ಕಾಶ್ಮೀರ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ದೇಶಭಕ್ತರನ್ನು ಕೆಣಕಿದ ಗುಂಡೂರಾವ್ ! ರೊಚ್ಚಿಗೆದ್ದ ಜನ ! ಅಷ್ಟಕ್ಕೂ ಅವರು ಏನು ಹೇಳಿದರು ಗೊತ್ತಾ??

ಕಾಶ್ಮೀರ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ದೇಶಭಕ್ತರನ್ನು ಕೆಣಕಿದ ಗುಂಡೂರಾವ್ ! ರೊಚ್ಚಿಗೆದ್ದ ಜನ ! ಅಷ್ಟಕ್ಕೂ ಅವರು ಏನು ಹೇಳಿದರು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ಬಿಜೆಪಿ ಪಕ್ಷವು ಜಮ್ಮು ಹಾಗೂ ಕಾಶ್ಮೀರ ವಿಚಾರದಲ್ಲಿ ಕಠಿಣ ನಿಲುವನ್ನು ಹೊಂದಿದೆ, ಬಿಜೆಪಿ ಪಕ್ಷ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದಂತೆ ಇಂದು ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದುಕೊಂಡಿದೆ. ಇಂತಹ ಸಮಯದಲ್ಲಿ ಮೊದಲಿನಿಂದಲೂ ಇದಕ್ಕೆ ವಿರೋಧ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದಿಂದ ಸಾಮಾನ್ಯವಾಗಿ ವಿರೋಧದ ಕೂಗು ಕೇಳಿಬಂದಿದೆ. ಸತ್ಯ ಹೇಳ್ತೇವೆ, ಈ ಹೇಳಿಕೆ ಕಂಡರೆ ಇಮ್ರಾನ್ ಖಾನ್ ಖುಷಿ ಬೀಳ್ತಾರೆ.

ಆದರೆ ದಿನೇಶ್ ಗುಂಡೂರಾವ್ ರವರು ನೀಡಿದ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ಹೇಳಿಕೆಯಿಂದ ಜನರು ಸಾಮಾಜಿಕ ಜಾಲತಾಣಗಳಲ್ಲಿ ರೊಚ್ಚಿಗೆದ್ದಿದ್ದಾರೆ, ಬಿಜೆಪಿ ಪಕ್ಷದ ಶಾಸಕ ಸುರೇಶ ಕುಮಾರ್ ರವರು ಸಹ ಇವರು ಯಾಕೆ ನೆರೆಯ ರಾಷ್ತ್ರ ದಂತೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ. . ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ವನ್ನು ರದ್ದು ಮಾಡಿರುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದಿನೇಶ್ ಗುಂಡೂರಾವ್ ರವರು ಈ ರೀತಿ ಹೇಳಿದ್ದಾರೆ. (ದಯವಿಟ್ಟು ಸಂಪೂರ್ಣ ಓದಿ) . ಭಾರತ ದೇಶದ ಭವಿಷ್ಯದ ದೃಷ್ಟಿಯಿಂದ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಮಾರಕ, ಜಮ್ಮು ಹಾಗೂ ಕಾಶ್ಮೀರ ಭಾರತದೊಂದಿಗೆ ವಿಲೀನ ಬಾಗುವ ಸಂದರ್ಭದಲ್ಲಿ ಜಮ್ಮು ಹಾಗೂ ಕಾಶ್ಮೀರಕ್ಕೆ ಈ ಸ್ಥಾನಮಾನವನ್ನು ನೀಡಲಾಗಿತ್ತು.

ಆದರೆ ಇಂದು ಕೇಂದ್ರ ಸರ್ಕಾರವು ಈ ಸ್ಥಾನಮಾನವನ್ನು ರದ್ದುಮಾಡಿದೆ. ” ಜಮ್ಮು ಹಾಗೂ ಕಾಶ್ಮೀರವನ್ನು ಅತಿಕ್ರಮಣ ಮಾಡಲು ಕೇಂದ್ರ ಸರ್ಕಾರ” ಪ್ರಯತ್ನ ಪಡುತ್ತಿದೆ ಎಂದು ಹೇಳಿದ್ದಾರೆ.  ಜನರ ಅಭಿಪ್ರಾಯಗಳಿಗೆ ವಿರುದ್ಧವಾಗಿ ಈ ನಿರ್ಧಾರ ಮಾಡಲಾಗಿದೆ, ಇಂತಹ ನಡೆಯಿಂದ ದೇಶದ ಭವಿಷ್ಯಕ್ಕೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಅಭಿಪ್ರಾಯಪಟ್ಟರು. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಎಂದಿಗೂ ಭಾರತ ದೇಶ ಜಮ್ಮು ಹಾಗೂ ಕಾಶ್ಮೀರವನ್ನು ಅತಿಕ್ರಮಣ ಮಾಡುವ ಅಗತ್ಯ ಬಂದಿಲ್ಲ. ಯಾಕೆಂದರೆ ಅದು ನಮ್ಮದು, ಮೊದಲಿನಿಂದಲೂ ಕಾಶ್ಮೀರ ಭಾರತದ ತೆಕ್ಕೆಯಲ್ಲಿ ಇದೆ ಎಂಬುದನ್ನು ದಿನೇಶ್ ಗುಂಡೂರಾವ್ ರವರು ಮರೆತಂತೆ ಕಾಣುತ್ತಿದೆ. ಅತಿಕ್ರಮಣ ಮಾಡಿರಿವುದು ಚೀನಾ ಹಾಗೂ ಪಾಕಿಸ್ತಾನ, ಕೆಲವು ದಿನಗಳಲ್ಲಿ ಮೋದಿ ಅದನ್ನು ವಾಪಸ್ಸು ಪಡೆಯುತ್ತಾರೆ ಎಂಬ ನಂಬಿಕೆ ನಮಗೆ ಮೂಡಿದೆ.