ಪ್ರತಾಪ್ ಸಿಂಹ- ಪಿಯೂಷ್ ಗೊಯಲ್ ಜುಗಲ್ಬಂದಿ – ಮೈಸೂರಿಗೆ ಮತ್ತೊಂದು ಗುಡ್ ನ್ಯೂಸ್

ಪ್ರತಾಪ್ ಸಿಂಹ- ಪಿಯೂಷ್ ಗೊಯಲ್ ಜುಗಲ್ಬಂದಿ – ಮೈಸೂರಿಗೆ ಮತ್ತೊಂದು ಗುಡ್ ನ್ಯೂಸ್

ಕರ್ನಾಟಕ ರಾಜ್ಯದ ಯುವ ಸಂಸದ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ರವರ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ. ಹೀಗಾಗಲೇ ಹಲವು ಬಾರಿ ಮೋಡಿ ಮಾಡಿರುವ ಈ ಜೋಡಿ ಈದೀಗ ಮತ್ತೊಮ್ಮೆ ಮೈಸೂರು ಜನರಿಗೆ ಸಿಹಿ ಸುದ್ದಿ ನೀಡಿದೆ. ಯುವ ಸಂಸದರಾದ ಪ್ರತಾಪ್ ಸಿಂಹ ರವರು ಎರಡನೇ ಬಾರಿ ಆಯ್ಕೆಯಾದ ಮೇಲೆ ಜನರು ಯಾಕೆ ತಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಸಾರಿ ಹೇಳುವಂತೆ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈದೀಗ ಮತ್ತೊಂದು ವಿಚಾರವಾಗಿ ಕೇಂದ್ರ ಸರ್ಕಾರದ ಕದ ತಟ್ಟಿದ್ದ ಪ್ರತಾಪ್ ಸಿಂಹ ರವರಿಗೆ ಪಿಯೂಷ್ ಘೋಯಲ್ ರವರು ನಿರಾಸೆ ಮಾಡಿಲ್ಲ. ಇದರಿಂದ ಹಲವಾರು ವರ್ಷಗಳಿಂದ ಎಲ್ಲರ ಬೇಡಿಕೆಯಾಗಿದ್ದ ಆಸೆ ಈಡೇರಲಿದೆ. ಅಷ್ಟೇ ಅಲ್ಲದೆ ಕೇರಳ ರಾಜ್ಯದಿಂದ ಮೈಸೂರು ಹಾದಿ ಸುಗಮವಾಗಲಿದ್ದು, ಮತ್ತಷ್ಟು ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಿದಂತಾಗುತ್ತದೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ???

ಈ ಹಿಂದೆ ಹಲವಾರು ವರ್ಷಗಳಿಂದ ಮೈಸೂರು ಪ್ರವಾಸಿಗರ ಇಷ್ಟದ ತಾಣವಾದರೂ ಸಹ ಸರಿಯಾದ ಸಂಪರ್ಕವಿಲ್ಲದೆ ಅದೆಷ್ಟೋ ಜನ ಭೇಟಿ ನೀಡಲು ಕಷ್ಟ ಎಂದು ಬೇರೆ ಪ್ರದೇಶಗಳ ಕಡೆ ಆಕರ್ಷಣೆಗೊಂಡು ಮೈಸೂರಿನ ಪ್ರವಾಸವನ್ನು ಮುಂದೂಡುತ್ತಿದ್ದರು. ಮೈಸೂರಿನ ಸಂಪೂರ್ಣ ಅಭಿವೃದ್ಧಿಯ ಮೇಲೆ ಪ್ರವಾಸೋದ್ಯಮ ತನ್ನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿತ್ತು, ಮೈಸೂರಿನ ಪ್ರಮುಖ ಆದಾಯದ ಸ್ಥಾನದಲ್ಲಿ ಮೊದಲೇ ಸಾಲಿನಲ್ಲಿ ಕಂಡು ಬರುವ ಪ್ರವಾಸೋದ್ಯಮಕ್ಕೆ ಸಂಪರ್ಕ ಮಾರ್ಗಗಳು ಸರಿಯಾಗಿ ಇರಲಿಲ್ಲ. ಈದೀಗ ಜನರು ಇನ್ನು ಮುಂದೆ ಈ ನೆಪ ಹೊಡ್ಡಿ ಮೈಸೂರಿನ ಪ್ರವಾಸವನ್ನು ಮುಂದೂಡುವ ಹಾಗೇ ಇಲ್ಲ ಯಾಕೆಂದರೆ ಇಲ್ಲಿನ ಸಂಸದ ಪ್ರತಾಪ್ ಸಿಂಹರವರು ಮೈಸೂರಿನ ಜನರ ಕಷ್ಟವನ್ನು ಅರಿತು, ಎಲ್ಲ ರೀತಿಯ ಪರಿಹಾರ ನೀಡಿದ್ದಾರೆ.

