ಬಿಚ್ಚಿದ್ದ ಬಾಲ ಮುದುರಿಕೊಂಡು ಭಾರತದ ಪರ ನಿಂತು ಪಾಕಿಸ್ತಾನಕ್ಕೆ ಶಾಕ್ ನೀಡಿದ ಟ್ರಂಪ್

ಬಿಚ್ಚಿದ್ದ ಬಾಲ ಮುದುರಿಕೊಂಡು ಭಾರತದ ಪರ ನಿಂತು ಪಾಕಿಸ್ತಾನಕ್ಕೆ ಶಾಕ್ ನೀಡಿದ ಟ್ರಂಪ್

ಇತ್ತೀಚಿಗೆ ಅಮೇರಿಕ ದೇಶದ ಅಧ್ಯಕ್ಷ ಟ್ರಂಪ್ ರವರು ಭಾರತದ ವಿರುದ್ಧ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಭಾರತದ ಮತ್ತೊಂದು ಆಪ್ತ ರಾಷ್ಟ್ರವಾದ ರಷ್ಯಾ ದೇಶದ ಜೊತೆ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳಲು ಮುಂದಾದ ಕಾರಣ ಭಾರತದ ಮೇಲೆ ಸಿಟ್ಟಾಗಿದ್ದ ಟ್ರಂಪ್ ರವರು ರಷ್ಯಾ ದೇಶದ ಜೊತೆ ಈ ಕೂಡಲೇ ಒಪ್ಪಂದ ಮುರಿದುಕೊಳ್ಳಿ, ಇಲ್ಲವಾದರೆ ಆರ್ಥಿಕ ದಿಗ್ಬಂದನ ಹಾಗೂ ಅಮೇರಿಕ ದೇಶದ ಸ್ನೇಹವನ್ನು ಕಳೆದುಕೊಳ್ಳುತ್ತೀರಾ, ನಿಮಗೆ ರಕ್ಷಣೆ ಮುಖ್ಯವಾದರೆ ನಮ್ಮ ಜೊತೆ ಒಪ್ಪಂದ ಮಾಡಿಕೊಳ್ಳಿ, ನಿಮಗೆ ಬೇಕಾದ ಶಸ್ತ್ರಾಸ್ತ್ರಗಳನ್ನೂ ನಾವು ಸಹ ಪೂರೈಕೆ ಮಾಡಲು ಸಿದ್ದರಿದ್ದೇವೆ ಎಂದಿದ್ದರು.

ಆದರೆ ಭಾರತ ದೇಶವು ಈಗಾಗಲೇ ರಷ್ಯಾ ದೇಶದ ಜೊತೆ ಒಪ್ಪಂದಕ್ಕೆ ಸಹಿ ಮಾಡಿದ್ದ ಕಾರಣ ಹಾಗೂ ರಷ್ಯಾ ದೇಶದ ಕ್ಷಿಪಣಿಗಳಿಗೆ ಹೋಲಿಸಿದರೆ ಅಮೇರಿಕ ದೇಶದ ಕ್ಷಿಪಣಿಗಳ ಸಾಮರ್ಥ್ಯ ಕಡಿಮೆ ಇದ್ದ ಕಾರಣ, ದೇಶ ಮೊದಲು ಎಂಬ ನಿಲವನ್ನು ಹೊಂದಿರುವ ಮೋದಿ ರವರು ಟ್ರಂಪ್ ರವರ ಎಚ್ಚರಿಕೆಗೆ ಯಾವುದೇ ಕಿಮ್ಮತ್ತು ನೀಡದೆ, ರಷ್ಯಾ ದೇಶದ ಜೊತೆ ಮಾತುಕತೆ ಮುಂದುವರಿಸಿದ್ದರು. ಅಷ್ಟೇ ಅಲ್ಲದೆ ಅಮೇರಿಕ ಜೊತೆ ಇನ್ನೇನು ಅತ್ಯಾಧುನಿಕ ಡ್ರೋನ್ ಗಳನ್ನೂ ಆಮದು ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತದೆ ಎನ್ನುವಷ್ಟರಲ್ಲಿ ಇರಾನ್ ದೇಶ ಈ ಡ್ರೋನ್ ಅನ್ನು ಬಹಳ ಸುಲಭವಾಗಿ ಹೊಡೆದುರುಳಿಸಿದ್ದ ಕಾರಣ, ಡ್ರೋನ್ ಆಮದು ಮಾಡಿಕೊಳ್ಳದೆ ಇರಲು ಮೋದಿ ನಿರ್ಧಾರ ಮಾಡಿದ್ದರು, ಇದು ಟ್ರಂಪ್ ರವರ ಕಣ್ಣನ್ನು ಮತ್ತಷ್ಟು ಕೆಂಪಗೆ ಮಾಡಿತ್ತು. ಈ ಎಲ್ಲ ನಡೆವಳಿಕೆಯಿಂದ ಭಾರತದ ವಿರುದ್ಧ ಟ್ರಂಪ್ ಸಿಡಿದೆದ್ದಿದ್ದರು, ತೆರಿಗೆ ವಿನಾಯಿತಿ ತೆಗೆದರು, ಅಂತಾರಾಷ್ತ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ನಿರ್ಧಾರ ಕೈಗೊಳ್ಳುವ ಬೆದರಿಕೆ ಹಾಕಿದ್ದರು, ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದ್ಯಾವುದಕ್ಕೂ ಜಗ್ಗಲಿಲ್ಲ.

