ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಯಡಿಯೂರಪ್ಪ ! ವಯಸ್ಸಾಯ್ತು ಎಂದು ಟೀಕೆ ಮಾಡುತ್ತಿದ್ದವರಿಗೆ ಕಾರ್ಯವೈಖರಿಯ ಮೂಲಕವೇ ಉತ್ತರ

ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಯಡಿಯೂರಪ್ಪ ! ವಯಸ್ಸಾಯ್ತು ಎಂದು ಟೀಕೆ ಮಾಡುತ್ತಿದ್ದವರಿಗೆ ಕಾರ್ಯವೈಖರಿಯ ಮೂಲಕವೇ ಉತ್ತರ

ಬಿಎಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ ಅಭಿಮಾನಿಗಳು ಯಡಿಯೂರಪ್ಪ ನವರನ್ನು ಮನಬಂದಂತೆ ಟೀಕೆ ಮಾಡಿದ್ದರು. ಯಡಿಯೂರಪ್ಪ ನವರಿಗೆ ವಯಸ್ಸಾಯಿತು, ಈಗಲೂ ಸಹ ಅಧಿಕಾರದ ಆಸೆ ಬಿಟ್ಟಿಲ್ಲ. ಬಿಎಸ್ ಯಡಿಯೂರಪ್ಪ ನವರು ಈ ವಯಸ್ಸಿನಲ್ಲಿ ಯಾವ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದೆಲ್ಲ ಮನಬಂದಂತೆ ಟೀಕೆಗಳನ್ನು ಮಾಡಿದರು. ಆದರೆ ಈ ಎಲ್ಲ ಟೀಕೆಗಳಿಗೆ ಯಡಿಯೂರಪ್ಪನವರು ಕಳೆದ ಕೆಲವು ದಿನಗಳಿಂದ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಕಾರ್ಯವೈಖರಿಯ ಮೂಲಕ ಉತ್ತರ ನೀಡುತ್ತಿದ್ದಾರೆ. ಹೌದು ಈಗಾಗಲೇ ಮಹತ್ವದ ಆದೇಶಗಳನ್ನು ಹೊರಡಿಸಿರುವ ಯಡಿಯೂರಪ್ಪನವರು ಫುಲ್ ಜೋಶ್ ನಲ್ಲಿ ಆದೇಶಗಳನ್ನು ಕಾರ್ಯಗತ ಮಾಡಲು ಅಖಾಡಕ್ಕಿಳಿದಿದ್ದಾರೆ.

ತಾವು ಅಧಿಕಾರಕ್ಕೆ ಏರಿದ ಕೆಲವೇ ಕೆಲವು ದಿನಗಳ ನಂತರ  ರೈತರಿಗೆ ಪ್ರಧಾನಮಂತ್ರಿ ಯವರ ಮಹತ್ವಕಾಂಕ್ಷಿ ಯೋಜನೆಯಾದ ಕಿಸಾನ್ ಯೋಜನೆ ಅಡಿಯಲ್ಲಿ ಆರು ಸಾವಿರ ರೂಗಳಿಗೆ ಹೆಚ್ಚುವರಿಯಾಗಿ ನಾಲ್ಕು ಸಾವಿರ ರೂಗಳನ್ನು ಸೇರಿಸಿ ಪ್ರತಿವರ್ಷ ರೈತರಿಗೆ ಹತ್ತು ಸಾವಿರ ರೂಗಳನ್ನು ತಲುಪಿಸುತ್ತೇವೆ ಎಂದು ಘೋಷಣೆ ಮಾಡಿದ್ದರು. ಇದೀಗ ಇದೇ ವಿಚಾರವಾಗಿ ಮಹತ್ವದ ಆದೇಶ ಹೊರಡಿಸಿರುವ ಯಡಿಯೂರಪ್ಪನವರು ಇನ್ನು ಕೇವಲ ಎರಡು ದಿನಗಳಲ್ಲಿ, ಸಂಬಂಧಪಟ್ಟ ಇಲಾಖೆಗಳಿಗೆ ಅಧಿಕೃತ ಸರ್ಕಾರಿ ಆದೇಶ ಹೊರಡಿಸಿ, ಕೇವಲ ಹತ್ತು ದಿನಗಳ ಒಳಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ನೀಡಲಾಗುತ್ತಿರುವ ಮೊದಲನೇ ಕಂತಿನ ಹಣವನ್ನು ಜಮಾ ಮಾಡಲು ಆದೇಶ ನೀಡಿದ್ದಾರೆ. ಇನ್ನು ಕೇವಲ ಹತ್ತು ದಿನಗಳ ಒಳಗೆ ಮೊದಲ ಕಂತಿನ ಹಣ ವಾದ rs.2000 ರೈತರ ಅಕೌಂಟಿಗೆ ನೇರವಾಗಿ ತಲುಪಲಿದೆ.(ನೆನರಿರಲಿ ನೇರವಾಗಿ ಬಂದು ತಲುಪುತ್ತದೆ, ಯಾವುದೇ ಅಧಿಕಾರಿಯ ಅಂಗಿಲ್ಲದೆ, ಒಂದು ರೂಪಾಯಿ ಭ್ರಷ್ಟ್ರಾಚಾರವಿಲ್ಲದೆ, ಕಚೇರಿಗಳಿಗೆ ಅಲೆದಾಟವಿಲ್ಲದೆ. ಇದು ಡಿಜಿಟಲ್ ಭಾರತ.)