ಮೋದಿಗೆ ನೀಡಿದ ಮತ ಬಡ್ಡಿ ಸಮೇತ ವಸೂಲ್ ! ಐತಿಹಾಸಿಕ ನಿರ್ಧಾರಕ್ಕೆ ನಿರ್ಧಾರ ಮಾಡಿದ ಮೋದಿ-ಅಮಿತ್ ಜೋಡಿ

ಮೋದಿಗೆ ನೀಡಿದ ಮತ ಬಡ್ಡಿ ಸಮೇತ ವಸೂಲ್ ! ಐತಿಹಾಸಿಕ ನಿರ್ಧಾರಕ್ಕೆ ನಿರ್ಧಾರ ಮಾಡಿದ ಮೋದಿ-ಅಮಿತ್ ಜೋಡಿ

ಕಳೆದ ಐದು ವರ್ಷಗಳಲ್ಲಿ ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡರೂ ಸಹ ನರೇಂದ್ರ ಮೋದಿರವರ ಸರ್ಕಾರ ಈ ಬಾರಿಯ ಸರ್ಕಾರಕ್ಕಿಂತ ಕೊಂಚ ನಿಧಾನವಾಗಿ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಗೆ ಹೋಲಿಸಿದರೆ ಕಳೆದ ಬಾರಿ ಬಹಳ ವೇಗವಾಗಿ, ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದ ಮೋದಿ ಸರ್ಕಾರವು ಇದೀಗ ಅಧಿಕಾರದಲ್ಲಿ ಮತ್ತಷ್ಟು ವೇಗವನ್ನು ಹೆಚ್ಚಿಸಿಕೊಂಡು ದೇಶಕ್ಕೆ ಅಗತ್ಯವಿರುವ ಪ್ರತಿಯೊಂದು ಕಾನೂನುಗಳನ್ನು ಜಾರಿಗೆ ತಂದು ದೇಶದ ಕಾನೂನಿನ ವ್ಯವಸ್ಥೆ ಹಾಗೂ ಇಡೀ ದೇಶದಲ್ಲಿ ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿದೆ. ಈಗಾಗಲೇ ಮೊದಲ ಹಂತದ ಅಧಿವೇಶನದಲ್ಲಿಯೇ ಹಲವಾರು ಮಸೂದೆಗಳನ್ನು ಜಾರಿಗೆ ತಂದು ಎಲ್ಲರ ಮನಗೆದ್ದಿರುವ ಮೋದಿ ಅಮಿತ್ ಶಾ ಜೋಡಿಯು ಇದೀಗ ಮತ್ತೊಂದು ನಿರ್ಧಾರದ ಮೂಲಕ ತಮಗೆ ನೀಡಿದ ಮತಕ್ಕೆ ಬಡ್ಡಿ ಸಮೇತ ಕೇವಲ 100 ದಿನಗಳ ಒಳಗಡೆ ವಾಪಸ್ ನೀಡಲು ಸಿದ್ಧವಾಗಿದೆ.

ಈಗಾಗಲೇ ವಿರೋಧಪಕ್ಷದವರು ಅಮಿತ್ ಶಾ ರವರ ಕಾರ್ಯವೈಖರಿಯನ್ನು ಕಂಡು ನೀವು ಮಸೂದೆಗಳನ್ನು ಅಂಗೀಕಾರ ಮಾಡುತ್ತಿದ್ದೀರಾ ಅಥವಾ ಪಿಜ್ಜಾ ಡಿಲೆವರಿ ಮಾಡುತ್ತಿದ್ದೀರಾ ಎಂದು ಟೀಕೆ ಮಾಡುತ್ತಿದ್ದಾರೆ, ಹೀಗಿರುವಾಗ ಇಷ್ಟೆಲ್ಲಾ ಮಸೂದೆಗಳ ನಂತರ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ರವರು ಮುಂದಿನ ವಾರ ಮತ್ತೊಂದು ಐತಿಹಾಸಿಕ ಮಸೂದೆಯನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ಹಿಂದುಗಳ ಕೂಗನ್ನು ಇದೀಗ ಕೊನೆಗೂ ಮೋದಿ ನೇತೃತ್ವದ ಸರ್ಕಾರವು ಕೇಳಿಸಿಕೊಂಡಿದೆ. ಹಲವಾರು ವರ್ಷಗಳ ಸಮಸ್ಯೆಯಾದ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ.

