ಕಾಶ್ಮೀರದಲ್ಲಿರುವ ದೇಶದ್ರೋಹಿಗಳಿಗೆ ಮರ್ಮಾಘಾತ ! ಅಮಿತ್ ಷಾ ಆದೇಶ ಕಂಡು ಬೆಚ್ಚಿಬಿದ್ದ ದೇಶದ್ರೋಹಿಗಳು

ಕಾಶ್ಮೀರದಲ್ಲಿ ತನ್ನದೇ ಆದ ಬಿಜೆಪಿ ಸರ್ಕಾರವನ್ನು ಉರುಳಿಸಿಕೊಂಡು ಬಿಜೆಪಿ ಪಕ್ಷ, ದೇಶದ ಭದ್ರತೆಯ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂಬ ವಿಷಯವನ್ನು ಅಂದೇ ಸ್ಪಷ್ಟಪಡಿಸಿತ್ತು. ತನ್ನ ಸರ್ಕಾರ ಉರುಳಿದ ತಕ್ಷಣ ರಾಷ್ಟ್ರಪತಿ ಆಡಳಿತ ಜಾರಿಗೆ ತಂದು ಸೇನೆಗೆ ಸಂಪೂರ್ಣ ಸ್ವತಂತ್ರವನ್ನು ನೀಡಿ, ಕಾಶ್ಮೀರದ ಗಲ್ಲಿಗಲ್ಲಿಗಳಲ್ಲೂ ಅಡಗಿಕೊಂಡಿರುವ ಉಗ್ರರು ಹಾಗೂ ದೇಶದ್ರೋಹಿಗಳನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡಲು ಸೇನೆಗೆ ಆದೇಶ ನೀಡಿ, ಜಮ್ಮು-ಕಾಶ್ಮೀರದಲ್ಲಿ ಭಾರತದ ವೈಭವವನ್ನು ಮರಳಿ ಪುನಃಸ್ಥಾಪಿಸಲು ಹಗಲು ಇರುಳು ಶ್ರಮವಹಿಸುತ್ತಿದೆ. ಅದರಲ್ಲಿಯೂ ಅಮಿತ್ ಶಾ ಗೃಹಮಂತ್ರಿ ಆದಮೇಲೆ ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಹೆಡೆಮುರಿ ಕಟ್ಟುವ ಕೆಲಸ ಮತ್ತಷ್ಟು ಚುರುಕಾಗಿದೆ. ಇದೀಗ ಮತ್ತೊಂದು ಐತಿಹಾಸಿಕ ನಿರ್ಧಾರದ ಮೂಲಕ ಅಮಿತ್ ಶಾ ರವರು, ದೇಶದ್ರೋಹಿಗಳಿಗೆ ತಾನು ಎಷ್ಟು ಕಂಟಕ ಎಂಬುದನ್ನು ಸಾಬೀತು ಮಾಡಿದ್ದಾರೆ.ಇಷ್ಟು ದಿವಸ ಉಗ್ರರ ಮೇಲೆ ಕಠಿಣ ಆದೇಶಗಳನ್ನು ಹೊರಡಿಸಿದ್ದ ಅಮಿತ್ ಶಾ ರವರು, 10000 ಯೋಧರನ್ನು ನಿಯೋಜನೆ ಮಾಡಿದ ಬಳಿಕ ಇದೀಗ ಮಹತ್ವದ ಆದೇಶ ಹೊರಡಿಸಿದ್ದಾರೆ.

ಕಾಶ್ಮೀರದಲ್ಲಿ ಭಾರತದ ಸ್ವಾತಂತ್ರ ದಿನಾಚರಣೆ ಹತ್ತಿರ ಬರುತ್ತಿರುವ ಕಾರಣ ಕೆಲವು ಕಿಡಿಗೇಡಿಗಳು ಕಾಶ್ಮೀರ ಪಾಕಿಸ್ತಾನದ್ದು, ನಮ್ಮದು ಇಸ್ಲಾಮಿಕ್ ರಾಷ್ಟ್ರ, ನಾವು ಪಾಕಿಸ್ತಾನಕ್ಕೆ ಸೇರಬೇಕು ಎಂಬ ಘೋಷಣೆಗಳನ್ನು ಕೂಗುವುದನ್ನು ನಿಷೇಧ ಮಾಡಿ ಯಾರಾದರೂ ಒಂದು ವೇಳೆ ಈ ರೀತಿಯ ದೇಶ ದ್ರೋಹಿ ಹೇಳಿಕೆಗಳನ್ನು ನೀಡಿದ್ದಲ್ಲಿ ಅಥವಾ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನೆಯ ಸಂಘಟನೆ ಧ್ವಜ ಹಾರಿಸಿದ್ದಲ್ಲಿ ಕಂಡಲ್ಲಿ ಗುಂಡಿಕ್ಕಿ ಕೊಲ್ಲಿ ಎಂಬ ಆದೇಶವನ್ನು ಹೊರಡಿಸಿದ್ದಾರೆ. ಭಾರತ ಸರ್ವ ಮತೀಯ ಸಮಾನವಾದ ದೇಶ ಇಲ್ಲಿ ದೇಶದ್ರೋಹಿಗಳಿಗೆ ಯಾವುದೇ ಆಸ್ಪದ ಇರುವುದಿಲ್ಲ ಎಂಬುದನ್ನು ಮತ್ತೊಮ್ಮೆ ಈ ಆದೇಶದ ಮೂಲಕ ಸಾರಿ ಹೇಳಿದ್ದಾರೆ. ಅಮಿತ್ ಶಾ ರವರು ಈ ರೀತಿಯ ಎಷ್ಟೇ ಕಠಿಣ ನಿರ್ಧಾರ ತೆಗೆದುಕೊಂಡರು, ದೇಶ ಎಂದು ಬಂದಾಗ ಪಕ್ಷಬೇಧವನ್ನು ಮರೆತು ದಯವಿಟ್ಟು ಎಲ್ಲರೂ ಬೆಂಬಲಿಸಬೇಕು ಎಂಬುದು ನಮ್ಮ ಅಭಿಪ್ರಾಯ.

Post Author: Ravi Yadav