ಬಿಜೆಪಿ ಕಾರ್ಯಕರ್ತರಿಗೆ ಬಿಗ್ ಶಾಕ್ ! ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಲು ಸಿದ್ಧವಾಗುತ್ತಿದೇಯಾ ಬಿಜೆಪಿ !

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಎಂಬ ಖ್ಯಾತಿಗೆ ಭಾರತೀಯ ಜನತಾ ಪಕ್ಷ ಒಳಗಾಗಿದೆ. ಇಡೀ ಭಾರತದಲ್ಲಿ ಇಂದು ಕೇಸರಿ ಬಾವುಟ ಹಾರಾಡುತ್ತಿದೆ ಎಂದರೆ ಅದಕ್ಕೆ ಬಿಜೆಪಿ ಪಕ್ಷದ ಕಾರ್ಯಕರ್ತರೇ ಕಾರಣ. ಸ್ವಇಚ್ಛೆಯಿಂದ ಯಾವುದೇ ಹಣದ ಆಮಿಷಕ್ಕೆ ಒಳಗಾಗದೆ ಇಡೀ ಭಾರತದಲ್ಲಿ ಇಂದು ನರೇಂದ್ರ ಮೋದಿರವರ ಕಾರ್ಯಗಳನ್ನು ಸಮರ್ಪಕವಾಗಿ ಯಾವ ಸಂಸದರು ತಲುಪಿಸಿದ ರೀತಿಯಲ್ಲಿ ಮನೆಮನೆಗೆ ತೆರಳಿ ತಲುಪಿಸಿ ನರೇಂದ್ರ ಮೋದಿ ಅವರಿಗೆ ಬಹಳ ಸುಲಭವಾಗಿ ಮುನ್ನೂರರ ಗಡಿ ದಾಟುವ ಗೆಲುವನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ ಬಿಜೆಪಿ ಕಾರ್ಯಕರ್ತರು. ಹೀಗಿರುವಾಗ ತನ್ನ ಬೃಹತ್ ಬಲವಾದ ಕಾರ್ಯಕರ್ತರನ್ನು ಕರ್ನಾಟಕದಲ್ಲಿ ಕಳೆದುಕೊಳ್ಳುವತ್ತ ಬಿಜೆಪಿ ಪಕ್ಷ ಸಾಗಿದೆ.

ಕೆಲವೇ ಕೆಲವು ವರ್ಷಗಳ ಹಿಂದೆ ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು 20 ತಿಂಗಳುಗಳ ಕಾಲ ಅಧಿಕಾರ ಬಿಟ್ಟುಕೊಟ್ಟಿದ್ದ ಇದೇ ಬಿಜೆಪಿ ಪಕ್ಷವು, ಅಂದು ಕುಮಾರಸ್ವಾಮಿ ರವರು ತಮ್ಮ ಕುರ್ಚಿ ತ್ಯಾಗ ಮಾಡದೆ ಇದ್ದ ಕಾರಣ ಚುನಾವಣೆಯನ್ನು ಎದುರಿಸುವಂತಹ ಪರಿಸ್ಥಿತಿ ಎದುರಾಗಿತ್ತು. ಅಷ್ಟೇ ಅಲ್ಲದೆ ಈ ಬಾರಿ ನೂರಕ್ಕೂ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಜೆಡಿಎಸ್ ಪಕ್ಷವು ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾರಣ, ಎರಡು ಪಕ್ಷಗಳ ವೈಮನಸ್ಸು ತಾರಕಕ್ಕೆ ಏರಿತ್ತು. ಒಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಎದೆಗುಂದದೆ ದೋಸ್ತಿ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿದು ಮನೆ ಮನೆಗೆ ತಲುಪಿಸಿ ಕರ್ನಾಟಕ ರಾಜ್ಯದಿಂದ 25 ಲೋಕಸಭಾ ಸೀಟುಗಳನ್ನು ಕೇಂದ್ರಕ್ಕೆ ಉಡುಗೊರೆಯನ್ನಾಗಿ ನೀಡಿದ್ದರು.

