ಮತ್ತೊಂದು ಐತಿಹಾಸಿಕ ನಿರ್ಧಾರ?? ಬಿಜೆಪಿ ಸಂಸದರಿಗೆ ಮತ್ತೊಂದು ಆದೇಶ ಹೊರಡಿಸಿದ ಮೋದಿ

ಮತ್ತೊಂದು ಐತಿಹಾಸಿಕ ನಿರ್ಧಾರ?? ಬಿಜೆಪಿ ಸಂಸದರಿಗೆ ಮತ್ತೊಂದು ಆದೇಶ ಹೊರಡಿಸಿದ ಮೋದಿ

ಇಂದು ಇಡೀ ಭಾರತೀಯರು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಲವಾರು ಸಿಹಿ ಸುದ್ದಿಗಳನ್ನು ನೀಡುತ್ತದೆ ಎಂದು ಕಾದು ಕುಳಿತಿದ್ದಾರೆ. ಜಮ್ಮು ಕಾಶ್ಮೀರ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರವು ಈ ಬಾರಿಯಾದರೂ ಬಹು ನಿರೀಕ್ಷಿತ ವಿಶೇಷ ಸ್ಥಾನಮಾನವನ್ನು ತೆಗೆದುಕೊಂಡು ಜಮ್ಮು-ಕಾಶ್ಮೀರದಲ್ಲಿ ಅಡಗಿರುವ ಎಲ್ಲವೂ ಉಗ್ರರನ್ನು ಸದೆಬಡೆದು, ಮತ್ತೊಮ್ಮೆ ಜಮ್ಮು ಹಾಗೂ ಕಾಶ್ಮೀರ ದ ವೈಭವವನ್ನು ಮರುಕಳಿಸುವಂತೆ ದಿಟ್ಟ ಹೆಜ್ಜೆ ಇಡಲಿದೆ ಎಂದು ಎಲ್ಲರೂ ಕಾದು ಕುಳಿತಿದ್ದಾರೆ. ಇನ್ನು ಕೆಲವರು ಈ ಬಾರಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಕೇಂದ್ರ ಸರ್ಕಾರದ ಕಣ್ಣು ಬಿದ್ದಿದ್ದು, ಪಾಕಿಸ್ತಾನ ತೆಕ್ಕೆಯಿಂದ ಹಲವಾರು ವರ್ಷಗಳ ಹಿಂದೆ ವಶಪಡಿಸಿಕೊಂಡಿರುವ ಕಾಶ್ಮೀರದ ಭೂಭಾಗಗಳನ್ನು ವಾಪಸು ಪಡೆದುಕೊಳ್ಳುತ್ತಾರೆ ಎಂದು ಲೆಕ್ಕಾಚಾರಗಳಲ್ಲಿ ತೊಡಗಿಕೊಂಡಿದ್ದಾರೆ.

ಈ ಎಲ್ಲಾ ವಿದ್ಯಮಾನಗಳಿಗೆ ಮತ್ತಷ್ಟು ಪೂರಕವಾಗುವಂತೆ ಅಮಿತ್ ಶಾ ರವರು ಮತ್ತೊಮ್ಮೆ ಮಹತ್ವದ ಮಸೂದೆಯನ್ನು ಮಂಡಿಸಲು ಸಿದ್ಧರಾಗುತ್ತಿರುವ ವಿಷಯ ಇದೀಗ ಹೊರಬಿದ್ದಿದೆ. ಈ ವಿಷಯದ ಕುರಿತು ಬಿಜೆಪಿ ಪಕ್ಷದ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಲಾಗಿದ್ದು, ಐತಿಹಾಸಿಕ ನಿರ್ಧಾರಕ್ಕೆ ಬಿಜೆಪಿ ಪಕ್ಷದ ಸಂಸದರು ಎಲ್ಲರೂ ಕಡ್ಡಾಯವಾಗಿ ಹಾಜರಿದ್ದು ಬಿಜೆಪಿ ಪಕ್ಷದ ಪರ ಮತ ಚಲಾಯಿಸಬೇಕು ಎಂಬ ಆದೇಶ ಹೊರಡಿಸಿದ್ದಾರೆ. ಎಲ್ಲ 303 ಸಂಸದರ ಹಾಜರಾತಿ ಕಡ್ಡಾಯವಾಗಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜನರು ಕಾದು ಕುಳಿತಿದ್ದಾರೆ. ಇದು ಮುಂದಿನ ಆಗಸ್ಟ್ 7ರವರೆಗೆ ಜಾರಿಯಾಗಿದ್ದು, ಎಲ್ಲಾ ಸಂಸದರು ಇನ್ನು ಮೂರು ದಿನಗಳ ಕಾಲ ಸಂಸತ್ತಿನಲ್ಲಿ ಹಾಜರಾಗುವುದು ಕಡ್ಡಾಯವಾಗಿದೆ. ಈ ನಿರ್ಣಯ ಕಾಶ್ಮೀರದ ಕುರಿತು ಎಂದು ಈಗಾಗಲೇ ಲೆಕ್ಕಾಚಾರಗಳು ಆರಂಭವಾಗಿವೆ.