ಹೌದು ನಾವು ಹೇಳಿದ್ದು ಸತ್ಯ ಇನ್ನು ಕೆಲವೇ ಕೆಲವು ದಿನಗಳಲ್ಲಿ ಇಡೀ ರಾಷ್ಟ್ರದಲ್ಲಿ ಮತಾಂತರ ವಿರೋಧಿ ಮಸೂದೆ ಮಂಡನೆಯಾಗಲಿದೆ. ಮುಂದಿನ ಅಧಿವೇಶನದಲ್ಲಿ ಮೋದಿ ನೇತೃತ್ವದ ಸರ್ಕಾರವು ಈ ಆದೇಶ ಹೊರಡಿಸಲು ಸಿದ್ಧವಾಗಿದೆ ಎನ್ನಲಾಗಿದೆ, ಈಗಾಗಲೇ ಜಾರ್ಖಂಡ್, ಮಹಾರಾಷ್ಟ್ರ, ಛತ್ತಿಸ್ಗಢ, ಒಡಿಸ್ಸಾ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಈ ಮಸೂದೆ ಜಾರಿಯಲ್ಲಿದ್ದು ರಾಜ್ಯಮಟ್ಟದಲ್ಲಿ ಮತಾಂತರ ವಿರೋಧಿ ಕಾನೂನು ಗಳನ್ನು ಹೊಂದಿವೆ. ಇದೇ ಮಸೂದೆಯನ್ನು ಇದೀಗ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಮತಾಂತರ ಗಳನ್ನು ತಡೆಗಟ್ಟಲು ಮೋದಿ ಸರ್ಕಾರ ಅಸ್ತ್ರವನ್ನಾಗಿ ಬಳಸಿಕೊಳ್ಳಲಿದೆ.

ಜಾರ್ಖಂಡ್ ಮತಾಂತರಮಸೂದೆ ವಿರೋಧಿ ಕಾನೂನಿನ ಮೇಲೆ ಹೆಚ್ಚು ಆಸಕ್ತಿಯನ್ನು ಹೊಂದಿರುವ ಮೋದಿ ಸರ್ಕಾರವು ಬಹುಶಹ ಜಾರ್ಖಂಡ್ ಮಾದರಿಯನ್ನು ಅನುಸರಣೆ ಮಾಡಿ, ಸಾಮಾನ್ಯ ವಯಸ್ಕರು ಹಾಗೂ ಪಂಗಡದವರಿಗೆ ಮತಾಂತರ ಮಾಡಲು ಪ್ರಯತ್ನ ಪಟ್ಟರೆ ಈ ಮಸೂದೆಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ಮತ್ತು 50,000 ರೂ ದಂಡ, ಮತ್ತು ವ್ಯಕ್ತಿ ಅಪ್ರಾಪ್ತ ವಯಸ್ಕ, ಮಹಿಳೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರಾಗಿದ್ದರೆ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ ದಂಡ ವಿಧಿಲಾಗುತ್ತದೆ. ಈಗಾಗಲೇ ಮಿಷನರಿಗಳು ದಕ್ಷಿಣದ ರಾಜ್ಯದಲ್ಲಿ ವ್ಯಾಪಕವಾದ ಜಾಲವನ್ನು ಹೊಂದಿದ್ದಾರೆ. ಬುಡಕಟ್ಟು ಜನಾಂಗದವರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳ ಭರವಸೆಯೊಂದಿಗೆ ಆಮಿಷ ಒಡ್ಡುತ್ತಿರುವುದನ್ನು ಪರಿಗಣಿಸಿ ಈ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.