ಇಷ್ಟೆಲ್ಲಾ ಮಾಡಿದ ಕಾರ್ಯಕರ್ತರಿಗೆ ಬಿಜೆಪಿ ಪಕ್ಷವು ಯಾವ ರೀತಿಯ ಉಡುಗೊರೆ ನೀಡಲು ಸಿದ್ಧವಾಗಿದೆ ಗೊತ್ತಾ?? ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಬಿಜೆಪಿ ಪಕ್ಷವು ಕೇವಲ ಅಧಿಕಾರದ ಆಸೆಗಾಗಿ ಇಷ್ಟು ದಿವಸ ಬದ್ಧ ವೈರಿಗಳಂತೆ ಕಾದಾಡಿದ ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿದೆ ಎಂಬ ಮಾತು ಕೇಳಿಬಂದಿದೆ. ಈ ಮಾಹಿತೆಗೆ ಮತ್ತಷ್ಟು ಪೂರಕ ಎಂಬಂತೆ ಜೆಡಿಎಸ್ ಪಕ್ಷದ ಪ್ರಮುಖ ಶಾಸಕ ಸಾರಾ ಮಹೇಶ್ ರವರು ಹಾಗೂ ಬಿಜೆಪಿ ಪಕ್ಷದ ಪ್ರಮುಖ ನಾಯಕರಾದ ಮುರಳೀಧರ ರಾವ್ ಹಾಗೂ ಈಶ್ವರಪ್ಪನವರು ಭೇಟಿ ಮಾಡಿ ಹೋಟೆಲ್ಗಳಲ್ಲಿ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಎಲ್ಲ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಕಟಣೆ ಗೊಳ್ಳುತ್ತಿದ್ದು ಕಾರ್ಯಕರ್ತರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಚುನಾವಣಾ ಸಮಯದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ನೀಡಿದ ತೊಂದರೆಗಳು ಅಷ್ಟಿಷ್ಟಲ್ಲ, ಕೆಮ್ಮಿದರು ಜೈಲಿಗೆ ಹಾಕುವಂತಹ ತುರ್ತುಪರಿಸ್ಥಿತಿ ಕರ್ನಾಟಕದಲ್ಲಿ ಸೃಷ್ಟಿಯಾಗಿತ್ತು. ಅದನ್ನೆಲ್ಲ ನೋಡದೆ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಗೆಲ್ಲಿಸಿ ಕೊಟ್ಟಿದ್ದಕ್ಕಾಗಿ ಬಿಜೆಪಿ ಪಕ್ಷವು ಈ ಮೈತ್ರಿಯ ಮೂಲಕ ಭರ್ಜರಿ ಉಡುಗೊರೆಯನ್ನು ನೀಡಲು ಸಿದ್ಧವಾಗಿದೆ. ಒಂದು ವೇಳೆ ಅದೇ ನಡೆದಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷ ನೆಲ ಕಚ್ಚುವುದು ಖಚಿತ ಎಂದು ಹೇಳಲಾಗುತ್ತಿದೆ, ಈಗಾಗಲೇ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು ಬಿಜೆಪಿ ಪಕ್ಷದ ನಾಯಕರು ಈ ನಿರ್ಧಾರವನ್ನು ಹಿಂತೆಗೆದುಕೊಂಡರೆ ಮಾತ್ರ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ತನ್ನ ಅಲೆಯನ್ನು ಮುಂದುವರಿಸಲಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ ವಾಗಿದೆ. ನಿಮ್ಮ ನಿರ್ಧಾರವು ಸಹ ಅದೇ ಆಗಿದ್ದಲ್ಲಿ ಶೇರ್ ಮಾಡಿ ಎಲ್ಲೆಡೆ ವೈರಲ್ ಮಾಡಿ ಬಿಜೆಪಿ ನಾಯಕರಿಗೆ ತಲುಪಿಸಿ.

Post Author: Ravi Yadav