ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿತ್ತು ಸತ್ಯ, ಸಿದ್ದರಾಮಯ್ಯ ರವರಿಗೆ ಬಾರಿ ಮುಜುಗರ

ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿತ್ತು ಸತ್ಯ, ಸಿದ್ದರಾಮಯ್ಯ ರವರಿಗೆ ಬಾರಿ ಮುಜುಗರ

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾ ಸತ್ಯತೆ ಬಹಳ ಸುಲಭವಾಗಿ ಹೊರಬೀಳುತ್ತದೆ. ಯಾವ ರಾಜಕಾರಣಿಯೂ ಜನರ ಕಣ್ಣನ್ನು ತಪ್ಪಿಸಿ ಯಾವುದೇ ನಡೆ ಇಡಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಿದ ನಂತರ ಸಾಮಾಜಿಕ ಜಾಲತಾಣಗಳ ಬಳಕೆ ಮತ್ತಷ್ಟು ಹೆಚ್ಚಾಗಿದೆ. ಇದೀಗ ಈ ವಿಷಯ ಯಾಕೆ ಎಂದು ಕೇಳುತ್ತೀರಾ?? ಇದೀಗ ಇದೇ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ರವರಿಗೆ ಬಾರಿ ಮುಜುಗರ ಉಂಟಾಗಿದೆ, ಯಡಿಯೂರಪ್ಪನವರನ್ನು ಟೀಕೆ ಮಾಡಿ ನಲ್ಲಿ ಟ್ವಿಟರ್ನಲ್ಲಿ ಬಾರಿ ಆಕ್ರೋಶವನ್ನು ವ್ಯಕ್ತಪಡಿಸಿದ ನಂತರ ಸತ್ಯ ಬಯಲಾಗಿರುವುದು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಬಾರಿ ಮುಜುಗರವನ್ನು ಉಂಟು ಮಾಡಿದೆ. ಸುಖಾಸುಮ್ಮನೆ ಯಡಿಯೂರಪ್ಪನವರನ್ನು ಜರಿದಿದ್ದ ಕಾರಣ ನಮೋ ಭಕ್ತರು ರೊಚ್ಚಿಗೆದ್ದಿದ್ದಾರೆ.

ಯಡಿಯೂರಪ್ಪನವರು ಉತ್ತರ ಕರ್ನಾಟಕದಲ್ಲಿ ಸತತ ಮೂರುದಿನಗಳಿಂದ ವಾಸ್ತವ್ಯ ಹೂಡಿದರು ಸಹ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಯಡಿಯೂರಪ್ಪನವರು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಹಾಗೂ ಉತ್ತರ ಕರ್ನಾಟಕದ ಜನತೆಯ ಬೆಂಬಲಕ್ಕೆ ನಿಂತಿಲ್ಲ ಎಂದು ಕಿಡಿಕಾರಿದ್ದರು. ಅಷ್ಟೇ ಅಲ್ಲದೆ ತಮಗೆ ಅನಾರೋಗ್ಯದ ಕಾರಣ ತಾವು ಉತ್ತರ ಕರ್ನಾಟಕಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟರ್ನಲ್ಲಿ ಅಸಹಾಯಕತೆಯನ್ನೂ ವ್ಯಕ್ತಪಡಿಸಿದರು. ಆದರೆ ಸಿದ್ದರಾಮಯ್ಯರವರು ಇಷ್ಟೆಲ್ಲಾ ಮಾಡಿದ ನಂತರ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಸಭೆಗಳಿಗೆ ಹಾಜರಾಗಿದ್ದಾರೆ, ಈ ವಿಷಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದಿದ್ದು ಅನಾರೋಗ್ಯವಿದ್ದರೂ ಕಾಂಗ್ರೆಸ್ ಪಕ್ಷದ ಸಭೆಗೆ ಹೋಗಲು ಸಾಧ್ಯವಾಗುತ್ತದೆ.ಆದರೆ ಉತ್ತರ ಕರ್ನಾಟಕದ ಶಾಸಕರಾಗಿರುವ ಸಿದ್ದರಾಮಯ್ಯನವರಿಗೆ ಉತ್ತರ ಕರ್ನಾಟಕದ ಕಡೆ ತಿರುಗಿ ನೋಡಲು ಮಾತ್ರ ಸಾಧ್ಯವಿಲ್ಲ ಎಂದು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.