ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಚಿದಂಬರಂ ! 130 ಕೋಟಿ ಭಾರತೀಯರ ಕನಸಿಗೆ ತಣ್ಣೀರೆರೆಚಲು ಪ್ರಯತ್ನ !!

ಇಂದು ಕಾಶ್ಮೀರದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗೆ ಇಡೀ ಭಾರತೀಯ ದೇಶಭಕ್ತರ ಬೆಂಬಲವಿದೆ. ನಿಮಗೆಲ್ಲರಿಗೂ ತಿಳಿದಿರುವ ಮೊದಲಿನಿಂದಲೂ ದೇಶಭಕ್ತರು ಜಮ್ಮು-ಕಾಶ್ಮೀರವನ್ನು ಹೇಗಾದರೂ ಮಾಡಿ ಭಾರತ ಮತ್ತೊಮ್ಮೆ ಸಂಪೂರ್ಣವಾಗಿ ವಾಪಸ್ಸು ಪಡೆದುಕೊಳ್ಳಬೇಕು ಹಾಗೂ ಉಗ್ರಂ ಸದೆ ಬಡೆದು ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಸೇನಾ ದಾಳಿಯನ್ನು ಹತ್ತಿಕ್ಕಬೇಕು ಎಂದು ಪಕ್ಷಬೇಧವನ್ನು ಮರೆತು ಒಗ್ಗಟ್ಟಾಗಿದ್ದಾರೆ. ಇದೀಗ ಅಮಿತ್ ಶಾ ರವರು ಗೃಹ ಮಂತ್ರಿಯಾದ ಮೇಲೆ ಇದೇ ಹಾದಿಯಲ್ಲಿ ಹಲವಾರು ದಿಟ್ಟ ಹೆಜ್ಜೆಗಳನ್ನು ಇಡುತ್ತಾ ಮುಂದೆ ಸಾಗುತ್ತಿದ್ದಾರೆ. ಈಗಾಗಲೇ ಜಮ್ಮು ಹಾಗೂ ಕಾಶ್ಮೀರ ದಲ್ಲಿ ಬಾರಿ ಸೇನಾ ಜಮಾವಣೆ ಮಾಡಿ ಮಹತ್ವದ ಹೆಜ್ಜೆ ಇಡಲು ಅಮಿತ್ ಶಾ ರವರು ಎಲ್ಲಾ ಸಿದ್ಧತೆ ಮಾಡಿಕೊಂಡು ಕಾದು ಕುಳಿತಿದ್ದಾರೆ.

ಪರಿಸ್ಥಿತಿ ಹೀಗಿರುವಾಗ 130 ಕೋಟಿ ದೇಶಭಕ್ತರ ಕನಸಿಗೆ ತಣ್ಣೀರೆರೆಚಲು ಪಿ ಚಿದಂಬರಂ ರವರು ಸಿದ್ಧತೆರಾದಂತೆ ಕಾಣುತ್ತಿದೆ. ಹೌದು ಇದೀಗ ಜಮ್ಮು ಹಾಗೂ ಕಾಶ್ಮೀರ ಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಬಿಜೆಪಿ ಪಕ್ಷವು ರಾಷ್ಟ್ರಪತಿ ಯವರಿಂದ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ವಾಪಸು ಪಡೆದುಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಸಮಯದಲ್ಲಿ ಚಿದಂಬರಂ ಅವರ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಯಾವುದೇ ಕಾರಣಕ್ಕೂ ವಿಶೇಷ ಸ್ಥಾನಮಾನದ ಕುರಿತು ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು, ಕೇಂದ್ರ ಈ ರೀತಿ ವರ್ತಿಸಬಾರದು ಎಂದು ನಾನು ಎಚ್ಚರಿಸುತ್ತಿದ್ದೇನೆಎಂದು ಹೇಳಿಕೆ ನೀಡಿದ್ದಾರೆ. ಚಿದಂಬರಂ ಅವರ ಹೇಳಿಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ನಿರ್ಧಾರ ತೆಗೆದುಕೊಳ್ಳಲಿ ಎಂದು ಜನರು ಒತ್ತಾಯ ಮಾಡಿದ್ದಾರೆ.

Post Author: Ravi Yadav