ಮಿರಾಜ್ 2000 ಪತನದಲ್ಲಿ ಮೃತಪಟ್ಟ ಸೈನಿಕನ ಪತ್ನಿ ಇದೀಗ ಏನು ಮಾಡಲಿದ್ದಾರೆ ಗೊತ್ತಾ??

ಕೆಲವೇ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಲೋಹದ ಹಕ್ಕಿಗಳ ಪ್ರದರ್ಶನ ಇಡೀ ದೇಶದ ಗಮನ ಸೆಳೆದಿತ್ತು. ಭಾರತೀಯ ವಾಯು ಪಡೆಯ ಯೋಧರು ಸಕಲ ಭಾರತೀಯ ವಾಯುಪಡೆಯ ಶಕ್ತಿಪ್ರದರ್ಶನ ಮಾಡಲು ವಿವಿಧ ಯುದ್ಧ ವಿಮಾನಗಳನ್ನು ಸಕಲ ರೀತಿಯಲ್ಲೂ ಸಜ್ಜುಗೊಳಿಸಿದ್ದರು, ಇನ್ನೇನು ವಾಯು ಸೇನೆಯ ಶಕ್ತಿ ಪ್ರದರ್ಶನಕ್ಕೆ ಕೇವಲ 24 ಗಂಟೆಗಳು ಇರುವ ಸಂದರ್ಭದಲ್ಲಿ ಅಭ್ಯಾಸ ಮಾಡಲು ತೆರಳಿದ ನಮ್ಮ ಹೆಮ್ಮೆಯ ಸೈನಿಕರಾದ ಸಮೀರ್ ಅಬ್ರೋಲ್ ಹಾಗೂ ಸಿದ್ಧಾರ್ಥ ನೇಗಿ ರವರು ಇದ್ದಕ್ಕಿದ್ದ ಹಾಗೇ ವಾಯು ಟ್ರಾಫಿಕ್ ಕಂಟ್ರೋಲ್ ರೂಮಿನ ಸಂಪರ್ಕವನ್ನು ಕಳೆದುಕೊಂಡು ಯುದ್ಧ ವಿಮಾನದ ನಿಯಂತ್ರಣವನ್ನು ಕಳೆದುಕೊಂಡಿದ್ದರು. ಇಬ್ಬರೂ ಪೈಲೆಟ್ ಗಳು ಸಹ ಈ ವಿಷಯ ತಿಳಿದ ಕೂಡಲೇ ವಿಮಾನದಿಂದ ಕೆಳಕ್ಕೆ ಜಿಗಿದಿದ್ದರು, ಆದರೆ ದುರದೃಷ್ಟವಶಾತ್ ಅವರು ಬದುಕುಳಿಯಲಿಲ್ಲ.ಇದೀಗ ಇದೇ ದುರಂತದಲ್ಲಿ ಮೃತಪಟ್ಟ ಭಾರತೀಯ ವಾಯುಪಡೆಯ ಯೋಧ ಸಮೀರ್ ಅಬ್ರೋಲ್ ರವರ ಪತ್ನಿ , ತನ್ನ ಪತಿಯ ಸಾವಿಗೆ ದೃತಿಗೆಡದೆ ಇದೀಗ ಸರ್ವಿಸಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ತೇರ್ಗಡೆ ಗೊಂಡಿದ್ದಾರೆ.

ಈ ಮೂಲಕ ತಮ್ಮ ಪತಿಯಂತೆಯೇ ಭಾರತೀಯ ವಾಯು ಸೇನೆಯನ್ನು ಸೇರಲು ಅವಕಾಶ ಲಭ್ಯವಾಗಿದೆ. ಭಾರತೀಯ ಸೇನೆಯನ್ನು ಸೇರುವುದು ನನ್ನ ಪ್ರಮುಖ ಗುರಿ ಎಂದು ದೃತಿಗೆಡದೆ ಪರೀಕ್ಷೆ ಎದುರಿಸಿದ ಗರಿಮಾ ಅಬ್ರೋಲ್ ರವರು, ಇದೀಗ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, 2020 ರ ಜನವರಿಯಲ್ಲಿ ಭಾರತೀಯ ವಾಯುಸೇನೆ ಸೇರಲಿದ್ದಾರೆ ಎಂದು ಅಧಿಕೃತ ಮಾಹಿತಿಗಳಿಂದ ತಿಳಿದುಬಂದಿದೆ. ಇದೇ ವಿಷಯವನ್ನು ಭಾರತೀಯ ವಾಯುಸೇನೆಯ ನಿವೃತ್ತ ಏರ್ ಮಾರ್ಷಲ್ ಅನಿಲ್ ಚೋಪ್ರಾ ರವರು ಟ್ವಿಟ್ಟರ್ನಲ್ಲಿ ಘೋಷಣೆ ಮಾಡಿದ್ದಾರೆ. ನೀವು ಏನೇ ಹೇಳಿ, ಭಾರತೀಯ ಸೇನೆಯನ್ನು ಹಲವಾರು ಭಾರತೀಯರು ಮನಬಂದಂತೆ ಟೀಕೆ ಮಾಡುತ್ತಿದ್ದಾರೆ, ಈ ಎಲ್ಲದರ ನಡುವೆ ತನ್ನ ಪತಿಯನ್ನು ಕಳೆದುಕೊಂಡರು ಸಹ ಭಾರತೀಯ ವಾಯು ಸೇನೆಯನ್ನು ಸೇರಿ ದೇಶಸೇವೆ ಮಾಡಲು ಗರಿಮಾ ಅಬ್ರೋಲ್ ಅವರು ಸಿದ್ಧರಾಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಇದು ಅವರಿಗೆ ಇರುವ ದೇಶಪ್ರೇಮವನ್ನು ಸಾರಿ ಹೇಳುತ್ತದೆ. ಈ ರೀತಿಯ ಸೈನಿಕರನ್ನು ಮನಬಂದಂತೆ ಟೀಕೆ ಮಾಡುವ ರಾಜಕಾರಣಿಗಳಿಗೆ ಏನು ಹೇಳಬೇಕು ಎಂಬುದು ನಮಗೆ ತಿಳಿಯುತ್ತಿಲ್ಲ !!