ಜಮೀರ್ ಗೆ ಮರ್ಮಾಘಾತ ! ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಜಮೀರ್ ! ಶಾಸಕ ಸ್ಥಾನ ಢಮಾರ್??

ಜಮೀರ್ ಗೆ ಮರ್ಮಾಘಾತ ! ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಜಮೀರ್ ! ಶಾಸಕ ಸ್ಥಾನ ಢಮಾರ್??

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಜಮೀರ್ ಅಹಮದ್ ಅವರು ತಮ್ಮ ಆಪ್ತ ಬಳಗದೊಂದಿಗೆ ಇನ್ನಿಬ್ಬರು ಶಾಸಕರನ್ನು ಸೇರಿಸಿಕೊಂಡು ಜೆಡಿಎಸ್  ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಗೊಂಡಿದ್ದರು. ಇದೇ ಸಮಯದಲ್ಲಿ ಚುನಾವಣೆ ಬಂದ ಕಾರಣ ಆಸ್ತಿ ವಿವರ ಸಲ್ಲಿಸುವ ವೇಳೆಯಲ್ಲಿ ಜಮೀರ್ ಅಹ್ಮದ್ ರವರು ಭಾರಿ ಲೋಪ ಎಸಗಿರುವುದು ಇದೀಗ ಬಟಾಬಯಲಾಗಿದೆ. ಯಾವ ರಾಜಕಾರಣಿಯೂ ತನ್ನ ಸಂಪೂರ್ಣ ಆಸ್ತಿಯನ್ನು ಚುನಾವಣಾ ಆಯೋಗಕ್ಕೆ ನೀಡುವುದಿಲ್ಲ ಎಂಬುದು ಜಗಜ್ಜಾಹೀರಾದ ವಿಷಯ, ಆದರೆ ಇಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಜಮೀರ್ ಅಹ್ಮದ್ ರವರು ತನ್ನ ಆಸ್ತಿ ಒಟ್ಟು ಮೌಲ್ಯವನ್ನು ಕಡಿಮೆ ತೋರಿಸಲು ನಾನು ತಮ್ಮ ಆಪ್ತ ಮತ್ತೊಬ್ಬ ಮಾಜಿ ಶಾಸಕರಾದ ಚೆಲುವರಾಯಸ್ವಾಮಿ ರವರ ಬಳಿ  42 ಲಕ್ಷ ರೂ ಸಾಲ ಮಾಡಿದ್ದೇನೆ ಎಂದು ಚುನಾವಣಾ ಆಯೋಗಕ್ಕೆ ನೀಡಿದ ವರದಿಯಲ್ಲಿ ನಮೂದಿಸಿದ್ದಾರೆ.

ಆದರೆ ಇದೇ ವೇಳೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಚೆಲುವರಾಯಸ್ವಾಮಿ ರವರು ಈ ಕುರಿತು ಚುನಾವಣಾ ಆಯೋಗಕ್ಕೆ ಯಾವುದೇ ವರದಿಯನ್ನು ನೀಡಿಲ್ಲ. ಯಾವುದೇ ಸಾಲ ಪಡೆಯುವುದು ಅಥವಾ ನೀಡುವಿಕೆ ವರದಿಯನ್ನು ಚುನಾವಣಾ ಅಧಿಕಾರಿಗೆ ನೀಡುವ ವರದಿಯಲ್ಲಿ ನಮೂನೆ ಮಾಡುವುದು ಕಡ್ಡಾಯ. ಇದೀಗ ಈ ವಿಚಾರ ಬಟಾ ಬಯಲಾಗಿದ್ದು, ಬಿಜೆಪಿ ಪಕ್ಷದ ವಕ್ತಾರರಾದ ರಮೇಶ್ ರವರು ದಾಖಲೆಗಳ ಮೂಲಕ ಚುನಾವಣಾ ಆಯೋಗಕ್ಕೆ ಸಂಪೂರ್ಣ ವರದಿಯನ್ನು ಸಲ್ಲಿಸಿದ್ದಾರೆ ಹಾಗೂ ಜಮೀರ್ ಅಹಮ್ಮದ್ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಚುನಾವಣಾ ಆಯೋಗವು ಸ್ಪಂದನೆ ನೀಡದಿದ್ದಲ್ಲಿ ಕೋರ್ಟಿನ ಮೊರೆ ಹೋಗುವುದಾಗಿ ತಿಳಿಸಿರುವ ರಮೇಶ್ ಕುಮಾರ್ ರವರು ಜಮೀರ್ ಅಹಮದ್ ರವರಿಗೆ ಸರ್ಕಾರ ಉರುಳಿದ ನಂತರ ಮತ್ತೊಂದು ಶಾಕ್ ನೀಡಲು ಸಿದ್ಧರಾಗಿದ್ದಾರೆ.