ಮೋದಿ ಮಹತ್ವಕಾಂಕ್ಷಿ ಯೋಜನೆಗೆ ಕಿಂಚಿತ್ತೂ ಬೆಲೆ ನೀಡದ ಸಂಸದೆ ! ರೊಚ್ಚಿಗೆದ್ದ ನೆಟ್ಟಿಗರು ! ದುರಹಂಕಾರದ ಪರಮಾವಧಿಯೇ??

ದೇಶದ ಜನರ ಆರೋಗ್ಯ ದೃಷ್ಟಿಯಿಂದ ಮತ್ತು ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮನಸ್ಸು ಸಹ ಸ್ವಚ್ಛವಾಗಿರುತ್ತದೆ ಎಂಬ ಉದ್ದೇಶದಿಂದ ಮಹಾತ್ಮ ಗಾಂಧಿ ರವರ ಸ್ವಚ್ಛ ಭಾರತದ ಮಹತ್ವಾಕಾಂಕ್ಷೆಯನ್ನು ಈಡೇರಿಸುವ ಉದ್ದೇಶದಿಂದ ನರೇಂದ್ರ ಮೋದಿ ರವರು ಕಳೆದ ಕೆಲವು ವರ್ಷಗಳ ಹಿಂದೆ ಸ್ವಚ್ಛ ಭಾರತ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದರು. ಯೋಜನೆಯ ಅಡಿಯಲ್ಲಿ ಅದೆಷ್ಟೋ ಕೋಟ್ಯಂತರ ಶೌಚಾಲಯಗಳು ನಿರ್ಮಿತವಾಗಿವೆ. ಅಷ್ಟೇ ಅಲ್ಲದೆ ಹಲವಾರು ಪ್ರದೇಶಗಳನ್ನು ಯುವ ಜನತೆಯು ಆಯ್ಕೆಮಾಡಿಕೊಂಡು ಯಾವ ರಾಜಕೀಯ ನಾಯಕರ ಹಂಗಿಲ್ಲದೇ ತಾವೇ ಖುದ್ದು ತಮ್ಮ ಸ್ವಂತ ಹಣದಿಂದ ಸ್ವಚ್ಛತಾ ಕಾರ್ಯಗಳನ್ನು ನಡೆಸಿ ಇಡೀ ಭಾರತವನ್ನು ಸ್ವಚ್ಛ ಭಾರತವನ್ನಾಗಿ ಪರಿವರ್ತನೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಈ ಯೋಜನೆಯಲ್ಲಿ ನಿರತರಾಗಿದ್ದಾರೆ.