ಇದರಿಂದ ಮತ್ತಷ್ಟು ಕೆರಳಿದ ಟ್ರಂಪ್ ರವರು ಪಾಕಿಸ್ತಾನದ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ, ಕಡಿಮೆ ಬೆಳೆಗೆ F -16 ಯುದ್ಧ ವಿಮಾನಗಳನ್ನು ನೀಡಲು ಒಪ್ಪಿಗೆ ನೀಡಿದರು, ಅಷ್ಟೇ ಅಲ್ಲದೆ ಇನ್ನು ಸಹಾಯ ಅಸ್ತ ಚಾಚುವುದ್ದಾಗಿ ಹೇಳಿಕೆ ನೀಡಿ ಭಾರತದ ವಿರುದ್ಧ ಪರೋಕ್ಷ ಕತ್ತಿ ಮಸೆಯುತ್ತಿದ್ದರು, ಮತ್ತು ಕಾಶ್ಮೀರದ ಕುರಿತು ಪಾಕಿಸ್ತಾನದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮೋದಿ ಕೇಳಿಕೊಂಡಿದ್ದಾರೆ ಎಂದೆಲ್ಲ ಹೇಳಿಕೆ ನೀಡಿದ್ದರು, ಈ ಹೇಳಿಕೆ ಬರುವ ವರೆಗೂ ಶಾಂತ ಸ್ವರೂಪಿಯಾಗಿದ್ದ ಕೇಂದ್ರ ಸರ್ಕಾರ, ಟ್ರಂಪ್ ರವರ ಹೇಳಿಕೆಗೆ ಸರಿಯಾದ ತಿರುಗೇಟು ನೀಡಿ, ನಾವು ಯಾರ ಜೊತೆಗೂ ಒಪ್ಪಂದ ಅಥವಾ ಮಾತುಕತೆಗೆ ತಯಾರಿಲ್ಲ, ಕಾಶ್ಮೀರ ಎಂದರು ಕೇವಲ ಭಾರತದ ಬಳಿ ಈಗ ಇರುವ ಕಾಶ್ಮೀರ ಅಲ್ಲ, ಪಾಕ್ ಆಕ್ರಮಿತ ಕಾಶ್ಮೀರ ಕೂಡ ಸೇರಿಸುತ್ತೇವೆ ಎಂದು ತಿರುಗೇಟು ನೀಡಿದರು.

ಕೊನೆಗೆ ಯಾವುದೇ ಕಾರಣಕ್ಕೂ ಜಗ್ಗದ ಭಾರತ ಉತ್ತರ ನೋಡಿ ಈದೀಗ ಟ್ರಂಪ್ ಮೆತ್ತಗಾಗಿದ್ದರೆ, ಇಷ್ಟು ದಿವಸ ಪಾಕಿಸ್ತಾನದ ಪರ ನಿಂತಿದ್ದ ಟ್ರಂಪ್ ರವರು ಈದೀಗ ಭಾರತದ ಪರ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ನಾನಮಾನವನ್ನು ರದ್ದು ಮಾಡಿ ಆದೇಶ ಹೊರಡಿಸಿದ ನಂತರ ಭಾರತದ ವಿರುದ್ಧ ಮತ್ತಷ್ಟು ಕೋಪಗೊಂಡಿರುವ ಪಾಕಿಸ್ತಾನವು ತನ್ನದೇ ಊಟಕ್ಕೆ ಕಲ್ಲು ಹಾಕಿಕೊಳ್ಳುವಂತಹ ನಿರ್ದಾರ ಮಾಡಿ ರಾಜತಾಂತ್ರಿಕ ವ್ಯವಹಾರಗಳನ್ನು ರದ್ದುಗೊಳಿಸಿ, ಭಾರತದ ಜೊತೆ ಇನ್ನು ಮುಂದೆ ಯಾವುದೇ ವ್ಯಾಪಾರ ಅಥವಾ ವಹಿವಾಟು ಇಲ್ಲವೆಂದು ಘೋಷಣೆ ಮಾಡಿ, ಏಕೈಕ ರೈಲನ್ನು ನಿಲ್ಲಿಸಿ, ವಾಯು ಗಡಿಯನ್ನು ಮುಚ್ಚಲು ಚಿಂತನೆ ಮಾಡಿ ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿದೆ.

ಈ ಎಲ್ಲ ಬೆಳವಣಿಗೆಗಳನ್ನು ಟ್ರಂಪ್ ಸೂಕ್ಷ್ಮವಾಗಿ ಗಮನಿಸುತ್ತಿರುವ  ಟ್ರಂಪ್ ರವರು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. ಈ ಮೂಲಕ ಪಾಪ ಟ್ರಂಪ್ ನಮ್ಮ ಸಹಾಯಕ್ಕೆ ಇದ್ದಾರೆ ಎಂದು ಬಾಲ ಬಿಚ್ಚಿದ್ದ ಇಮ್ರಾನ್ ಖಾನ್ ರವರಿಗೆ ಶಾಕ್ ನೀಡಿದ್ದಾರೆ. ಪಾಕಿಸ್ತಾನಕ್ಕೆ ಯಾವುದೇ ಪ್ರತಿಕಾರದ ಆಕ್ರಮಣ ಶೀಲತೆ ಭಾರತದ ವಿರುದ್ಧ ತೋರಬೇಡಿ, ಬದಲಾಗಿ ನಿಮ್ಮದೇ ನೆಲದಲ್ಲಿ ಅಡಗಿರುವ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಅಷ್ಟೇ ಅಲ್ಲದೆ ಭಾರತಕ್ಕೆ ನುಸುಳುವಿಕೆಗೆ ನೀಡುತ್ತಿರುವ ಬೆಂಬಲ ನಿಲ್ಲಿಸಿ, ಕಡಿವಾಣ ಹಾಕಿ ಎಂದು ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.