ಹಿಂದೂ ಪರಂಪರೆಯ ಬಗ್ಗೆ ದಿಟ್ಟ ಹೆಜ್ಜೆ ಇಡಲು ಮುಂದಾಗುತ್ತದೆಯೇ ಮೋದಿ ಸರ್ಕಾರ?? ಒಮ್ಮೆ ಓದಿ

ಹಿಂದೂ ಪರಂಪರೆಯ ಬಗ್ಗೆ ದಿಟ್ಟ ಹೆಜ್ಜೆ ಇಡಲು ಮುಂದಾಗುತ್ತದೆಯೇ ಮೋದಿ ಸರ್ಕಾರ?? ಒಮ್ಮೆ ಓದಿ

ಜಮ್ಮು ಹಾಗೂಕಾಶ್ಮೀರದಲ್ಲಿ ಇದೀಗ ಶಾಂತಿ ನೆಲೆಸುವಂತೆ ಮಾಡಲು ಮೋದಿ ಸರ್ಕಾರ ಕಠಿಣ ನಿರ್ಧಾರವನ್ನು ತೆಗೆದುಕೊಂಡು ಬಹುತೇಕ ಯಶಸ್ವಿ ಯಾಗಿದೆ. ಹೀಗಿರುವಾಗ ನರೇಂದ್ರ ಮೋದಿ ರವರ ಮುಂದೆ ಮತ್ತಷ್ಟು ಸವಾಲುಗಳು ಎದುರಾಗಿವೆ, ಮೋದಿ ರವರ ನಾಯಕತ್ವದ ಮೇಲೆ ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಒಂದು ಕಡೆ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರ ವನ್ನು ವಾಪಸ್ಸು ಬಹುಬೇಗ ಪಡೆದುಕೊಳ್ಳಿ ಎಂಬ ಧ್ವನಿ ಕೇಳಿ ಬರುತ್ತಿದೆ, ಆದರೆ ಇಷ್ಟಕ್ಕೆ ಮೋದಿ ರವರ ಕೆಲಸ ಮುಗಿಯುವುದಿಲ್ಲ, ಯಾಕೆ ಗೊತ್ತಾ? ಇದೀಗ ಕಾಶ್ಮೀರದಲ್ಲಿ ಮೋದಿ ರವರ ಮೇಲೆ ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಹೌದು, ಜಮ್ಮು ಹಾಗೂ ಕಾಶ್ಮೀರದಲ್ಲಿ ಶಾಂತಿ ನೆಲೆಸಿದರೆ ಸಾಲದು, ಅಲ್ಲಿನ ಜನರಿಗೆ ನಂಬಿಕೆ, ಆದಾಯ ಅಷ್ಟೇ ಅಲ್ಲದೆ ಭಾರತದ ಹಿಂದೂಗಳ ವೈಭವಪೂರಿತ ಕಾಶ್ಮೀರವನ್ನು ಮರಳಿ ನಿರ್ಮಾಣ ಮಾಡುವುದು ಮೋದಿ ಸರ್ಕಾರದ ಮುಂದಿನ ಗುರಿಯಾಗಬೇಕು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ 3 ದಶಕಗಳಿಂದ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಇಸ್ಲಾಮಿಸ್ಟ್ ಪಡೆಗಳು ಕಾಶ್ಮೀರಿ ಪಂಡಿತರ ಅಥವಾ ಹಿಂದೂ ಸಮುದಾಯದ ಎಲ್ಲಾ ಕುರುಹುಗಳನ್ನು ಜಮ್ಮು ಮತ್ತು ಕಾಶ್ಮೀರ ಕಣಿವೆಯಿಂದ ತೆಗೆದುಹಾಕಲು ಪ್ರಯತ್ನಿಸುತ್ತಿವೆ. 1990 ರಲ್ಲಿ ಕಾಶ್ಮೀರಿ ಪಂಡಿತರ ಬಲವಂತದ ನಿರ್ಗಮನದಿಂದ ಈ ದುರ್ಗತಿ ಪ್ರಾರಂಭವಾಯಿತು. ಹೇಗಾದರೂ, ಪಂಡಿತರ ವಲಸೆಯ ನಂತರ,ಜಮ್ಮು ಮತ್ತು ಕಾಶ್ಮೀರದಿಂದ ವೈಭವಪೂರಿತ ಪರಂಪರೆಯನ್ನು ಅಳಿಸುವ ಪ್ರಯತ್ನದಲ್ಲಿ ಜಮ್ಮು ಮತ್ತು ಕಾಶ್ಮೀರದ ಕಣಿವೆಯಲ್ಲಿನ ಹಿಂದೂ ದೇವಾಲಯಗಳ ಸಾಮೂಹಿಕ ನಾಶವನ್ನು ವಿವಿಧ ವರದಿಗಳು ಈಗಾಗಲೇ ಉಲ್ಲೇಖಿಸಿವೆ.2012 ರಲ್ಲಿ, ಆಗಿನ ಬಿಜೆಪಿ ಮೈತ್ರಿ ಸರ್ಕಾರದ, ಬಿಜೆಪಿ ಶಾಸಕರೊಬ್ಬರ ಪ್ರಶ್ನೆಗೆ ರಾಜ್ಯ ವಿಧಾನಸಭೆಯಲ್ಲಿ ಲಿಖಿತ ಉತ್ತರದಲ್ಲಿ “ಕಣಿವೆಯ 438 ದೇವಾಲಯಗಳಲ್ಲಿ, 208 ದೇವಾಲಯಗಳಿಗೆ ಹಾನಿಯಾಗಿದೆ” ಎಂದು ಹೇಳಲಾಗಿದೆ.

