ದೇಶದ್ರೋಹಿಗಳಿಗೆ ಮತ್ತೊಂದು ಶಾಕ್ ನೀಡಿದ ಶಾ ! ಎಗರಾಡಿದ ಓವೈಸಿ ಬಾಯಿಮುಚ್ಚಿಸಿದ್ದು ಹೇಗೆ ಗೊತ್ತಾ??

ದೇಶದ್ರೋಹಿಗಳಿಗೆ ಮತ್ತೊಂದು ಶಾಕ್ ನೀಡಿದ ಶಾ ! ಎಗರಾಡಿದ ಓವೈಸಿ ಬಾಯಿಮುಚ್ಚಿಸಿದ್ದು ಹೇಗೆ ಗೊತ್ತಾ??

ಇಂದು ಲೋಕಸಭೆಯಲ್ಲಿ ಕೆಲವು ವಿದ್ಯಮಾನಗಳನ್ನು ಗಮನಿಸಿದರೆ ನಿಮ್ಮ ಕಣ್ಣು ಕೆಂಪಗಾಗುತ್ತದೆ. ಇಂದು ನಡೆದ ಲೋಕಸಭೆಯಲ್ಲಿ ಅಮಿತ್ ಶಾ ರವರು ದೇಶದ ವಿರುದ್ಧ ಕಿಡಿ ಕಾರುವ ಭಯೋತ್ಪಾದಕರನ್ನು ಸಂಪೂರ್ಣವಾಗಿ ಮಟ್ಟಹಾಕಲು ದೇಶದಲ್ಲಿ ಮತ್ತು ವಿದೇಶಗಳಲ್ಲಿ ಭಯೋತ್ಪಾದಕ ಪ್ರಕರಣಗಳ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗೆ ಹೆಚ್ಚಿನ ಅಧಿಕಾರವನ್ನು ನೀಡಿ, ಎನ್ಐಎ ಮಸೂದೆಗೆ ತಿದ್ದುಪಡಿ ವಾದವನ್ನು ಮಂಡಿಸಿದರು. ಇದಕ್ಕೆ ಬಿಜೆಪಿ ಪಕ್ಷ ಹಾಗೂ ಬಿಜೆಪಿ ಪಕ್ಷದ ಮೈತ್ರಿಕೂಟದ ಬೆಂಬಲವಿದ್ದ ಕಾರಣ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಅಂಗೀಕಾರವಾಯಿತು, ಆದರೆ ಕೆಲವು ವಿದ್ಯಮಾನಗಳನ್ನು ಗಮನಿಸಿದರೆ ನಿಮಗೆ ಹಲವಾರು ಪ್ರಶ್ನೆಗಳು ಮೂಡುತ್ತವೆ. ಅದರಲ್ಲಿಯೂ ನಮ್ಮ ದೇಶದ ವಿರುದ್ಧ ಕತ್ತಿ ಮಸೆಯುವ ಭಯೋತ್ಪಾದಕರ ಮಟ್ಟಹಾಕಲು ಹೆಚ್ಚಿನ ಅಧಿಕಾರ ನೀಡಿದರೆ ಯಾಕೆ ಕೆಲವರಿಗೆ ಉರಿ ಎಂಬ ಪ್ರಶ್ನೆ ಮೂಡುತ್ತದೆ. ಯಾಕೆ ಗೊತ್ತಾ??

ಇಂದು ಬಿಜೆಪಿ ಪಕ್ಷಕ್ಕೆ ದೇಶದ ಭದ್ರತೆಯ ವಿಷಯದಲ್ಲಿ ತಾನು ಎಂದಿಗೂ ರಾಜಿಯಾಗುವುದಿಲ್ಲ ಎಂಬ ಮಾತಿಗೆ ತಕ್ಕಂತೆ ಭಯೋತ್ಪಾದಕರನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸೈಬರ್ ಅಪರಾಧಗಳು ಮತ್ತು ಮಾನವ ಕಳ್ಳ ಸಾಕಾಣಿಕೆಯ ಪ್ರಕರಣಗಳ ತನಿಖೆಯನ್ನು ನಡೆಸಲು ಭಯೋತ್ಪಾದಕ ನಿಗ್ರಹ ಮಂಡಳಿಯಾದ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸಂಪೂರ್ಣವಾಗಿ ಅಧಿಕಾರ ನೀಡುವ ಬಗ್ಗೆ ಮಸೂದೆ ಮಂಡಿಸಿ ದರು. ಅಷ್ಟೇ ಅಲ್ಲದೆ ಭಾರತೀಯರ ಹಿತಾಸಕ್ತಿಗಳ ಮೇಲೆ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಯಾವುದೇ ಭಾರತೀಯರ ಮೇಲಿನ ಭಯೋತ್ಪಾದಕ ದಾಳಿಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸುವ ಅಧಿಕಾರವನ್ನು ನೀಡಲು ಅಮಿತ್ ಶಾ ರವರು ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಿದರು ‌

