ಕುಮಾರಸ್ವಾಮಿ ರವರಿಗೆ ಮತ್ತೊಂದು ಶಾಕ್ ! ಭೀತಿಯಲ್ಲಿ ಇದೇಯಾ ಬಿಜೆಪಿ??

ಕುಮಾರಸ್ವಾಮಿ ರವರಿಗೆ ಮತ್ತೊಂದು ಶಾಕ್ ! ಭೀತಿಯಲ್ಲಿ ಇದೇಯಾ ಬಿಜೆಪಿ??

ಕಳೆದ ಒಂದು ವರ್ಷಗಳಿಂದಲೂ ಸರ್ಕಾರ ಉರುಳುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದ್ಯಾಗೋ ಈ ಹಿಂದೆ ಪತನದ ಅಂಚಿಗೆ ಬಂದು ದೋಸ್ತಿ ಸರ್ಕಾರ ಬಚಾವ್ ಆಗುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಕೈಮೀರಿ ದಂತೆ ಕಾಣುತ್ತಿದೆ, ಅತೃಪ್ತ ಶಾಸಕರು ತಮ್ಮ ನಿಲುವಿಗೆ ಬದ್ಧ ಇರುವುದಾಗಿ ಘೋಷಿಸಿಕೊಂಡು ಮುಂಬೈನಲ್ಲಿ ಯಾವ ಪಕ್ಷದ ನಾಯಕರಿಗೂ ಮಾತನಾಡಲು ಸಹ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಇದೇ ಗುರುವಾರದಂದು ಕುಮಾರಸ್ವಾಮಿ ರವರು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿದ ಕೂಡಲೇ ಎಲ್ಲ ಅತೃಪ್ತ ಶಾಸಕರು ನಾವು ಅಂದು ವಿಧಾನಸಭೆಗೆ ಬರುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಹೀಗಿರುವಾಗ ಕುಮಾರಸ್ವಾಮಿ ರವರಿಗೆ ಉಳಿದಿದ್ದು ಏಕೈಕ ದಾರಿ, ಅದುವೇ ಆಪರೇಷನ್ ಜೆಡಿಎಸ್.

ಹೌದು ಆಪರೇಷನ್ ಜೆಡಿಎಸ್ ಮಾಡಿ ಬಿಜೆಪಿ ಪಕ್ಷದ ಹಲವಾರು ಶಾಸಕರನ್ನು ಜೆಡಿಎಸ್ ಪಕ್ಷದತ್ತ ಸೆಳೆಯಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಮಾತುಗಳಿಗೆ ಮತ್ತಷ್ಟು ಪೂರಕವಾಗಿ ಬಿಜೆಪಿ ಪಕ್ಷದ ಎಲ್ಲಾ ಶಾಸಕರು ರೆಸಾರ್ಟ್ ವಾಸ್ತವ್ಯ ಆರಂಭಮಾಡಿ ಆಪರೇಷನ್ ಜೆಡಿಎಸ್ ವಿಫಲ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೂ ಸಹ ಒಂದು ವೇಳೆ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಅಡ್ಡಮತದಾನ ಆಗಬಹುದು ಎಂಬ ಭೀತಿಯಿಂದ ಇಂದು ಬಿಜೆಪಿ ಪಕ್ಷವು ತನ್ನ 105 ಶಾಸಕರಿಗೂ ವಿಪ್ ಜಾರಿಗೊಳಿಸಿ, ಎಲ್ಲಾ ಶಾಸಕರು ಸದನದಲ್ಲಿ ಗುರುವಾರದಂದು ಹಾಜರಿರಬೇಕು ಹಾಗೂ ವಿಶ್ವಾಸಮತದ ವಿರುದ್ಧ ಮತ ಚಲಾಯಿಸಬೇಕು ಎಂದು ವಿಪ್ ಜಾರಿ ಮಾಡಲಾಗಿದೆ. ಒಟ್ಟಿನಲ್ಲಿ ಬಿಜೆಪಿ ಪಕ್ಷವು ಭೀತಿಯಿಂದ ಈ ರೀತಿ ಮಾಡಿದ್ದರೂ ಸಹ ಇದರಿಂದ ಕುಮಾರಸ್ವಾಮಿ ರವರಿಗೆ ಕಂಟಕ ಮತ್ತಷ್ಟು ಹೆಚ್ಚಾಗಿದೆ. ಒಟ್ಟಿನಲ್ಲಿ ದೋಸ್ತಿ ಸರ್ಕಾರದ ಭವಿಷ್ಯ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.