ಉಗ್ರರ ಆದೇಶದ ಮೇರೆಗೆ ವಿಧ್ವಂಸಕ ಕೃತ್ಯಗಳು ನಡೆದಿದ್ದು. ಸರ್ಕಾರದ ಪ್ರಕಾರ, ಶ್ರೀನಗರದಲ್ಲಿ 57 ದೇವಾಲಯಗಳು ಹಾನಿಗೊಳಗಾಗಿವೆ, ನಂತರ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ 56 ದೇವಾಲಯಗಳು ಹಾನಿಗೊಳಗಾಗಿವೆ. ಆದರೆ, ಕಣಿವೆಯಲ್ಲಿ ದೇವಾಲಯದ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಕಣಿವೆಯ 436 ದೇವಾಲಯಗಳ ಅಡಿಯಲ್ಲಿ ಒಟ್ಟು 63 ಹೆಕ್ಟೇರ್ ಭೂಮಿ ಇತ್ತು. ಈ ಭೂಮಿಯಲ್ಲಿ ಈವರೆಗೆ ಯಾವುದೇ ಅತಿಕ್ರಮಣ ಪ್ರಕರಣಗಳಿಲ್ಲ ಎಂದು ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಹೇಳಿತ್ತು. ಆದರೆ, ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯ (ಕೆಪಿಎಸ್ಎಸ್) ಸಂಜಯ್ ಟಿಕೂ, ಕಾಶ್ಮೀರಿ ಪಂಡಿತರ ಸಂಘಟನೆಯು ಸರ್ಕಾರಕ್ಕೆಅಂಕಿಅಂಶಗಳನ್ನು ಸಲ್ಲಿಸಿದ ಪ್ರಕಾರ ಸುಮಾರು 550 ದೇವಾಲಯಗಳು ಹಾನಿಗೊಳಗಾಗಿವೆ ಮತ್ತು 50,000 ಹೆಕ್ಟೇರು ಪ್ರದೇಶವನ್ನು ಅತಿಕ್ರಮಿಸಲಾಗಿದೆ ಎಂದು ವರದಿ ನೀಡಿದ್ದರು.

