ಐತಿಹಾಸಿಕ ನಿರ್ಧಾರ ! ಜನರೇ ಚಿಂತೆ ಬಿಡಿ ! ಯಡಿಯೂರಪ್ಪ ಇನ್ ಫುಲ್ ಜೋಶ್ ! ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಶಾಕ್

ಐತಿಹಾಸಿಕ ನಿರ್ಧಾರ ! ಜನರೇ ಚಿಂತೆ ಬಿಡಿ ! ಯಡಿಯೂರಪ್ಪ ಇನ್ ಫುಲ್ ಜೋಶ್ ! ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಶಾಕ್

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದೆ. ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಬರ ತಾಂಡವವಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಈ ಹಿಂದಿನ ಮೈತ್ರಿ ಸರ್ಕಾರ ಸರಿಯಾದ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಎಂದು ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತಿದ್ದ ಯಡಿಯೂರಪ್ಪನವರು ಆರೋಪ ಮಾಡಿ, ಅಧಿಕಾರಯುತ ಪಕ್ಷದ ಬದಲು ವಿರೋಧ ಪಕ್ಷ ಬರ ವೀಕ್ಷಣೆ ಮಾಡಿ ಪರಿಹಾರ ಒದಗಿಸುತ್ತದೆ ಎಂದು ರಾಜ್ಯದ ಹಲವಾರು ಜಿಲ್ಲೆಗಳಿಗೆ ಭೇಟಿ ಮಾಡಿ ಬರದ ಅವಲೋಕನ ನಡೆಸಿದ್ದರು. ಬಿಎಸ್ ಯಡಿಯೂರಪ್ಪನವರು ಕೇವಲ ಸಿಂಪತಿ ಗಿಟ್ಟಿಸಿಕೊಳ್ಳಲು, ದೋಸ್ತಿ ಸರ್ಕಾರದ ಮೇಲೆ ಗೂಬೆ ಕೂರಿಸಲು ಹಾಗೂ ಮತಗಳನ್ನು ಸೆಳೆಯಲು ಈ ರೀತಿಯ ನಾಟಕ ಮಾಡುತ್ತಿದ್ದಾರೆ ಎಂದು ದೋಸ್ತಿ ಪಕ್ಷದ ಅಭಿಮಾನಿಗಳು ಹಾಗೂ ನಾಯಕರು ಹುಟ್ಟಿ ಈಕೆ ಮಾಡಿದ್ದರು.

