ಕಠಿಣ ಆದೇಶ ಹೊರಡಿಸಿ ದೋಸ್ತಿಗಳಿಗೆ ಬ್ರೇಕ್ ! ಕೊನೆಗೂ ಅಖಾಡಕ್ಕೆ ಇಳಿದ ರಾಜ್ಯಪಾಲರು !

ರಾಜ್ಯ ರಾಜಕೀಯದ ಬಗ್ಗೆ ನಿಮಗೆ ಹೆಚ್ಚು ತಿಳಿಸಬೇಕೆಂದಿಲ್ಲ, ಈಗಾಗಲೇ ಎಲ್ಲಿ ನೋಡಿದರೂ ರಾಜಕೀಯ ನಾಯಕರ ಕಿತ್ತಾಟ ಕಾಣುತ್ತಿದೆ. ವಿಪರ್ಯಾಸವೆಂದರೆ ಜನಪ್ರತಿನಿಧಿಗಳಾಗಿರುವ ಶಾಸಕರು ಜನರ ಮುಂದೆ ಕತ್ತಿನ ಪಟ್ಟಿ ಹಿಡಿದು ಕೊಂಡು ಹೊಡೆದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿದ್ದರೂ ಸಹ ಕೆಲವು ವಿಚಾರಗಳು ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದವು. ಒಂದೆಡೆ ಭಾರೀ ಹಗರಣ ನಡೆದಿದೆ ಎನ್ನಲಾಗುತ್ತಿರುವ ರೇವಣ್ಣನವರ ಟ್ರಾನ್ಸ್ಫರ್ ಹಾಗೂ ಪ್ರಮೋಷನ್ ನಿರ್ಧಾರ ಮತ್ತೊಂದು ಇಂದು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಹಲವಾರು ನಿರ್ಧಾರಗಳು. ಇದ್ದಕ್ಕಿದ್ದ ಹಾಗೆ ಇಷ್ಟು ದಿವಸ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳದ ಮೈತ್ರಿ ಸರ್ಕಾರವು ಇಂದು ಏಕಾಏಕಿ ರಾಜ್ಯದ ಎಲ್ಲಾ 30 ಜಿಲ್ಲಾ ಪಂಚಾಯಿತಿ ಹಾಗೂ 177 ತಾಲೂಕುಗಳಿಗೆ ಅನುದಾನವನ್ನು ಹೆಚ್ಚಳ ಮಾಡಲು ನಿರ್ಧಾರ ಮಾಡಿತ್ತು.

ಇದೇ ಇದೇ ರೀತಿ ಹತ್ತು ಹಲವಾರು ನಿರ್ಧಾರಗಳನ್ನು ತೆಗೆದುಕೊಂಡು ಸಚಿವ ಸಂಪುಟ ಸಭೆ ಭಾರಿ ಅನುಮಾನಕ್ಕೆ ದಾರಿಮಾಡಿಕೊಟ್ಟಿತು. ಒಂದು ಕಡೆ ಸರ್ಕಾರ ಉರುಳುತ್ತಿರುವ ಸಂದರ್ಭದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಇಷ್ಟೆಲ್ಲಾ ಪ್ರಮುಖ ನಿರ್ಧಾರಗಳು ಕೈಗೊಂಡಿರುವ ಕಾರಣವಾದರೂ ಏನು ಎಂಬ ಅನುಮಾನ ಎಲ್ಲರಲ್ಲೂ ಕಾಡತೊಡಗಿತ್ತು. ಈಗಾಗಲೇ ಸರ್ಕಾರ ಬಹುಮತ ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ, ಹೀಗಿರುವಾಗ ಈ ನಿರ್ಧಾರವನ್ನು ಯಾಕೆ ಕೈಗೊಂಡರು ಎಂದು ಯೋಚಿಸುತ್ತಿರುವ ಸಮಯದಲ್ಲಿ ರಾಜ್ಯಪಾಲರು ಅಖಾಡಕ್ಕಿಳಿದಿದ್ದಾರೆ. ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿದ್ದರೂ ಕೇವಲ ಕೆಲವೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಮಾತ್ರ ರಾಜ್ಯಪಾಲರ ಸದ್ದು ಕೇಳಿಸುತ್ತಿತ್ತು. ಯಾವುದೇ ಶಾಸಕರ ರಾಜೀನಾಮೆ ವಿಚಾರದಲ್ಲಿ ಧ್ವನಿ ಎತ್ತದ ರಾಜ್ಯಪಾಲರು ಇದ್ದಕಿದ್ದಹಾಗೆ ಇದೀಗ ಮೈತ್ರಿ ಸರ್ಕಾರಕ್ಕೆ ಲಗಾಮು ಹಾಕಲು ನಿರ್ಧಾರ ಮಾಡಿದ್ದಾರೆ.