ಖುದ್ದು ನರೇಂದ್ರ ಮೋದಿ ರವರೇ ತಾನು ವಿಶ್ವದಲ್ಲಿಯೇ ಬಲಾಢ್ಯ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ದೇಶದ ಪ್ರಧಾನಿ ಎಂಬ ಯಾವುದೇ ಆಲೋಚನೆ ಗಳಲ್ಲಿದೆ ಈ ಯೋಜನೆಯಲ್ಲಿ ಪಾಲ್ಗೊಂಡು ಹಲವಾರು ಬಾರಿ ಸ್ವಚ್ಛತಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಯೋಜನೆಗೆ ಇಡೀ ವಿಶ್ವವೇ ಬೇಷ್ ಎಂದಿದೆ, ಆದರೆ ಇಲ್ಲೊಬ್ಬರು ಸಂಸದೆ ಸ್ವಚ್ಛ ಭಾರತ ಯೋಜನೆಗೆ ಹಾಗೂ ನರೇಂದ್ರ ಮೋದಿರವರ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ನೀವು ಈ ಯೋಜನೆಗೆ ಕೈ ಜೋಡಿಸಿದೆ ಇದ್ದಲ್ಲಿ ಯಾವ ನಷ್ಟವೂ ಇಲ್ಲ, ಆದರೆ ಒಬ್ಬ ಸಂಸದೆಯಾಗಿ ಔಪಚಾರಿಕವಾಗಿ ಈ ಕೆಲಸ ಮಾಡಿದ್ದಕ್ಕೆ ನರೇಂದ್ರ ಮೋದಿರವರು ಸಹ ತಲೆತಗ್ಗಿಸಬೇಕಾದ ಅಂತಹ ಪರಿಸ್ಥಿತಿ ಎದುರಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷದ ಸಂಸದೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ನರೇಂದ್ರ ಮೋದಿ ರವರ ಮಹಾತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ ಅಭಿಯಾನವನ್ನು ಪ್ರಮೋಟ್ ಮಾಡುವ ಉದ್ದೇಶದಿಂದ ಇಂದು ಕೇಂದ್ರ ಹಣಕಾಸು ಖಾತೆ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವಾರು ಬಿಜೆಪಿ ಪಕ್ಷದ ಸಂಸದರು ಸಂಸತ್ ದೇಗುಲದ ಹೊರಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಎಲ್ಲಾ ಸಂಸದರು ಸಂಸತ್ತಿನ ಹೊರಭಾಗವನ್ನು ತಾವೇ ಪೊರಕೆ ಹಿಡಿದುಕೊಂಡು ಸ್ವಚ್ಛ ಮಾಡುತ್ತಿರುವ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸಂಸದೆ ಕಪ್ಪು ಕನ್ನಡಕ ಧರಿಸಿ ಟಿಪ್ ಟಾಪ್ ಆಗಿ ಬಂದಿದ್ದ ಹೇಮಾಮಾಲಿನಿ ರವರು ಪೊರಕೆಯಿಂದ ಗಾಳಿ ಸ್ವಚ್ಛ ಮಾಡುವಂತೆ ಪೊರಕೆಯನ್ನು ನೆಲಕ್ಕೆ ತಾಗಿಸದೇ ಸ್ವಚ್ಛಗೊಳಿಸುತ್ತಿದ್ದರು, ಇತರ ಸಂಸದರು ಪೊರಕೆಯಲ್ಲಿ ಕಸವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರೆ, ಹೇಮಮಾಲಿನಿ ರವರು ಮಾತ್ರ ನಗುತ್ತಾ ಕ್ಯಾಮರಾಗಳಿಗೆ ಪೋಸ್ ನೀಡಿಕೊಂಡು ಕಸ ಗುಡಿಸದೆ ಗಾಳಿ ಸ್ವಚ್ಛಗೊಳಿಸುತ್ತಿದ್ದರು.

ಹೇಮಾಮಾಲಿನಿ ರವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ, ಅಷ್ಟೇ ಅಲ್ಲದೆ ಬಹಳ ಮಹತ್ವಪೂರ್ಣ ಯೋಜನೆಯಾಗಿರುವ ಸ್ವಚ್ಛ ಭಾರತಕ್ಕೆ ಕಳಂಕ ತರುವ ರೀತಿಯಲ್ಲಿ ಬಿಜೆಪಿ ಪಕ್ಷದ ಸಂಸದ ನಡೆದುಕೊಂಡಿದ್ದಾರೆ ಎಂದು ಸ್ವತಹ ಮೋದಿ ರವರ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ ಎಂದ ಮೇಲೆ ಈ ರೀತಿ ಕಾಣಿಸಿಕೊಳ್ಳುವ ಅಗತ್ಯವಿರಲಿಲ್ಲ, ಆದರೆ ಕೆಲಸಮಾಡುವಂತೆ ನಾಟಕ ಮಾಡಿ ನೀವು ಯೋಜನೆಯ ಹಾಗೂ ಪಕ್ಷದ ಮರ್ಯಾದೆ ತೆಗೆದಿದ್ದೀರ ಎಂದು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರೇ ಆಗಲಿ ಯಾವ ಪಕ್ಷದ ಸಂಸದೇಯೇ ಆಗಲಿ ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸಬೇಕು ನಿರ್ವಹಿಸದೆ ಇದ್ದ ಸಂದರ್ಭದಲ್ಲಿ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದೆ ಎಂಬುದು ನಮ್ಮ ಅಭಿಪ್ರಾಯ ಅದಕ್ಕಾಗಿಯೇ ನಾವು ಈ ರೀತಿಯ ಪದಗಳನ್ನು ಬಳಸಿ ಪ್ರಶ್ನೆ ಮಾಡುತ್ತಿದ್ದೇವೆ. ಒಂದು ವೇಳೆ ನಮ್ಮ ಪದಗಳು ತಪ್ಪಿದ್ದಲ್ಲಿ ಕ್ಷಮೆ ಕೇಳಲು ನಾವು ಸಿದ್ಧ ಆದರೆ ಹೇಮಾಮಾಲಿನಿ ರವರು ಮಾಡಿದ್ದು ಸರಿ ಎಂದು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ.

Post Author: Ravi Yadav