ಎಲ್ಲ ವಾದ ವಿವಾದಗಳಿಗೆ ಯಡಿಯೂರಪ್ಪನವರು ತಮ್ಮ ಅಧಿಕಾರದ ಕಾರ್ಯವೈಖರಿಯ ಮೂಲಕ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ ಇಂದು ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಬಡವರಿಗೆ ಹಲವಾರು ಗುಡ್ ನ್ಯೂಸ್ ಗಳನ್ನು ನೀಡಿದ್ದಾರೆ. ಇಂದು ಅಧಿಕಾರಿಗಳ ಜೊತೆ ಸತತ 8 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ ಬಿ ಎಸ್ ಯಡಿಯೂರಪ್ಪನವರು ಮೂರು ಮಹತ್ವದ ಆದೇಶಗಳನ್ನು ಹೊರಡಿಸಿದ್ದಾರೆ. ಮೊದಲನೇ ನಿರ್ಧಾರವಾಗಿ ರೈತರಿಗೆ ಇನ್ನೆರಡು ದಿನಗಳಲ್ಲಿ ಹೆಚ್ಚುವರಿಯಾಗಿ ಕಿಸಾನ್ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರವು ಘೋಷಿಸಿರುವ 4 ಸಾವಿರ ರೂಪಾಯಿ ನೆರವಿನ ಯೋಜನೆ ಜಾರಿಗೆ ಇನ್ನೆರಡು ದಿನಗಳಲ್ಲಿ ಸರ್ಕಾರಿ ಆದೇಶ ಹೊರಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಎರಡನೆಯದಾಗಿ ಕಾನೂನುಬಾಹಿರ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡು ಅನ್ನಭಾಗ್ಯ ಯೋಜನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಿಡಿಗೇಡಿಗಳನ್ನು ಮಟ್ಟ ಹಾಕಲು ನಿರ್ಧಾರ ಮಾಡಿರುವ ಯಡಿಯೂರಪ್ಪನವರು, ಕಾನೂನುಬಾಹಿರ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದರೇ ಅದು ಅಧಿಕಾರಿಗಳ ವೈಫಲ್ಯ. ಇದರ ಬಗ್ಗೆ ಅಧಿಕಾರಿಗಳು ಸಂಪೂರ್ಣ ನಿಗಾವಹಿಸಬೇಕು, ಈ ಕೂಡಲೇ ಕಿಡಿಗೇಡಿಗಳನ್ನು ಕಂಡುಹಿಡಿದು ಬಿಪಿಎಲ್ ಕಾರ್ಡ್ ವಜಾ ಮಾಡಿಸಬೇಕು. ಅಷ್ಟೇ ಅಲ್ಲದೆ ಅನ್ನಭಾಗ್ಯದ ಅಕ್ಕಿ ಗೋದಾಮುಗಳಲ್ಲಿ ಕೊಳೆಯುತ್ತಿದೆ ಎಂಬ ಪ್ರಕರಣಗಳ ಕುರಿತು ಮಾತನಾಡಿದ ಯಡಿಯೂರಪ್ಪನವರು ಅಕ್ಕಿ ಹಾಳಾದ್ರೆ ಅಧಿಕಾರಿಗಳಿಗೆ ಹೊಣೆ, ಬಡವರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದರು.

ಇನ್ನು ಮೂರನೇ ನಿರ್ಧಾರವಾಗಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಯಡಿಯೂರಪ್ಪನವರು ಇಡೀ ರಾಜ್ಯದಲ್ಲಿ ಬರ ನಿರ್ವಹಣೆಯಲ್ಲಿ ತೊಡಗಿರುವ ಯಾವುದೇ ಸರಕಾರಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಮುಂದಿನ ಮೂರು ತಿಂಗಳುಗಳ ಕಾಲ ಯಾವುದೇ ರಜೆಯನ್ನು ತೆಗೆದುಕೊಳ್ಳದೆ ಶನಿವಾರ ಹಾಗೂ ಭಾನುವಾರ ಸೇರಿದಂತೆ ವಾರಕ್ಕೆ ಏಳು ದಿನವೂ, ಕೆಲಸ ಮಾಡಬೇಕು ಎಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ಬರ ಪರಿಸ್ಥಿತಿ ಗಂಭೀರವಾಗಿದೆ. ಕುಡಿಯುವ ನೀರು, ಮೇವು ಪೂರೈಕೆ ಹಾಗೂ ಉದ್ಯೋಗ ಕೊಡಲು ಆದ್ಯತೆ ನೀಡುವಂತೆ ಸೂಚನೆ ನೀಡಿದ್ದು, ನರೇಗಾ ಉದ್ಯೋಗ ಖಾತ್ರಿ ದುರುಪಯೋಗ ಮಾಡಿಕೊಳ್ಳದಂತೆ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ.ಇದೇ ವೇಳೆ ರಾಜ್ಯದಲ್ಲಿ ಬರ ಹಿನ್ನೆಲೆ ತುರ್ತು ಪರಿಸ್ಥಿತಿ ಅವಧಿಯನ್ನು ಸೆಪ್ಟೆಂಬರ್ 30ರವರೆಗೂ ವಿಸ್ತರಣೆ ಮಾಡಲಾಯಿತು. ಈ ಮೊದಲು ಜುಲೈ 31ರವರೆಗೆ ತುರ್ತುಪರಿಸ್ಥಿತಿ ಅವಧಿಯಿತ್ತು.