ಮಹತ್ವದ ವಿದ್ಯಮಾನ ! ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡುತ್ತಾರಾ ಅಮಿತ್ ಶಾ ! ನಡುಗುತ್ತಿದೆ ಪಾಕಿಸ್ತಾನ !

ಮಹತ್ವದ ವಿದ್ಯಮಾನ ! ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡುತ್ತಾರಾ ಅಮಿತ್ ಶಾ ! ನಡುಗುತ್ತಿದೆ ಪಾಕಿಸ್ತಾನ !

ಕಳೆದ ಕೆಲವು ತಿಂಗಳುಗಳ ಹಿಂದೆ ಭಾರತ ದೇಶವು ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ನೆಲಕ್ಕೆ ನುಗ್ಗಿ ಉಗ್ರರ ನೆಲೆಗಳನ್ನು ನಾಶಮಾಡಿ ಯಶಸ್ವಿಯಾಗಿ ವಾಪಸ್ ಆಗಿತ್ತು. ಈ ಮೂಲಕ ಭಾರತ ಸೇನೆಯ ತಾಕತ್ತು ಏನು ಎಂಬುದು ಇಡೀ ವಿಶ್ವಕ್ಕೆ ಮನದಟ್ಟು ಮಾಡಿಕೊಟ್ಟಿತ್ತು. ಇದರಿಂದ ನಡುಗಿ ಹೋದ ಪಾಕಿಸ್ತಾನವು ಕಾಶ್ಮೀರ ಕಣಿವೆಯಲ್ಲಿ ನೆಲೆಸಿರುವ ಕೇವಲ ನಾಲ್ಕು ಸಾವಿರ ಸೈನಿಕರಿಗೆ ಭಯಬಿದ್ದು, ಸೈನಿಕರನ್ನು ವಾಪಸ್ಸು ತೆಗೆದುಕೊಳ್ಳುವವರೆಗೂ ಪಾಕಿಸ್ತಾನ ವಾಯುನೆಲೆಯನ್ನು ಭಾರತದ ಬಳಕೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಕೆಲವು ದಿನಗಳ ಕಾಲ ಹಠ ಸಾಧಿಸಿತ್ತು. ಆದರೆ ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟಿರುವ ಪಾಕಿಸ್ತಾನವು ಬೇರೆ ವಿಧಿ ಇಲ್ಲದೆ ಇತ್ತೀಚಿಗೆ  ಭಾರತೀಯ ವಿಮಾನಗಳಿಗೆ ಪಾಕಿಸ್ತಾನವಾಗಿ ನೆಲೆಯನ್ನು ತೆರವುಗೊಳಿಸಿತ್ತು.

ಈಗಾಗಲೇ ಅಕ್ಷರಸಹ ನಡುಗಿ ಹೋಗಿರುವ ಪಾಕಿಸ್ತಾನಕ್ಕೆ ಅಮಿತ್ ಶಾ ರವರು ಶಾಕ್ ಮೇಲೆ ಶಾಕ್ ನೀಡುತ್ತಿದ್ದು, ಜಮ್ಮು-ಕಾಶ್ಮೀರವನ್ನು ಸಂಪೂರ್ಣವಾಗಿ ಉಗ್ರ ಮುಖ್ಯ ಮಾಡುವತ್ತ ದಿಟ್ಟ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಕಳೆದ ಒಂದು ವಾರದ ಹಿಂದಷ್ಟೇ ಅಮಿತ್ ಶಾ ರವರು ಜಮ್ಮು ಹಾಗೂ ಕಾಶ್ಮೀರ ಕ್ಕೆ 10000 ಹೆಚ್ಚುವರಿ ಯೋಧರನ್ನು ನಿಯೋಜನೆ ಮಾಡಿ, ಇಡೀ ದೇಶದ ಜನರ ಕೂಗಾಗಿರುವ ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ತೆಗೆಯುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಭಾರತದ ಸ್ವತಂತ್ರ ದಿನಾಚರಣೆಯ ದಿನ ಈ ನಿರ್ಧಾರ ತೆಗೆದುಕೊಳ್ಳಲು 10000 ಹೆಚ್ಚುವರಿ ಯೋಧರನ್ನು ನಿಯೋಜನೆ ಮಾಡಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬಂದಿತ್ತು. ಇದಕ್ಕೆ ಕಾಶ್ಮೀರದ ಕೆಲವು ಪಾಕ್ ಒಲವಿನ ರಾಜಕಾರಣಿಗಳು ಹಾಗೂ ಪ್ರತ್ಯೇಕವಾದಿಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಒಂದು ವೇಳೆ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಲ್ಲಿ ಕಠಿಣ ಹೋರಾಟದ ಎಚ್ಚರಿಕೆ ನೀಡಿದ್ದರು.

