ಬಿಗ್ ನ್ಯೂಸ್: ಮೋದಿ ರವರ ನಿರ್ಧಾರದ ಕುರಿತು ಷಾಕಿಂಗ್ ಹೇಳಿಕೆ ನೀಡಿದ ಕೆ ಸ್ ಭಗವಾನ್, ! ಇದಲ್ಲವೇ ಅಚ್ಚೇ ದಿನ್??

ಬಿಗ್ ನ್ಯೂಸ್: ಮೋದಿ ರವರ ನಿರ್ಧಾರದ ಕುರಿತು ಷಾಕಿಂಗ್ ಹೇಳಿಕೆ ನೀಡಿದ ಕೆ ಸ್ ಭಗವಾನ್, ! ಇದಲ್ಲವೇ ಅಚ್ಚೇ ದಿನ್??

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ನರೇಂದ್ರ ಮೋದಿ ಅವರು ಯಾವುದೇ ಹೆಜ್ಜೆಗಳನ್ನು ಇಟ್ಟರು ಕೇವಲ ನರೇಂದ್ರ ಮೋದಿ ಅವರನ್ನು ದೂಷಿಸುವ ಉದ್ದೇಶದಿಂದ ಭಾರತದಲ್ಲಿ ಹಲವಾರು ಜನ ಆ ಕಾರ್ಯದ ವಿರುದ್ಧ ಧ್ವನಿಯೆತ್ತಿ ನರೇಂದ್ರ ಮೋದಿ ಅವರು ಮಾಡುತ್ತಿರುವುದು ತಪ್ಪು ಎಂದು ಪ್ರತಿಪಾದಿಸುತ್ತಾರೆ. ಅದರಲ್ಲಿಯೂ ನರೇಂದ್ರಮೋದಿಯವರು ಆರ್ಎಸ್ಎಸ್ ಕಾರ್ಯಕರ್ತರಾಗಿರುವ ಕಾರಣ, ಆರ್ ಎಸ್ ಎಸ್ ಸಂಘ ಸಂಸ್ಥೆಯನ್ನು ವಿರೋಧಿಸುವ ಹಲವಾರು ಜನ ನರೇಂದ್ರ ಮೋದಿ ಅವರನ್ನು ಉತ್ತಮ ಪ್ರಧಾನಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಡುತ್ತಾರೆ. ಈ ರೀತಿಯ ವಿರೋಧಿಗಳಲ್ಲಿ ಮೊದಲ ಸಾಲಿನಲ್ಲಿ ಕಂಡುಬರುತ್ತಾರೆ ಕೆಎಸ್ ಭಗವಾನ್, ಮೋದಿ ರವರ ಪರಮ ವಿರೋಧಿಯಾಗಿರುವ ಕೆಎಸ್ ಭಗವಾನ್ ರವರು ಇದೀಗ ಅಚ್ಚರಿ ಮೂಡಿಸುವಂತಹ ಪತ್ರ ಬರೆದಿದ್ದಾರೆ.

ಮೋದಿ ನೇತೃತ್ವದ ಸರಕಾರವು ಇದೀಗ ಇತಿಹಾಸದಲ್ಲಿ ಎಂದೂ ಕಂಡಿರದ ಕಠಿಣ ನಿಲುವನ್ನು ಪ್ರದರ್ಶನ ಮಾಡಿ ದೇಶಕ್ಕೆ ಕಂಟಕವಾಗಿದ್ದ ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದೆ. ಹಲವಾರು ಜನ ಇದನ್ನು ಪಕ್ಷ ಭೇದ ಮರೆತು ನರೇಂದ್ರ ಮೋದಿರವರ ಕಾರ್ಯಕ್ಕೆ ಶ್ಲಾಘನೆ ಮಾಡುತ್ತಿದ್ದಾರೆ. ಕೆಲವರು ಮಾತ್ರ ಈ ಕಾರ್ಯವನ್ನು ವಿರೋಧ ಮಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ, ಇಂತಹ ಸಮಯದಲ್ಲಿ ಕೆಎಸ್ ಭಗವಾನ್ ಅವರು ನರೇಂದ್ರ ಮೋದಿ ರವರ ಕುರಿತು ಪತ್ರವೊಂದನ್ನು ಬರೆದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡತೊಡಗಿದೆ, ಅದರ ಕುರಿತು ಭಗವಾನ್ ಅವರನ್ನು ಸಂಪರ್ಕಿಸಿದಾಗ ಹೌದು ಈ ಪತ್ರ ನಾನೇ ಬರೆದಿದ್ದು ಎಂದು ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ ಆ ಪತ್ರದಲ್ಲಿ ಏನಿದೆ ಗೊತ್ತಾ?? ಸಂಪೂರ್ಣ ವಿವರ ಹಾಗೂ ಪತ್ರದ ಪ್ರತಿಗಾಗಿ ಕೆಳಗಡೆ ನೋಡಿ

ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಿರುವ ಕೆ ಎಸ್ ಭಗವಾನ್ ರವರು ನರೇಂದ್ರ ಮೋದಿ ರವರಿಗೆ ಜೈ, ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಡೆಯನ್ನು ನಾನು ಮನಃಪೂರ್ವಕವಾಗಿ ಸ್ವಾಗತಿಸುತ್ತೇನೆ. ಕಳೆದ 72 ವರ್ಷಗಳಿಂದ ಅನುಭವಿಸುತ್ತಿದ್ದ ಸಂಕಟಕ್ಕೆ ಇಂದು ಮುಕ್ತಿ ಸಿಕ್ಕಿದೆ, ಈ ಕುರಿತು ನರೇಂದ್ರ ಮೋದಿರವರ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದರು. ಇಡೀ ದೇಶವನ್ನೂ ಒಂದೇ ಸಂವಿಧಾನದ ಅಡಿಯಲ್ಲಿ ತರುವ ಮೂಲಕ ಮೋದಿಯವರು ತಮ್ಮ ಹೆಸರು ಭಾರತದ ಇತಿಹಾಸದಲ್ಲಿ ಅಜರಾಮರವಾಗುವಂತೆ ಮಾಡಿದ್ದಾರೆ. ಅವರ ಈ ನಡೆಯ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಭಗವಾನ್ ಹೇಳಿದ್ದಾರೆ. ಈ ವಿಷಯ ಖಚಿತಪಡಿಸಿಕೊಳ್ಳಲು ದೇಶದ ಪ್ರತಿಷ್ಠಿತ ಸಂಸ್ಥೆಯಾದ ಒನ್ ಇಂಡಿಯಾ ಪ್ರತಿನಿಧಿ ರವರು ಭಗವಾನ್ ಅವರನ್ನು ಸಂಪರ್ಕಿಸಿದಾಗ ಹೌದು ಈ ಪತ್ರ ನಾವೇ ಬರೆದಿದ್ದು ಎಂದು ಕುದ್ದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕೆ.ಎಸ್. ಭಗವಾನ್ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಯಥಾವತ್ ಪ್ರತಿ ಇಲ್ಲಿದೆ.

“ಸುಮಾರು 72 ವರ್ಷಯಗಳಿಂದ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರದ ಜನತೆಯಲ್ಲಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಯವರು ಆರ್ಟಿಕಲ್ 370 ಅನ್ನು ರದ್ದು ಮಾಡುವ ಮೂಲಕ ರಾಷ್ಟ್ರವನ್ನು ಸಂತಸಪಡಿಸಿದ್ದಾರೆ. ಪ್ರತಿದಿನ ಏನಿಲ್ಲ ಅಂದರೂ 7-8 ಕೋಟಿ ರೂಪಾಯಿಗಳು ವ್ಯರ್ಥವಾಗಿ ಖರ್ಚಾಗುತ್ತಿದ್ದವು. ಅದನ್ನು ಜನತೆಯ ಕಲ್ಯಾಣಕ್ಕಾಗಿ ಅಭಿವೃದ್ಧಿಗಾಗಿ ಇನ್ನು ಮುಂದೆ ಬಳಸಲು ಅನುಕೂಲವಾಗುತ್ತದೆ. ಆರ್ಟಿಕಲ್ 370 ಅನ್ನು ರದ್ದು ಮಾಡುವುದರ ಮುಖಾಂತರ ಪ್ರಧಾನಿ ಮೋದಿ ಮತ್ತು ಅವರ ಕೇಂದ್ರ ಸರ್ಕಾರ ಇಡೀ ದೇಶವನ್ನು ಒಂದೇ ಸಂವಿಧಾನದಡಿ ತಂದಿರುವುದು ಬಹಳ ಶ್ಲಾಘನೀಯವಾದ ಕಾರ್ಯ, ಇದಕ್ಕಾಗಿ ಇಡೀ ರಾಷ್ಟ್ರ ಕಾಯುತ್ತಿತ್ತು. ಸನ್ಮಾನ್ಯ ಮೋದಿ ಅವರು ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುತ್ತಾರೆ ಎನ್ನಲು ಸಂತೋಷ ಮತ್ತು ಹೆಮ್ಮೆ ಆಗುತ್ತದೆ. ಜೈ ನರೇಂದ್ರ ಮೋದಿ”

-ಕೆ.ಎಸ್.ಭಗವಾನ್

ವಿಚಾರವಾದಿಗಳು ಹಾಗೂ ಸಾಹಿತಿಗಳು