾ??

ಗಂಜಿ ಕೇಂದ್ರ ಪ್ರಾರಂಭಿಸದ ಹರೀಶ್ ಪೂಂಜಾ ! ಬದಲಾಗಿ ಆರಂಭ ಮಾಡಿದ್ದು ಯಾವ ಕೇಂದ್ರ ಗೊತ್ತಾ??

ಇದೀಗ ಕರ್ನಾಟಕ ರಾಜ್ಯದ ಬಹುತೇಕ ತಾಲೂಕುಗಳು ಪ್ರವಾಹಕ್ಕೆ ನಲುಗಿ ಹೋಗಿವೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಜನರು ತಮ್ಮ ಆಸ್ತಿ ಪಾಸ್ತಿ ಕಳೆದುಕೊಂಡು ಸರ್ಕಾರ ಆಯೋಜಿಸಿರುವ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದು ಕೊಂಡಿದ್ದಾರೆ. ಸದಾ ತಮ್ಮ ಸಾಮಾನ್ಯ ಜೀವನದಿಂದ ಸದ್ದು ಮಾಡುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕರಾದ ಹರೀಶ್ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ತಾನು ಯಾವುದೇ ಶಾಸಕ ಎಂಬ ದರ್ಪ ವಿಲ್ಲದೆ ಸರಿ ಸಾಮಾನ್ಯ ಜೀವನ ನಡೆಸಿ ಇಷ್ಟು ದಿವಸ ಸದ್ದು ಮಾಡುತ್ತಿದ್ದ ಹರೀಶ್ ಪೂಂಜಾ ರವರು ಇದೀಗ ಗಂಜಿ ಕೇಂದ್ರ ಪ್ರಾರಂಭ ಮಾಡಿಲ್ಲ, ಆದರೂ ಸಹ ಜನರು ಇವರ ನಿರ್ಧಾರಕ್ಕೆ ಭೇಷ್ ಎನ್ನುತ್ತಿದ್ದಾರೆ. ಅಷ್ಟಕ್ಕೂ ಹರೀಶ್ ಪೂಂಜಾ ರವರು ತೆರೆದಿದ್ದು ಯಾವ ಕೇಂದ್ರ ಗೊತ್ತಾ??

ಪ್ರವಾಹ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪಗಳ ಸಮಯದಲ್ಲಿ ಸಾಮಾನ್ಯವಾಗಿ ಗಂಜಿ ಕೇಂದ್ರಗಳನ್ನು ತೆರೆದು ಜನರಿಗೆ ಆಶ್ರಯ ನೀಡಲಾಗುತ್ತದೆ, ಆದರೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ತಮ್ಮ ಕ್ಷೇತ್ರದಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಗಂಜಿ ಕೇಂದ್ರದ ಬದಲು ಕಾಳಜಿ ಕೇಂದ್ರ ಎಂಬ ವಿಶೇಷ ಕೇಂದ್ರಗಳನ್ನು ತೆಗೆದು ನಿರಾಶ್ರಿತರನ್ನು ವಿಶೇಷವಾಗಿ ಕಾಳಜಿ ತೆಗೆದುಕೊಂಡು, ಮತ್ತೊಮ್ಮೆ ಕ್ಷೇತ್ರದ ಜನರಿಗೆ ನೆರವಾಗಿದ್ದಾರೆ. ಗಂಜಿ ಕೇಂದ್ರವೆಂದರೆ ಅದು ನಿರ್ಗತಿಕರಿಗಾಗಿ ಇರುವ ಕೇಂದ್ರ, ಆದರೆ ಮಳೆಯ ಪ್ರವಾಹದಲ್ಲಿ ಒದ್ದಾಡುತ್ತಿರುವವರು ಯಾರು ನಿರ್ಗತಿಕರಲ್ಲ, ಅವರೆಲ್ಲ ನಮ್ಮ ನಾಡಿನ ಅನ್ನದಾತ ಶ್ರಮಿಕರು ಇಂತಹ ಸಮಯದಲ್ಲಿ ಅವರನ್ನು ಕಾಳಜಿ ಮಾಡುವ ಕೇಂದ್ರಗಳೆ “ಕಾಳಜಿ ಕೇಂದ್ರಗಳು”. ಇದೀಗ ಈ ಸುದ್ದಿ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು ಗಂಜಿ ಕೇಂದ್ರದ ಬದಲು ಕಾಳಜಿ ಕೇಂದ್ರ ತೆರೆದು ಜನರಿಗೆ ವಿಶೇಷ ರೀತಿಯಲ್ಲಿ ಆಶ್ರಯ ಕಲ್ಪಿಸಲು ಮುಂದಾಗಿರುವ ಹರೀಶ್ ಪೂಂಜಾ ರವರಿಗೆ ಭಾರಿ ಪ್ರಶಂಸೆಗಳು ಕೇಳಿ ಬಂದಿವೆ.