ದೋಸ್ತಿಗಳಿಗೆ ಗುಡ್ ನ್ಯೂಸ್ ದ್ವೇಷ ರಾಜಕಾರಣ ಮಾಡಲ್ಲ ! ಕೊಟ್ಟ ಮಾತಿನಂತೆ ನಡೆದುಕೊಂಡ ಬಿಎಸ್ವೈ

ದೋಸ್ತಿಗಳಿಗೆ ಗುಡ್ ನ್ಯೂಸ್ ದ್ವೇಷ ರಾಜಕಾರಣ ಮಾಡಲ್ಲ ! ಕೊಟ್ಟ ಮಾತಿನಂತೆ ನಡೆದುಕೊಂಡ ಬಿಎಸ್ವೈ

ಬಿಜೆಪಿ ಪಕ್ಷವು ವಿಧಾನಸಭಾ ಕಲಾಪದಲ್ಲಿ ಬಹುಮತ ಸಾಬೀತು ಪಡಿಸಿದ ಕೆಲವು ದಿನಗಳ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡಿತ್ತು. ಇನ್ನು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಬಿಎಸ್ ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಮಾಜಿ ಪ್ರಧಾನಿಗಳಾದ ದೇವೇಗೌಡರು ಸಹ ಸ್ವಾಗತ ಮಾಡಿ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಂಡರೆ ಒಳ್ಳೆಯದು ಎಂಬ ಅಭಿಪ್ರಾಯ ಪಟ್ಟಿದ್ದರು. ಆದರೆ ಇಡೀ ರಾಜ್ಯದ ಪ್ರತಿಯೊಬ್ಬ ಜನತೆಯಲ್ಲಿಯೂ ಅನುಮಾನ ಮೂಡಿಸುವಂತಹ ವರ್ಗಾವಣೆಗಳ ಆದೇಶವನ್ನು ತಡೆಹಿಡಿದ ಯಡಿಯೂರಪ್ಪನವರನ್ನು ನೋಡಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಇದು ದ್ವೇಷ ರಾಜಕಾರಣ ಎಂದು ಕಿಡಿಕಾರಿದರು.

ಆದರೆ ಕೊನೆಗೂ ಯಡಿಯೂರಪ್ಪನವರು ಗುಡ್ ನ್ಯೂಸ್ ನೀಡಿದ್ದಾರೆ. ಅಲ್ಲ ಸ್ವಾಮಿ, ಕೇವಲ ನಾಲ್ಕು ಐದು ದಿನಗಳ ಕಾಲಾವಕಾಶದಲ್ಲಿ 1500 ಕ್ಕೂ ಹೆಚ್ಚು ವರ್ಗಾವಣೆ ಹಾಗೂ ಎಂಟು ನೂರಕ್ಕೂ ಹೆಚ್ಚು ಬಡ್ತಿ ಆದೇಶಗಳನ್ನು ಹೊರಡಿಸಿದರೆ ಎಂಥವರಿಗೂ ಅನುಮಾನ ಬರುತ್ತದೆ, ಅದೇ ಕಾರಣಕ್ಕಾಗಿ ಯಡಿಯೂರಪ್ಪನವರು ಈ ಆದೇಶಗಳನ್ನು ತಡೆಹಿಡಿದಿದ್ದರು. ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವ ಬಿಎಸ್ ಯಡಿಯೂರಪ್ಪನವರು ಕುಮಾರಸ್ವಾಮಿ ಅವರ ಮನವಿಯಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೇರಿ ರೂಪಿಸಿರುವ ಹಣಕಾಸು ವಿಧೇಯಕವನ್ನು ಯಾವುದೇ ಬದಲಾವಣೆಯಿಲ್ಲದೆ ಸೋಮವಾರ ವಿಧಾನಸಭಾ ಕಲಾಪದಲ್ಲಿ ಅಂಗೀಕಾರ ಮಾಡಲಾಗುತ್ತದೆ ಎಂದು ಖಚಿತಪಡಿಸಿದ್ದಾರೆ. ರಾಜೀನಾಮೆ ನೀಡುವ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಈ ಕುರಿತು ಯಡಿಯೂರಪ್ಪನವರನ್ನು ಮನವಿ ಮಾಡಿಕೊಂಡಿದ್ದರು.