ಎಚ್ಚರಿಕೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಕೇಂದ್ರ ಗೃಹ ಸಚಿವರು ಇದೀಗ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ, ಈ ನಿರ್ಧಾರದ ಮೂಲಕ ಪಾಕಿಸ್ತಾನ ಹಾಗೂ ಪ್ರತ್ಯೇಕ ವಾದಿಗಳನ್ನು ಒಮ್ಮೆಲೆ ನಿರ್ನಾಮ ಮಾಡಲು ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಇದೀಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರವರು ಕಾಶ್ಮೀರ ಕಣಿವೆಗೆ ಭೇಟಿ ನೀಡಿರುವ ಸಮಯದಲ್ಲಿ ಬರೋಬ್ಬರಿ 25000 ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಇದರ ಬಗ್ಗೆ ಮಾತನಾಡಿರುವ ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರು ಉತ್ತರ ಕಾಶ್ಮೀರದಲ್ಲಿ ಭದ್ರತಾಪಡೆಗಳ ಸಂಖ್ಯೆ ತೀರ ಕಡಿಮೆ ಇರುವ ಕಾರಣ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಆದರೆ ಇದ್ದಕ್ಕಿದ್ದ ಹಾಗೆ 25000 ಸೈನಿಕರ ನಿಯೋಜನೆ ಯಾಕೆ ಮಾಡಲಾಗಿದೆ ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ, ಇದೀಗ ಜಮ್ಮು ಹಾಗೂ ಕಾಶ್ಮೀರ ಕಣಿವೆಗೆ ಸೇನಾ ಮುಖ್ಯಸ್ಥರಾಗಿರುವ ಬಿಪಿನ್ ರಾವತ್ ರವರು ಸಹ ಭೇಟಿ ಮಾಡಲಿದ್ದು ಪರಿಸ್ಥಿತಿಯನ್ನು ಸಂಪೂರ್ಣ ಅವಲೋಕನೆ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇನ್ನೆರಡು ದಿನಗಳ ಕಾಲ ಜಮ್ಮು ಹಾಗೂ ಕಾಶ್ಮೀರ ದಲ್ಲಿ ನೆಲೆಸಿ ಸಂಪೂರ್ಣ ಅವಲೋಕನದಲ್ಲಿ ತೊಡಗಲಿದ್ದಾರೆ ಎಂಬ ಮಾಹಿತಿ ಹೊರ ಬಂದಿದ್ದು, ಈಗಾಗಲೇ ಅಮಿತ್ ಶಾ ರವರು ಜಮ್ಮು ಹಾಗೂ ಕಾಶ್ಮೀರದ ಪ್ರತಿಯೊಂದು ಪಂಚಾಯಿತಿಗಳಲ್ಲಿ ರಾಷ್ಟ್ರಧ್ವಜ ಹಾರಾಟ ಮಾಡಲಾಗುವುದು ಎಂದು ಹೇಳಿಕೆ ನೀಡಿರುವ ಕಾರಣ ಇದು ಬಹುತೇಕ ವಿಶೇಷ ಸ್ಥಾನಮಾನ ಹಾಗೂ ಪಾಕಿಸ್ತಾನಕ್ಕೆ ಸಂಬಂಧಪಟ್ಟ ನಡೆ ಎಂದು ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರೆ. ಆದರೆ ಚಾಣಕ್ಯ ಅಮಿತ್ ಶಾ ರವರ ನೀತಿ ಏನೆಂಬುದು ಯಾರಿಗೂ ತಿಳಿಯುತ್ತಿಲ್ಲ.