ಕೊನೆಗೂ ಬಿಜೆಪಿ ಬೆಲೆ ಅರ್ಥ ಮಾಡಿಕೊಂಡ ಹೆಚ್ಡಿಕೆ: ಹೇಳಿದ್ದೇನು ಗೊತ್ತಾ??

ಇದೀಗ ಕರ್ನಾಟಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಕುಮಾರಸ್ವಾಮಿ ರವರು ರಾಜೀನಾಮೆಗೆ ಸಿದ್ದರಾಗಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದೆ. ಕುಮಾರಸ್ವಾಮಿರವರ ಆಪ್ತ ಮೂಲಗಳಿಂದ ಈ ವಿಷಯ ಹೊರ ಬಿದ್ದಿರುವ ಕಾರಣ ಕುಮಾರಸ್ವಾಮಿ ರವರು ರಾಜಿನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಕುಮಾರಸ್ವಾಮಿರವರ ವಿರುದ್ಧ ಸಿಡಿದೆದ್ದು, ನಡು ಬೀದಿಗಳಲ್ಲಿ ಕುಮಾರಸ್ವಾಮಿರವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಜೆಡಿಎಸ್ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ವಿಶ್ವನಾಥ ಅವರು ಸಹ ಕುಮಾರಸ್ವಾಮಿರವರ ಆಡಳಿತದಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿರುವುದು ಕುಮಾರಸ್ವಾಮಿ ರವರಿಗೆ ಭಾರಿ ಮುಜುಗರ ಉಂಟುಮಾಡಿದೆ.

ಪರಿಸ್ಥಿತಿ ಹೀಗಿರುವಾಗ ಕಳೆದ ಬಾರಿಯ ಬಿಜೆಪಿ ಪಕ್ಷದ ಮೈತ್ರಿ ನೆನಪು ಮಾಡಿಕೊಂಡ ಕುಮಾರಸ್ವಾಮಿ ರವರು ಕರ್ನಾಟಕದ ತಮ್ಮ ಆಪ್ತ ಗಣ್ಯರೊಬ್ಬರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ, ಹೌದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಕೆಲವು ವರ್ಷಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿ ಅತಂತ್ರ ಸ್ಥಿತಿ ಉಂಟಾದಾಗ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಇಪ್ಪತ್ತು ತಿಂಗಳ ಅಧಿಕಾರ ನಡೆಸಿದ್ದರು. ಅಂದು ಬಿಜೆಪಿ ಪಕ್ಷವು ಕುಮಾರಸ್ವಾಮಿ ರವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟು ಸಂಪೂರ್ಣವಾಗಿ ಅಧಿಕಾರ ನಡೆಸುವ ಅವಕಾಶ ಕೊಟ್ಟಿದ್ದರು. ಯಾವುದೇ ಯೋಜನೆಗಳಿಗೂ ಬಿಜೆಪಿ ಪಕ್ಷದಿಂದ ಯಾವುದೇ ರೀತಿಯ ತೊಂದರೆಗಳು ಎದುರಾಗುತ್ತಿರಲಿಲ್ಲ, ಮೈತ್ರಿಯ ಮೊದಲು ಮೈತ್ರಿ ಬೇಡ ಎಂದಿದ್ದ ದೇವೇಗೌಡರು ಸಹ ಬಿಜೆಪಿ ಪಕ್ಷದ ಸಹಕಾರ ಹಾಗೂ ಮಗನ ಆಡಳಿತ ನೋಡಿ ಭೇಷ್ ಎಂದಿದ್ದರು.

ಆದರೆ ಇದೀಗ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ, ಅಷ್ಟೇ ಅಲ್ಲದೆ ಮೊದಲಿನಿಂದಲೂ ಕುಮಾರಸ್ವಾಮಿರವರ ಹಲವು ಯೋಜನೆಗಳಿಗೆ ಕಾಂಗ್ರೆಸ್ ಪಕ್ಷವು ಅಡ್ಡಗಾಲಾಗಿ ನಿಂತಿದೆ. ಈ ವಿಷಯವನ್ನು ಕುದ್ದು ಕುಮಾರಸ್ವಾಮಿ ರವರೆ ಮಾಧ್ಯಮಗಳ ಮುಂದೆ ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ, ಕಾಂಗ್ರೆಸ್ ಪಕ್ಷವು ತನಗೆ ಸಂಪೂರ್ಣ ಅಧಿಕಾರ ನೀಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪ ಸಹ ಮಾಡಿದ್ದಾರೆ. ಇದೀಗ ಇದೇ ವಿಷಯವನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿರುವ ಕುಮಾರಸ್ವಾಮಿ ರವರು ಬಿಜೆಪಿ ಪಕ್ಷದ ಜೊತೆ ಮೈತ್ರಿ ಸರ್ಕಾರದ ಅನುಭವ ನೆನಪುಮಾಡಿಕೊಂಡು ಈ ಬಾರಿ ತಂದೆಯ ಮಾತು ಕೇಳಿ ಎಡವಿದೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಕುಮಾರಸ್ವಾಮಿರವರ 20 ತಿಂಗಳ ಆಡಳಿತ ಇಡೀ ರಾಜ್ಯದ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಈ ಬಾರಿಯ ಆಡಳಿತ ಇಡೀ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಅಧಿಕಾರಕ್ಕೆ ಏರಿದ ಕ್ಷಣದಿಂದಲೂ ಸರ್ಕಾರ ಉರುಳುವ ಭೀತಿಯಲ್ಲಿ ಅಭಿವೃದ್ಧಿ ಮರೆತಿದೆ ಎನ್ನುವ ಆರೋಪ ವಿರೋಧ ಪಕ್ಷದ್ದು. ಅಷ್ಟೇ ಅಲ್ಲದೆ ಕುಮಾರಸ್ವಾಮಿ ರವರು ಈ ಒಂದು ವರ್ಷದ ಆಡಳಿತದಲ್ಲಿ ಬಾರಿ ವಿವಾದಗಳನ್ನು ಸಹ ಮೈಮೇಲೆ ಎಳೆದುಕೊಂಡಿದ್ದಾರೆ, ಒಂದುವೇಳೆ ಇದೀಗ ಕುಮಾರಸ್ವಾಮಿ ರವರು ರಾಜೀನಾಮೆ ನೀಡುವ ಬದಲು ವಿಧಾನಸಭಾ ವಿಸರ್ಜನೆಗೆ ಮುಂದಾದಲ್ಲಿ ಮುಂದಿನ ಚುನಾವಣೆಯಲ್ಲಿ ವಿವಾದಗಳು ಬಾರಿ ಪರಿಣಾಮ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ಅದೇನೇ ಆಗಲಿ ಬಿಜೆಪಿ ಪಕ್ಷದ ಜೊತೆಗಿನ ಮೈತ್ರಿಯ ಬಗ್ಗೆ ಕುಮಾರಸ್ವಾಮಿ ರವರಿಗೆ ಕೊನೆಗೂ ಅರ್ಥವಾಗಿದೆ.

Post Author: Ravi Yadav