ಹೊರಬಿತ್ತು ರಾಜ್ಯದ ಮಹಾ ಹಗರಣ ! ರೇವಣ್ಣ ರವರಿಗೆ ಬಿಗ್ ಶಾಕ್ ! ದೋಸ್ತಿಗಳಿಗೆ ಮರ್ಮಘಾತ!

ಇದೀಗ ಕರ್ನಾಟಕ ರಾಜಕೀಯದ ಮೇಲೆ ಇಡೀ ದೇಶದ ಗಮನ ನೆಟ್ಟಿದೆ. ಒಂದು ಕಡೆ ಆಂತರಿಕ ಜಗಳದಿಂದ ದೋಸ್ತಿ ಸರ್ಕಾರ ಉರುಳುತ್ತಿದೆ ಎಂಬ ಆರೋಪ ಕೇಳಿ ಬಂದರೂ ಸಹ ಮತ್ತೊಂದೆಡೆ ಬಿಜೆಪಿ ಪಕ್ಷದ ಆಪರೇಷನ್ ಕಮಲದಿಂದ ಈ ರೀತಿಯ ವಿದ್ಯಮಾನಗಳು ನಡೆಯುತ್ತಿವೆ ಎಂಬ ಆರೋಪಗಳು ಸಹ ಕೇಳಿಬಂದಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಪಕ್ಷವು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರ ನಡೆಗೆ ಅಡ್ಡಗಾಲು ಹಾಕುತ್ತಿದೆ. ಶಾಸಕರನ್ನು ಭೇಟಿ ಮಾಡಲು ಅನುವು ಮಾಡಿಕೊಡದೇ ಇರುವುದರಿಂದ ಬಿಜೆಪಿ ಪಕ್ಷವು ಆಪರೇಷನ್ ಕಮಲ ನಡೆಸುತ್ತಿದೆ ಎಂಬ ಅನುಮಾನ ಎಲ್ಲರಲ್ಲೂ ಕಾಡತೊಡಗಿದೆ. ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ಲೋಕೋಪಯೋಗಿ ಸಚಿವ ರೇವಣ್ಣ ರವರು ಸದ್ದು ಮಾಡಿದ್ದರು.

ಎಲ್ಲಾ ನಾಯಕರು ಸರಕಾರ ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದರೆ ಮತ್ತೊಂದೆಡೆ ರೇವಣ್ಣ ರವರು ಮಾತ್ರ ತಮ್ಮ ಕೆಲಸಗಳಲ್ಲಿ ಮುಳುಗಿದ್ದರು, ಕೇವಲ ಅಭಿವೃದ್ಧಿಯ ಕೆಲಸದಲ್ಲಿ ಮುಳುಗಿದ್ದರೆ ಬಹುಶಃ ಇಷ್ಟು ಸುದ್ದಿಯಾಗುತ್ತಿರಲಿಲ್ಲ. ಆದರೆ ರೇವಣ್ಣ ರವರು ಒಂದೇ ದಿನದಲ್ಲಿ ದಾಖಲೆಯ ರೀತಿ ಸುಮಾರು 800 ಇಂಜಿನಿಯರ್ಗಳನ್ನು ಬಡ್ತಿ ಹಾಗೂ ಹಲವಾರು ಎಂಜಿನಿಯರ್ ಗಳನ್ನು ವರ್ಗಾವಣೆ ಮಾಡಿದ್ದರು. ಸರ್ಕಾರ ಉರುಳುವ ಸೂಚನೆಗಳು ಕಾಣಸಿಗುತ್ತಿರುವಾಗ ರೇವಣ್ಣ ಅವರ ಈ ನಡೆ ಎಲ್ಲರಲ್ಲೂ ಅನುಮಾನ ಮೂಡಿಸಿತ್ತು. ಸರ್ಕಾರ ಉರುಳುವ ಟೆನ್ಶನ್ ಇಲ್ಲದೆ ಕೇವಲ ಒಂದು ದಿನದಲ್ಲಿ ಇಷ್ಟೆಲ್ಲ ಮಾಡಿದ್ದು ಯಾಕೆ ಎಂಬ ಅನುಮಾನ ಎಲ್ಲರಲ್ಲೂ ಕಾಡತೊಡಗಿತ್ತು !

ಸಾಮಾನ್ಯವಾಗಿ ಯಾವುದೇ ಒಬ್ಬ ಸಚಿವರು ಇಷ್ಟು ಕೆಲಸ ಮಾಡಿದ್ದು ಇತಿಹಾಸದಲ್ಲಿ ಇಲ್ಲ. ಹೀಗೆ ಇರುವಾಗ ರೇವಣ್ಣ ರವರು ಕೇವಲ ಒಂದೇ ಒಂದು ದಿನದಲ್ಲಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂದು ಎಲ್ಲರೂ ಯೋಚಿಸುತ್ತಿರುವ ಸಮಯದಲ್ಲಿ ರೈತ ಮೋರ್ಚ ಸಂಘಟನೆಯ ಎಸ್ ಲಿಂಗಮೂರ್ತಿ ರವರು ರಾಜ್ಯಪಾಲರಿಗೆ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ದಾಖಲೆಗಳ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ. ಹೌದು ಕಳೆದ ಒಂದು ವರ್ಷದಿಂದ ಎಸ್ಸಿ,ಎಸ್ಟಿ ಹಾಗೂ ಓಬಿಸಿ ಸಮುದಾಯದ ಎಂಜಿನಿಯರ್ಗಳು ವರ್ಗಾವಣೆ ಮಾಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಇದನ್ನೇ ರೇವಣ್ಣ ಅವರು ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಎಚ್ ಡಿ ರೇವಣ್ಣ ರವರು ಒಂದೇ ದಿನದಲ್ಲಿ 800 ಕ್ಕೂ ಹೆಚ್ಚು ಇಂಜಿನಿಯರ್ ಗಳಿಂದ ಹಣವನ್ನು ಪಡೆದು ಏಕಾಏಕಿ ಮನಬಂದಂತೆ ವರ್ಗಾವಣೆ ಮಾಡಿ ಬಡ್ತಿ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬರೋಬ್ಬರಿ 500 ಕೋಟಿ ಲಂಚ ಪಡೆದಿದ್ದಾರೆ ಎನ್ನಲಾಗುತ್ತಿದ್ದು, ಕೂಡಲೇ ರಾಜ್ಯಪಾಲರು ಈ ವರ್ಗಾವಣೆ ಹಾಗೂ ಬಡ್ತಿಯ ಆದೇಶಗಳಿಗೆ ತಡೆ ನೀಡಿ ಪ್ರತಿಯೊಬ್ಬರ ವಿಚಾರಣೆ ನಡೆಸಿ ರೇವಣ್ಣ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ. ಅಷ್ಟೇ ಅಲ್ಲದೆ ವರ್ಗಾವಣೆ ಕಡಿತದಲ್ಲಿ ,ಹಿಂದಿನ ದಿನಾಂಕ ನಮೂದಿಸಿ ಸಹಿ ಹಾಕಲಾಗಿದೆ, ಈ ಮೂಲಕ ಆದೇಶ ಜಾರಿಯಾಗುವಂತೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಇಡೀ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಲಿಂಗಮೂರ್ತಿ ರವರ ದೂರನ್ನು ರಾಜ್ಯಪಾಲರು ಸ್ವೀಕಾರ ಮಾಡಿದ್ದು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Post Author: Ravi Yadav