ಮೋದಿ-ಅಮಿತ್ ಜೋಡಿಗೆ ಜೈಕಾರ ಹಾಕಿದ ರಜನಿಕಾಂತ್ ! ಹೋಲಿಕೆ ಹಾಡಿ ಹೊಗಳಿದ್ದು ಹೇಗೆ ಗೊತ್ತಾ??

ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ರವರು ತಾವು ರಾಜಕೀಯಕ್ಕೆ ಬಂದ ಬಳಿಕ ಹಲವಾರು ಬಾರಿ ಮೋದಿ ಸರ್ಕಾರದ ನಿಲುವಿನ ಪರವಾಗಿ ಧ್ವನಿ ಎತ್ತಿದ್ದಾರೆ. ಈ ಬಾರಿ ಮೋದಿ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರದ ಬಳಿಕ ಮತ್ತೊಮ್ಮೆ ಮಾತನಾಡಿರುವ ರಜನಿಕಾಂತ್ ರವರು ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನದ ಕುರಿತು ಮೋದಿ ಹಾಗೂ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಾಡಿಹೊಗಳಿದ್ದಾರೆ. ದಶಕಗಳಿಂದ ಕಾಡುತ್ತಿದ್ದ ಕಾಶ್ಮೀರ ಸಮಸ್ಯೆಗೆ ಅಮಿತ್ ಶಾ ಹಾಗೂ ಮೋದಿರವರು ತೋರಿದ ದಿಟ್ಟನಿಲುವು ಜನಸಾಮಾನ್ಯರಿಗೂ ದೇಶದ ಕಿರೀಟದ (ಜಮ್ಮು ಕಾಶ್ಮೀರ) ಬಗ್ಗೆ ಸ್ಪಷ್ಟನೆ ನೀಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆಯಲ್ಲಿ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್ ರವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ರವರು ಮಹಾಭಾರತದ ಕೃಷ್ಣ ಅರ್ಜುನ ಕಾಂಬಿನೇಷನ್ ಇದ್ದಂತೆ, ಈ ಜೋಡಿಗೆ ಏನಿದ್ದರೂ ವಿಜಯದ ಹಾದಿ , ದೇಶವನ್ನು ಕಾಪಾಡುವಲ್ಲಿ ಕೃಷ್ಣನ ಪಾತ್ರ ಯಾರದ್ದು? ಅಥವಾ ಅರ್ಜುನ ಯಾರು ಎಂಬುದು ಅವರಿಗೆ ಬಿಡುತ್ತಿದ್ದೇನೆ. ಆದರೆ ಜೋಡಿ ಕೃಷ್ಣಾರ್ಜುನ ಜೋಡಿ ಎಂಬುದು ಸತ್ಯ ಎಂದು ಹೇಳಿಕೆ ನೀಡಿದ್ದಾರೆ. ಅಮಿತ್ ಶಾ ರವರು ಮೊದಲ ಅಧಿವೇಶನದಲ್ಲಿ ದೇಶದ ಅಖಂಡತೆಯ ಬಗ್ಗೆ ತೋರಿದ ಒಲವು ನಿಜವಾಗಲೂ ಪ್ರಶಂಸನೀಯ ಎಂದು ಇದೇ ವೇಳೆಯಲ್ಲಿ ಅಮಿತ್ ಶಾ ರವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Post Author: Ravi Yadav