ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಾಲಿಗೆ ಹರಿಬಿಟ್ಟ ರೇವಣ್ಣ ! ದೇವಸ್ಥಾನದ ಒಳಗಡೆ ಇದೆಂಥಾ ಕೃತ್ಯ??

ಲೋಕೋಪಯೋಗಿ ಇಲಾಖೆಯ ಸಚಿವ ರೇವಣ್ಣ ರವರು ಇಂದು ಭಾರೀ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಒಂದು ಕಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಅತೃಪ್ತ ಶಾಸಕರನ್ನು ಮನವೊಲಿಸಿ ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ರೇವಣ್ಣ ಅವರು ಮಾತ್ರ ದೇವರ ದಯೆಯಿಂದ ಸರ್ಕಾರ ಉಳಿಯುತ್ತದೆ ಎಂದು ಕಳೆದ ಹಲವಾರು ದಿನಗಳಿಂದ ಬರಿಗಾಲಲ್ಲಿ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ದೇವರ ಮೇಲೆ ಇಷ್ಟೆಲ್ಲಾ ನಂಬಿಕೆಯಿಟ್ಟಿರುವ ರೇವಣ್ಣ ರವರು ಇಂದು ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ಈ ವಿಚಾರ ಇದೀಗ ರಾಜ್ಯದ ಎಲ್ಲೆಡೆ ಸದ್ದು ಮಾಡುತ್ತಿದ್ದು ರೇವಣ್ಣನವರ ನಡವಳಿಕೆಗೆ ಬಾರಿ ಆಕ್ರೋಶ ವ್ಯಕ್ತವಾಗಿದೆ. ಮೊದಲಿನಿಂದಲೂ ದೇವರಿ ನಲ್ಲಿ ಭಾರಿ ನಂಬಿಕೆ ಇಟ್ಟಿದ್ದಾರೆ ರೇವಣ್ಣ ಅವರು, ಪ್ರತಿಯೊಬ್ಬ ಹಿಂದುವೂ ಪವಿತ್ರ ಸ್ಥಾನ ಎಂದು ಪೂಜಿಸುವ ದೇವಾಲಯದಲ್ಲಿ ಈ ರೀತಿ ನಡೆದುಕೊಂಡದ್ದು ಎಷ್ಟು ಸರಿ?? ವಿವರಗಳಿಗಾಗಿ ಕೆಳಗಡೆ ಓದಿ.

ಇಂದು ಸರ್ಕಾರ ಉಳಿಸು ಎಂದು ದೇವಿಯನ್ನು ಬೇಡಿಕೊಳ್ಳಲು ದುರ್ಗಾ ಪರಮೇಶ್ವರಿ ದೇವಿಯ ಸನ್ನಿಧಾನಕ್ಕೆ ಬಂದ ರೇವಣ್ಣ ಅವರನ್ನು ಮಾಧ್ಯಮದವರು ತಮ್ಮ ವೃತ್ತಿಯ ಭಾಗವಾಗಿ ಫೋಟೋ ತೆಗೆದಿದ್ದಾರೆ, ಬಹುಶಹ ಅತೃಪ್ತ ಶಾಸಕರ ಮೇಲಿದ್ದ ಆಕ್ರೋಶವನ್ನು ಮಾಧ್ಯಮದವರ ಮೇಲೆ ತೋರಿಸಿರುವ ರೇವಣ್ಣ ಅವರು ತಾನು ದೇವಿ ಸನ್ನಿಧಿಯಲ್ಲಿ ಇದ್ದೇನೆ ಎಂಬುದನ್ನು ನೋಡದೆ ಅವಾಚ್ಯಶಬ್ದಗಳಿಂದ ಮಾಧ್ಯಮದವರನ್ನು ನಿಂದಿಸಿದ್ದಾರೆ. ಕಚಡ ನನ್ನ ಮಕ್ಕಳಾ, ನಾಚಿಕೆ ಆಗುವುದಿಲ್ಲವೇ?? ಎಂದು ಫೋಟೋ ತೆಗೆಯುತ್ತಿದ್ದ ಮಾಧ್ಯಮದವರ ಮೇಲೆ ಕಿಡಿಕಾರಿರುವ ರೇವಣ್ಣನವರು, ತಮ್ಮ ಅಧಿಕಾರವನ್ನು ಬಳಸಿಕೊಂಡು ಪೊಲೀಸರಿಗೆ ಸೂಚನೆ ನೀಡಿ ಫೋಟೋ ಹಾಗೂ ವಿಡಿಯೋಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿಸಿ ಅತಿರೇಕದ ವರ್ತನೆ ತೋರಿದ್ದಾರೆ. ರೇವಣ್ಣ ರವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದೇವಸ್ಥಾನಕ್ಕೆ ಕನಿಷ್ಠ ಗೌರವವನ್ನು ನೀಡಬೇಕು ಎಂಬ ಅರಿವಿಲ್ಲವೆಂದು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.