1990 ರ ದಶಕದಲ್ಲಿ ಉಗ್ರಗಾಮಿತ್ವದಿಂದಾಗಿ ಸಾವಿರಾರು ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆಯಬೇಕಾಯಿತು. ಅವರು ಧಾರ್ಮಿಕ ಸ್ಥಳಗಳು ಮತ್ತು ಮನೆಗಳನ್ನು ಬಿಟ್ಟು ದೇಶದ ಇತರ ಭಾಗಗಳಿಗೆ ವಲಸೆ ಹೋಗಿದ್ದರು. ಶ್ರೀನಗರ ಜಿಲ್ಲೆಯ ಕಾಶ್ಮೀರಿ ಪಂಡಿತರ 1,234 ದೇವಾಲಯಗಳಲ್ಲಿ ಸುಮಾರು 75% ನಾಶವಾಗಿದೆ ಎಂದು ವರದಿಗಳು ಹೇಳಿವೆ.. “ದಕ್ಷಿಣ ಕಾಶ್ಮೀರ ಕುಲ್ಗಾಮ್ ಜಿಲ್ಲೆಯಲ್ಲಿ 754 ರಚನೆಗಳಲ್ಲಿ ಸುಮಾರು 85% ಹಾನಿಯಾಗಿದೆ. ಶ್ರೀನಗರ ಜಿಲ್ಲೆಯಲ್ಲಿ ಹೆಚ್ಚಿನ ವಲಸಿಗರು ತಮ್ಮ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ”ಎಂದು ವರದಿಗಳು ಹೇಳಿವೆ.ಈ ಅಂಕಿಅಂಶಗಳು ಅತ್ಯಂತ ಗೊಂದಲ ಮಾಯವಾಗಿದ್ದರೂ ಪಂಡಿತರನ್ನು ಹೊರಹಾಕಿ ಮೆರೆದಾಡಿದ್ದು ಸುಳ್ಳಲ್ಲ, ಉಗ್ರರು ತಮ್ಮ ಧಾರ್ಮಿಕ ಚಿಹ್ನೆಗಳು ಕಣಿವೆಯಲ್ಲಿ ಇರಬೇಕು ಎಂದು ಹಿಂದೂ ದೇವಾಲಯಗಳನ್ನು ನಾಶಪಡಿಸಿದ್ದಾರೆ ಎನ್ನಲಾಗಿದೆ.

ಈಗ ಆರ್ಟಿಕಲ್ 370 ಅನ್ನು ರದ್ದುಪಡಿಸಿದ ನಂತರ ಅಮಿತ್ ಷ ರವರು ಪಂಡಿತರು ಕಣಿವೆಯಲ್ಲಿ ಮರಳಲು ಎಲ್ಲ ಸಿದ್ಧತೆ ಮಾಡುತ್ತಿದ್ದಾರೆ, ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ “ಪರಿಣಾಮಕಾರಿ ನೀತಿ” ರೂಪಿಸುತ್ತಿದ್ದಾರೆ, ಮೂಲಗಳ ಪ್ರಕಾರ , ಕಣಿವೆಯಲ್ಲಿ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರಿಗೆ ಸುರಕ್ಷಿತ ವಸತಿ ಪ್ರದೇಶಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. . ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ಕೇಂದ್ರವು ವಿಶೇಷ ಯೋಜನೆಯನ್ನು ರೂಪಿಸುತ್ತಿದೆ , ಯೋಜನೆಯ ಪ್ರಕಾರ ಕೆಲಸಗಳು ನಡೆದರೆ ಪಂಡಿತರು ಕೆಲವೇ ದಿನಗಳಲ್ಲಿ ವಾಪಸ್ಸು ತೆರಳಿದ್ದಾರೆ. ಆದರೆ ಇಷ್ಟಕ್ಕೆ ಸರ್ಕಾರದ ಕೆಲಸ ಮುಗಿಯುವುದಿಲ್ಲ, ಮೋದಿ ಸರ್ಕಾರವು ತನ್ನ ಭಾಗದಲ್ಲಿ ಕಾಶ್ಮೀರದ ಹಿಂದೂ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಅಂತೆಯೇ, ಈ ಪರಂಪರೆಯನ್ನು ಪುನಃಸ್ಥಾಪಿಸುವವರೆಗೆ ಕಾಶ್ಮೀರಿ ಪಂಡಿತರ ಯಶಸ್ವಿ ಮರಳುವಿಕೆ ಯಾವಾಗಲೂ ಅಪೂರ್ಣವಾಗಿರುತ್ತದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.