ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭರ್ಜರಿ ಜಯ: ಬಯಲಾಯಿತು ಪಾಕಿಸ್ತಾನದ ಕುತಂತ್ರ ನೀತಿ, ಮತ್ತೊಮ್ಮೆ ಬೆತ್ತಲಾದ ಪಾಕಿಸ್ತಾನ

ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭರ್ಜರಿ ಜಯ: ಬಯಲಾಯಿತು ಪಾಕಿಸ್ತಾನದ ಕುತಂತ್ರ ನೀತಿ, ಮತ್ತೊಮ್ಮೆ ಬೆತ್ತಲಾದ ಪಾಕಿಸ್ತಾನ

ಮಾಜಿ ಭಾರತದ ಹೆಮ್ಮೆಯ ನೌಕಾಧಿಕಾರಿ ಕುಲಭೂಷಣ್ ಜಾಧವ್ ರವರಿಗೆ ಪಾಕಿಸ್ತಾನ ದೇಶವು ವಿಧಿಸಲಾಗಿರುವ ಗಲ್ಲು ಶಿಕ್ಷೆಯ ಬಗ್ಗೆ ಅಂತರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿದೆ. ಪಾಕಿಸ್ತಾನವು ಕುಲಭೂಷಣ್ ಜಾಧವ್ ರವರನ್ನು ಭಾರತದ ಗೂಢಚಾರಿ ಹಾಗೂ ಈತನೊಬ್ಬ ಉಗ್ರ ಎಂದು ಆರೋಪ ಮಾಡಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಲ್ಲಿ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು. ಇದರಿಂದ ಭಾರತ ದೇಶವು ಅಕ್ಷರಸಹ ಕೆಂಡಾಮಂಡಲವಾಗಿ, ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿತ್ತು. ಇನ್ನು ಮೊದಲಿನಿಂದಲೂ ಈ ವಿಷಯವಾಗಿ ನರೇಂದ್ರ ಮೋದಿರವರು ನಾವು ಕುಲಭೂಷಣ್ ಜಾಧವ್ ರವರ ಬೆಂಬಲಕ್ಕಿದ್ದೇವೆ. ಅವರಿಗೆ ಏನೇ ತೊಂದರೆ ನೀಡಿದರೂ ನಾವು ಸುಮ್ಮನೆ ಕೂರುವ ಜಾಯಮಾನದವರಲ್ಲ ಎಂದು ಹೇಳಿಕೊಂಡು ಬರುತ್ತಿದ್ದರು. ಹಲವಾರು ಬಾರಿ ತಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ಪಾಕಿಸ್ತಾನಕ್ಕೆ ತಿಳಿಸಿದ್ದರು.

ಇನ್ನು ಇಂದು ಪಾಕಿಸ್ತಾನವು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ರವರನ್ನು ಗೂಢಚಾರಿ ಅಥವಾ ಉಗ್ರ ಎಂದು ಸಾಬೀತು ಮಾಡಲು ಸಾಧ್ಯವಾಗಲಿಲ್ಲ, ಭಾರತದ ವಕೀಲರು ಅತ್ಯಂತ ಸಮರ್ಥವಾಗಿ ಈ ಪ್ರಕರಣವನ್ನು ನಿಭಾಯಿಸಿ ಪಾಕಿಸ್ತಾನವು ಯಾವುದೇ ಆರೋಪಗಳನ್ನು ನಿರೂಪಿಸಲು ಸಾಧ್ಯವೇ ಇರದಂತೆ ಕಾನೂನನ್ನು ನ್ಯಾಯಾಲಯದ ಮುಂದೆ ತೆರೆದಿಟ್ಟಿದ್ದರು.ಭಾರತದ ಪರವಾಗಿ ವಾದ ಮಂಡಿಸಿದ ವಕೀಲರು ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಕುಲಭೂಷಣ್ ಜಾಧವ್ ರವರನ್ನು ಭೇಟಿ ಮಾಡಿ ಸಂವಹನ ನಡೆಸಲು ಪಾಕಿಸ್ತಾನವು ಭಾರತಕ್ಕೆ ಯಾವುದೇ ಅನುಮತಿ ನೀಡಿಲ್ಲ ಎಂದು ಪ್ರತಿಪಾದಿಸಿದರು. ವಾದವಿವಾದಗಳನ್ನು ಪರಿಶೀಲಿಸಿದ ಅಂತರಾಷ್ಟ್ರೀಯ ನ್ಯಾಯಾಲಯವು ಕುಲಭೂಷಣ್ ಜಾಧವ್ ರವರಿಗೆ ಭಾರತದ ಕಡೆಯಿಂದ ರಾಜತಾಂತ್ರಿಕ ನೆರವು ಪಡೆಯುವುದಕ್ಕೆ ಅನುಮತಿ ನೀಡಿ ಗಲ್ಲುಶಿಕ್ಷೆಗೆ ಮಧ್ಯಂತರ ತಡೆ ನೀಡಿದೆ. ಯಾವುದೇ ಆರೋಪಗಳನ್ನು ಸಾಬೀತು ಮಾಡಲಾಗದೇ ಪಾಕಿಸ್ತಾನವು ಇಂದು ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿ ನಿಂತಿತ್ತು.