ಹೌದು ಇದೀಗ ಕುಮಾರಸ್ವಾಮಿ ರವರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿರುವ ರಾಜ್ಯಪಾಲರು ಮೈತ್ರಿ ಸರ್ಕಾರದ ಕೆಲವು ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ಇನ್ನೂ ಸ್ಪೀಕರ್ ಹಾಗೂ ಸುಪ್ರೀಂಕೋರ್ಟ್ನ ಅಂಗಳದಲ್ಲಿ ಇದೆ. ಅತೃಪ್ತ ಶಾಸಕರ ರಾಜೀನಾಮೆ ವಿಷಯವಾಗಿ ಸ್ಪೀಕರ್ಗೆ ಇಂದು ಸುಪ್ರೀಂ ಕೋರ್ಟ್ ಹೊಸ ಆದೇಶವನ್ನು ಹೊರಡಿಸಿದೆ. ಈ ಸಂದಿಗ್ಧ ಸಮಯದಲ್ಲಿ ಯಾವುದೇ ರೀತಿಯ ಆಡಳಿತ ಕ್ರಮಗಳನ್ನು ಕೈಗೊಳ್ಳ ಬಾರದು ಎಂದು ರಾಜ್ಯಪಾಲರು ಕುಮಾರಸ್ವಾಮಿ ರವರಿಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಹೌದು, ಈ ಎಲ್ಲಾ ಗೊಂದಲಗಳ ಮುಗಿಯುವವರೆಗೂ ಕುಮಾರಸ್ವಾಮಿಯವರು ಇನ್ನುಮುಂದೆ ಯಾವುದೇ ಮಹತ್ವದ ಆಡಳಿತ ಕ್ರಮಗಳನ್ನು ಕೈಗೊಳ್ಳಬಾರದು ಎಂದು ರಾಜ್ಯಪಾಲರು ಸೂಚಿಸಿದ್ದಾರೆ.

ಇದೀಗ ರಾಜ್ಯಪಾಲರು ಸೂಚಿಸಿರುವ ಆದೇಶ ಇನ್ನು ಮುಂದೆ ತೆಗೆದುಕೊಳ್ಳಬಹುದಾದ ನಿರ್ಧಾರಗಳಿಗೆ ಮಾತ್ರ ಅನ್ವಯವಾಗುತ್ತದೆಯೋ ಅಥವಾ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಅನುಮಾನದ ವಿದ್ಯಮಾನಗಳಿಗೂ ಸಹ ಅನ್ವಯವಾಗುತ್ತದೆಯೋ ಎಂಬ ಸ್ಪಷ್ಟನೆ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಕೊನೆಗೂ ರಾಜ್ಯಪಾಲರು ಈ ರೀತಿಯ ನಿರ್ಧಾರ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ನಮ್ಮ ಅಭಿಪ್ರಾಯ. ಯಾಕೆಂದರೆ ಬಹುಮತವಿಲ್ಲದ ಯಾವುದೇ ಸರ್ಕಾರ ಆಡಳಿತ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಭಾರತೀಯ ಸಂವಿಧಾನ ಹೇಳುತ್ತದೆ. ಇದೇ ರೀತಿ ಬಹಳ ಅನುಮಾನ ಮೂಡಿಸುತ್ತಿರುವ ಬಡ್ತಿ ಹಾಗೂ ವರ್ಗಾವಣೆ ವಿದ್ಯಮಾನದ ಕುರಿತು ರಾಜ್ಯಪಾಲರು ಕಠಿಣ ಕ್ರಮ ಕೈಗೊಳ್ಳಲಿ ಎಂಬುದು ನಮ್ಮ ಆಶಯ. ಏನಂತೀರಾ???

Post Author: Ravi Yadav