ಕರ್ನಾಟಕ ರಾಜ್ಯದ ಯುವ ಸಂಸದ ಪ್ರತಾಪ್ ಸಿಂಹ ರವರು ಅಧಿಕಾರ ಸ್ವೀಕರಿಸಿದ ವೇಳೆಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು, ಮೈಸೂರು ಅಭಿವೃದ್ಧಿ ಹೊಂದುತ್ತಿದ್ದರೂ, ಪ್ರವಾಸಿಗರ ನೆಚ್ಚಿನ ತಾಣವಾದರೂ ಸಹ ದಕ್ಷಿಣ ರಾಜ್ಯಗಳ ಪ್ರಮುಖ ನಗರಗಳಿಂದ ಯಾವುದೇ ನೇರ ಸಂಪರ್ಕ ಮಾರ್ಗವಿರಲಿಲ್ಲ, ಇದರಿಂದ ಮೈಸೂರು ಅದೆಷ್ಟೋ ಪ್ರವಾಸಿಗರನ್ನು ಕಳೆದುಕೊಂಡಿತ್ತು. ಕೂಡಲೇ ಈ ವಿಷಯವನ್ನು ಬಹಳ ಗಂಭೀರವಾಗಿ ಸ್ವೀಕರಿಸಿದ ಪ್ರತಾಪ್ ಸಿಂಹ ರವರು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ರವರ ಜೊತೆ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ತಮ್ಮದೇ ಆದ ಕಾರ್ಯ ಸೂಚಿಗಳ ಮೂಲಕ ಕೇಂದ್ರದ ಗಮನ ಸೆಳೆದು ಮೈಸೂರಿಗೆ ಈದೀಗ ದಕ್ಷಿಣದ ಎಲ್ಲ ಪ್ರಮುಖ ರಾಜ್ಯಗಳಿಂದ ಸಂಪರ್ಕ ಕಲ್ಪಿಸಿದ್ದಾರೆ.

ಹೌದು ಈ ಹಿಂದೆ, ಹೈದರಾಬಾದ್, ಚೆನ್ನೈ ನಗರಗಳಿಂದ ಮೈಸೂರಿಗೆ ರೈಲಿನ ಸಂಪರ್ಕ ಕಲ್ಪಿಸಿದ್ದ ಪಿಯೂಷ್ ಹಾಗೂ ಪ್ರತಾಪ್ ಸಿಂಹ ಜೋಡಿ ಇದೀಗ ಕೊಚ್ಚುವೆಲಿ – ಬೆಂಗಳೂರು ನಡುವಿನ ಎಕ್ಸ್ಪ್ರೆಸ್ ರೈಲನ್ನು ಮೈಸೂರಿನ ವರೆಗೂ ವಿಸ್ತರಿಸಿ ಪ್ರವಾಸಿಗರಿಗೆ ಮತ್ತಷ್ಟು ಅನುಕೂಲ ಮಾಡಲು ನಿರ್ಧಾರ ಮಾಡಿ ಆದೇಶ ಹೊರಡಿಸಿದ್ದಾರೆ, ಇದರಿಂದ ದಿನ ನಿತ್ಯ ಬೆಂಗಳೂರು ಹಾಗೂ ಮೈಸೂರಿನ ನಡುವೆ ಪ್ರಯಾಣ ಮಾಡುವ ಕೆಲಸಗಾರರಿಗೆ ಸಹ ಉಪಯೋಗವಾಗಲಿದೆ. ಇದೆ ತಿಂಗಳ ಕೊನೆಯಲ್ಲಿ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಈ ಕಾರ್ಯಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎಂಬುದು ಖಚಿತವಾಗಿದೆ. ಒಟ್ಟಿನಲ್ಲಿ ಇದೀಗ ಮೈಸೂರು ದಕ್ಷಿಣ ರಾಜ್ಯಗಳ ಪ್ರಮುಖ ನಗರಗಳಿಂದ ನೇರ ಸಂಪರ್ಕ ಪಡೆದುಕೊಂಡಿದೆ. ಇದೆ ನಿಟ್ಟಿನಲ್ಲಿ ಉಡಾನ್-೩ ಯೋಜನೆಯ ಅಡಿಯಲ್ಲಿ ಕೊಚ್ಚಿ-ಮೈಸೂರು ನಡುವೆ ವಿಮಾನ ಸಂಪರ್ಕ ಕಲ್ಪಿಸಿದ್ದ ಪ್ರತಾಪ್ ಸಿಂಹ ರವರ ಕಾರ್ಯವನ್ನು ನಾವು ಇಲ್ಲಿ ಸ್ಮರಿಸಬಹುದು.