ವಿಜೃಂಭಣೆಯಿಂದ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದ ಜಮೀರ್ ಗೆ ತಕ್ಕ ತಿರುಗೇಟು ನೀಡಿದ ಕೆಜಿ ಬೋಪಯ್ಯ

ವಿಜೃಂಭಣೆಯಿಂದ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದ ಜಮೀರ್ ಗೆ ತಕ್ಕ ತಿರುಗೇಟು ನೀಡಿದ ಕೆಜಿ ಬೋಪಯ್ಯ

ಇಂದು ಇಡೀ ಕರ್ನಾಟಕ ರಾಜ್ಯದ ಹಿಂದೂ ಕಾರ್ಯಕರ್ತರು ಸಂತಸದಲ್ಲಿ ಮುಳುಗಿ ಪಟಾಕಿ ಹೊಡೆಯುತ್ತಿದ್ದಾರೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಇಂದು ತಾವು ಅಧಿಕಾರಕ್ಕೆ ಏರಿದ ಕೆಲವೇ ಕೆಲವು ದಿನಗಳಲ್ಲಿ ಭಾರೀ ವಿವಾದವನ್ನು ಸೃಷ್ಟಿಸುತ್ತಿದ್ದ ಟಿಪ್ಪು ಜಯಂತಿ ಆಚರಣೆಯನ್ನು ನಿಷೇಧ ಮಾಡಿದ್ದಾರೆ. ಇದಕ್ಕೆ ಹಲವಾರು ರಾಜಕೀಯ ನಾಯಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿ ಪಕ್ಷದ ನಾಯಕರು ಈ ನಿರ್ಧಾರವನ್ನು ಸ್ವಾಗತ ಮಾಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಇದರ ಬಗ್ಗೆ ಮಾಜಿ ಸಚಿವ ಜಮೀರ್ ಅಹಮದ್ ರವರು ಪ್ರತಿಕ್ರಿಯೆ ನೀಡಿದ್ದು ಯಡಿಯೂರಪ್ಪನವರ ನಿರ್ಧಾರವನ್ನು ಒಪ್ಪದ ಜಮೀರ್ ಅಹಮದ್ ರವರು, ಬಿಎಸ್ ಯಡಿಯೂರಪ್ಪನವರು ಟಿಪ್ಪುಸುಲ್ತಾನ್ ಜಯಂತಿಯನ್ನು ನಿಷೇಧ ಮಾಡಿರಬಹುದು.

ಆದರೆ ಸರ್ಕಾರ ರದ್ದು ಮಾಡಿದರೆ ಏನಾಯಿತು ನಾವು ಇನ್ನೂ ವಿಜೃಂಭಣೆಯಿಂದ ಟಿಪ್ಪುಸುಲ್ತಾನ ಜಯಂತಿಯನ್ನು ಆಚರಿಸುತ್ತೇವೆ. ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ತಕ್ಕ ತಿರುಗೇಟು ನೀಡಿರುವ ಬಿಜೆಪಿ ಪಕ್ಷದ ಮುಖಂಡ ಕೆ ಜಿ ಬೋಪಯ್ಯ ರವರು, ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ಜಮೀರ್ ಅಹಮದ್ ರವರು ಒಂದು ದಿನ ವಾಚ್ಮೆನ್ ಆಗಿ ಕೆಲಸ ಮಾಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದರು. ಮೊದಲು ಜಮೀರ್ ಅಹಮದ್ ರವರು ಮಾಡಿದ್ದ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲಿ ಎಂದು ಸವಾಲೆಸೆದಿದ್ದಾರೆ. (ಕಳೆದ ಕೆಲವು ದಿನಗಳ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ, ರಾಜಕೀಯ ನಿವೃತ್ತಿ ತೆಗೆದುಕೊಂಡು ವಾಚ್ಮೆನ್ ಸಮವಸ್ತ್ರದ ಧರಿಸಿ ಯಡಿಯೂರಪ್ಪನವರ ಮನೆ ಮುಂದೆ ಇಡೀ ದಿನ ವಾಚ್ ಮ್ಯಾನ್ ಆಗುತ್ತೇನೆ ಎಂದು ಜಮೀರ್ ಅಹಮದ್ ಅವರು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು.)