ಆದರೆ ಅದ್ಯಾಕೋ ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಎಲ್ಲಾ ಎನ್ ಡಿಎ ಮೈತ್ರಿಕೂಟದ ಪಕ್ಷಗಳನ್ನು ಹೊರತುಪಡಿಸಿ ಉಳಿದ ಪಕ್ಷಗಳು ಈ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಲಿಲ್ಲ, ಅದರಲ್ಲಿಯೂ ಅಸದುದ್ದಿನ್ ಓವೈಸಿ ರವರು ಅಮಿತ್ ಶಾ ರವರ ಈ ಮಸೂದೆಯ ಮೇಲೆ ಟೀಕೆಗಳ ಸುರಿಮಳೆಯನ್ನು ಸುರಿಸಿದರು. ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದೇ ಅಮಿತ್ ಶಾ ರವರು ಓವೈಸಿ ರವರ ಪ್ರತಿಯೊಂದು ಟೀಕೆಗಳಿಗೂ ತಕ್ಕ ಉತ್ತರವನ್ನು ನೀಡಿ ಓವೈಸಿ ರವರ ಬಾಯಿ ಮುಚ್ಚಿಸಿದರು. ಮೊದಲು ಕೇಂದ್ರಸರ್ಕಾರವು ಧರ್ಮದ ಆಧಾರದ ಮೇಲೆ ಈ ರೀತಿಯ ತಿದ್ದುಪಡಿಯನ್ನು ಜಾರಿಗೊಳಿಸುತ್ತಿದೆ ಎಂಬ ಆರೋಪ ಮಾಡಿದ ವಿಪಕ್ಷ ನಾಯಕರಿಗೆ ಅಮಿತ್ ಶಾ ರವರು ಕೇಂದ್ರ ಸರ್ಕಾರವು ಎಂದಿಗೂ ಆರೋಪಿಯ ಧರ್ಮವನ್ನು ಪರಿಗಣಿಸದೆ ಭಯೋತ್ಪಾದನೆಯ ಅಂತ್ಯಕ್ಕೆ ಮಾತ್ರ ಒತ್ತು ನೀಡಲಿದೆ, ಆದರೆ ದೇಶದ ವಿರುದ್ಧ ಕತ್ತಿಮಸೆದ ರೆ ಯಾವ ಧರ್ಮ ಎಂದು ನಾವು ನೋಡುವುದಿಲ್ಲ ಎಂದರು.

ಇನ್ನು ಸುಖಾಸುಮ್ಮನೆ ಬಿಜೆಪಿ ಪಕ್ಷದ ನಾಯಕರು ಮಸೂದೆ ಮಂಡಿಸುವ ಸಮಯದಲ್ಲಿ ತಮ್ಮ ವಾದವನ್ನು ಮಂಡಿಸುತ್ತಿರುವ ಹೊತ್ತಿನಲ್ಲಿ ಸುಖಾಸುಮ್ಮನೆ ಓವೈಸಿ ರವರು ಮೂಗು ತೂರಿಸುತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ರವರು ನಿಮ್ಮ ಪಕ್ಷದ ಸದಸ್ಯರು ಮಾತನಾಡುವಾಗ ನಾವು ಸುಮ್ಮನೆ ಇದ್ದೇವು, ಪ್ರತಿಪಕ್ಷ ಸದಸ್ಯರು ಮಾತನಾಡುವ ಸಂದರ್ಭದಲ್ಲಿ ಅಭಿಪ್ರಾಯವನ್ನು ಆಲಿಸುವ ತಾಳ್ಮೆ ಹೊಂದಿರಬೇಕು ಎಂದು ಬೆಟ್ಟು ಮಾಡಿ ಓವೈಸಿ ರವರಿಗೆ ತೋರಿಸಿದರು. ಇದರಿಂದ ಮತ್ತಷ್ಟು ಕೆರಳಿದ ಓವೈಸಿ ರವರು ತನ್ನನ್ನು ಬೆಟ್ಟುಮಾಡದಂತೆ ಅಮಿತ್ ಷಾ ರವರಿಗೆ ಸೂಚಿಸಿ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಅಮಿತ್ ಶಾ ರವರು ನಾನು ನಿಮ್ಮನ್ನು ಹೆದರಿಸುತ್ತಿಲ್ಲ, ‌ಪ್ರತಿಪಕ್ಷ ಸದಸ್ಯರ ಎದುರು ಅಭಿಪ್ರಾಯವನ್ನು ಕೇಳುವ ತಾಳ್ಮೆ ನಿಮಗೆ ಇರಬೇಕು ನಿಮ್ಮ ಮನಸ್ಸಿನಲ್ಲಿ ಭೀತಿ ಇದ್ದರೆ ನಾನು ಏನು ಮಾಡಲು ಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ. ಇಷ್ಟೆಲ್ಲಾ ನಡೆದರೂ ಈಗಲೂ ಸಹ ಒಂದು ಅರ್ಥವಾಗುತ್ತಿಲ್ಲ, ದೇಶ ವಿರೋಧಿ ಕಾನೂನು ಜಾರಿಯಾದರೆ ವಿಪಕ್ಷ ನಾಯಕರಿಗೆ ಯಾಕೆ ಉರಿ?? ನಿಮಗೇನಾದರೂ ತಿಳಿದರೆ ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಇಲ್ಲವಾದರೆ ಆ ಪಕ್ಷದ ಕಾರ್ಯಕರ್ತರಿಗೆ ತಿಳಿಸಲು ಹೇಳಿ.