ಜೆಡಿಎಸ್ ಮಾಸ್ಟರ್ ಪ್ಲಾನ್? ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮುಗಿಸಲು ಹೊಸ ಸ್ಕೆಚ್ ರೂಪಿಸಿದೆಯೇ ಜೆಡಿಎಸ್ ಪಕ್ಷ? ಹೊಸ ಸ್ಕೆಚ್ ಏನು ಗೊತ್ತಾ??

ಇಡೀ ರಾಜ್ಯ ರಾಜಕಾರಣ ಇಂದು ಅಲ್ಲೋಲ ಕಲ್ಲೋಲವಾಗಿದೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ವೈಮನಸ್ಸು ತಾರಕಕ್ಕೇರಿದೆ. ಕುಮಾರಸ್ವಾಮಿರವರ ಆಡಳಿತದ ವಿರುದ್ಧ ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ಸಿಡಿದೆದ್ದಿದ್ದಾರೆ. ಅಷ್ಟೇ ಯಾಕೆ ಜೆಡಿಎಸ್ ಪಕ್ಷದ ಶಾಸಕರು ಸಹ ಅಸಮಾಧಾನದಿಂದ ಪಕ್ಷದಿಂದ ಹೊರ ನಡೆದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮತ್ತೊಂದು ಚುನಾವಣೆ ಎದುರಿಸಲು ಸಿದ್ದರಾಗದ ಜೆಡಿಎಸ್ ಪಕ್ಷವು ಇದೀಗ ಹೊಸದಾಳ ಉರುಳಿಸಿದಂತೆ ಕಾಣುತ್ತಿದೆ. ಒಂದು ವೇಳೆ ಇದೇ ನಡೆದಲ್ಲಿ ಬಿಜೆಪಿ ಪಕ್ಷವು ಕರ್ನಾಟಕ ರಾಜ್ಯದಲ್ಲಿ ಅಂತ್ಯ ಕಾಣುವುದು ಬಹುತೇಕ ಖಚಿತ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಸೂಚನೆ ನೀಡಿವೆ, ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಸಾರಾ ಮಹೇಶ್ ರವರ ಭೇಟಿಯ ನಂತರ ಮುರಳಿಧರ ರಾವ್ ರವರು ಒಂದು ವಿವರಣೆ ನೀಡಿದರೇ, ಸಾರ ಮಹೇಶ್ ರವರು ಮತ್ತೊಂದು ರೀತಿಯ ವಿವರಣೆ ನೀಡುತ್ತಿದ್ದಾರೆ. ಅದೇ ರೀತಿ ಜೆಡಿಎಸ್ ಪಕ್ಷವು ಸಹ ತನ್ನದೇ ಆದ ವಿವರಣೆ ನೀಡಿ ಭೇಟಿಯನ್ನು ಸಮರ್ಥನೆ ಮಾಡಿಕೊಂಡಿದೆ.

ಕೆಲವು ಮಾಹಿತಿಗಳ ಪ್ರಕಾರ, ಜೆಡಿಎಸ್ ಪಕ್ಷದ ಸಾರಾ ಮಹೇಶ್ ರವರು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಕೊಂಡಿಯಾಗಲಿದ್ದಾರೆ, ಒಂದು ವೇಳೆ ಬಿಜೆಪಿ ಪಕ್ಷವು ಮುಖ್ಯಮಂತ್ರಿ ಸ್ಥಾನವನ್ನು ಈಶ್ವರಪ್ಪ ರವರಿಗೆ ಬಿಟ್ಟುಕೊಟ್ಟಲ್ಲಿ ಜೆಡಿಎಸ್ ಪಕ್ಷವು ತನ್ನ ಸಂಪೂರ್ಣ ಬೆಂಬಲವನ್ನು ಬಿಜೆಪಿ ಪಕ್ಷಕ್ಕೆ ನೀಡಲಿದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕಾಗಿ ಈಶ್ವರಪ್ಪ ರವರು ಸಹ ಮುರಳೀಧರ ರಾವ್ ರವರ ಜೊತೆ ಸಾರಾ ಮಹೇಶ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಒಂದು ವೇಳೆ ಅದೇ ನಡೆದಲ್ಲಿ ಅಸ್ತಿತ್ವವೇ ಹೊಂದಿರದ ಪಕ್ಷವನ್ನು ಸೈಕಲ್ನಲ್ಲಿ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಇಂದು ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷವನ್ನಾಗಿ ಮಾಡಿರುವ ಬಿಎಸ್ ಯಡಿಯೂರಪ್ಪ ನವರ ಕೋಟ್ಯಾಂತರ ಅಭಿಮಾನಿಗಳು ಬಿಜೆಪಿ ಪಕ್ಷದ ವಿರುದ್ಧ ಸಿಡಿದೇಳುವುದು ಖಚಿತ ಎಂಬ ಅಭಿಪ್ರಾಯಗಳು ಸಹ ಕೇಳಿಬಂದಿವೆ. ಮತ್ತೊಂದೆಡೆ ನಾವು ನರೇಂದ್ರ ಮೋದಿರವರ ಮುಖ ನೋಡಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇವೆ, ಒಂದು ವೇಳೆ ಬಿಜೆಪಿ ಪಕ್ಷವು ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಲ್ಲಿ ಕರ್ನಾಟಕ ರಾಜ್ಯದಲ್ಲಿ ಅಂತ್ಯ ಕಾಣಲಿದೆ ಎಂದು ಶಿಸ್ತಿನ ಪಕ್ಷದ ಶಿಸ್ತಿನ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Post Author: Ravi Yadav