ಭಾರತದ ಕಷ್ಟ ಅರಿತು, ಕೇಳುವ ಮೊದಲೇ ಪರಿಹಾರದೊಂದಿಗೆ ಮುಂದೆ ಬಂದ ಇಸ್ರೇಲ್ ! ಭಾರತದ ಆಪ್ತಮಿತ್ರ ಇಸ್ರೇಲ್ಗೆ ನಮ್ಮದೊಂದು ಸಲಾಂ

ಭಾರತದ ಕಷ್ಟ ಅರಿತು, ಕೇಳುವ ಮೊದಲೇ ಪರಿಹಾರದೊಂದಿಗೆ ಮುಂದೆ ಬಂದ ಇಸ್ರೇಲ್ ! ಭಾರತದ ಆಪ್ತಮಿತ್ರ ಇಸ್ರೇಲ್ಗೆ ನಮ್ಮದೊಂದು ಸಲಾಂ

ಭಾರತವು ವಿಶ್ವದ ಕೆಲವೇ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ವನ್ನು ಹೊಂದಿದೆ. ನೆರೆಹೊರೆಯ ಕೆಲವು ಕುತಂತ್ರಿ ರಾಷ್ಟ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ರಾಷ್ಟ್ರಗಳು ಭಾರತದ ಜೊತೆ ಸ್ನೇಹ ಸಂಬಂಧವನ್ನು ಮತ್ತಷ್ಟು ವೃದ್ಧಿ ಮಾಡಿಕೊಳ್ಳಲು ಕಾತರದಿಂದ ಕಾಯುತ್ತಿರುತ್ತವೆ. ಅದರಲ್ಲಿಯೂ ನೀವು ಯಾವುದೇ ಪಕ್ಷದ ಬೆಂಬಲಿಗರಾಗಿರಿ, ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಶ್ವ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಷ್ಟ್ರಗಳು ಭಾರತದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳಲು ಸಾಲಿನಲ್ಲಿ ನಿಂತಿವೆ. ಹೀಗಿರುವಾಗ ಭಾರತದ ಪರಮಾಪ್ತ ರಾಷ್ಟ್ರ ಇಸ್ರೇಲ್ ದೇಶವು ಇಷ್ಟು ದಿವಸ ಭಾರತದ ಜೊತೆ ರಕ್ಷಣಾ ಕ್ಷೇತ್ರದಲ್ಲಿ ಆಪ್ತಮಿತ್ರ ನಾಗಿ ಕಾಣಿಸಿಕೊಂಡಿತ್ತು. ಆದರೆ ಇದೀಗ ಕಷ್ಟದಲ್ಲಿರುವ ಭಾರತಕ್ಕೆ ಮತ್ತೊಮ್ಮೆ ಕ್ಷೇತ್ರದಲ್ಲಿ ಕೈಹಿಡಿಯಲು ಸಿದ್ಧವಾಗಿದೆ. ಏನಂತೀರಾ?? ತಿಳಿಯಲು ಸಂಪೂರ್ಣ ಓದಿ.

ಇಸ್ರೇಲ್ ಒಂದು ಚಿಕ್ಕ ರಾಷ್ಟ್ರವಾಗಿದ್ದರೂ ಸಹ ವಿಶ್ವ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿ ವಿಶ್ವ ನಾಯಕರ ಸಾಲಿನಲ್ಲಿ ನಿಲ್ಲುತ್ತದೆ. ಇದಕ್ಕೆಲ್ಲ ಕಾರಣ ಅತ್ಯಾಧುನಿಕ ಟೆಕ್ನಾಲಜಿ, ಕೃಷಿ ಕ್ಷೇತ್ರದಿಂದ ಹಿಡಿದು ರಕ್ಷಣಾ ಕ್ಷೇತ್ರದ ವರೆಗೂ ತನ್ನದೇ ಆದ ಅತ್ಯದ್ಭುತ ಟೆಕ್ನಾಲಜಿ ಬಳಸಿ ಮುನ್ನುಗ್ಗುತ್ತಿರುವ ಇಸ್ರೇಲ್ ದೇಶವು ಇದೀಗ ಭಾರತ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಗೆ ಪರಿಹಾರ ನೀಡಲು ಮುಂದಾಗಿದೆ. ಬಜೆಟ್ ನಲ್ಲಿ ಘೋಷಿಸಿದಂತೆ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಭಾರತವು ನೀರಿಲ್ಲದೆ ತೀವ್ರ ಬರಗಾಲ ದೊಂದಿಗೆ ಹೋರಾಡುವ ಪರಿಸ್ಥಿತಿ ಎದುರಾಗಲಿದೆ. ಆದ ಕಾರಣದಿಂದ ಇದೀಗ ಭಾರತ ದೇಶಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಸಮುದ್ರದ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿ, ಕುಡಿಯುವ ನೀರಾಗಿ ಪರಿವರ್ತನೆಗೊಳಿಸಲು ಇಸ್ರೇಲ್ ದೇಶವು ಭಾರತದ ಜೊತೆ ಕೈಜೋಡಿಸಲಿದೆ.

ಇದೀಗ ಮೊಟ್ಟಮೊದಲ ಯೋಜನೆಯಾಗಿ ಕಳೆದ ವರ್ಷದ ಮಾತುಕತೆಯಂತೆ ಮಹಾರಾಷ್ಟ್ರ ರಾಜ್ಯದ ಮರಾಠವಾಡ ಪ್ರದೇಶದಲ್ಲಿ ಸಾವಿರ ಕೋಟಿ ರೂ ಯೋಜನೆಯೊಂದಿಗೆ ವಾಟರ್ ಗ್ರೀಡ್ ಸ್ಥಾಪಿಸಲು ಉತ್ಸುಕರಾಗಿ ನಿಂತಿರುವ ಇಸ್ರೇಲ್ ದೇಶವು, ಯೋಜನೆ ಪೂರ್ಣಗೊಳಿಸಿ 30 ದಶಲಕ್ಷ ಜನಸಂಖ್ಯೆಗೆ ನೀರನ್ನು ಒದಗಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಇಸ್ರೇಲ್ನ ಅತ್ಯಾಧುನಿಕ ಟೆಕ್ನಾಲಜಿಯನ್ನು desalination (ಡಜಲೀಕರಣ) ಎಂದು ಕರೆಯಲಾಗುತ್ತದೆ. ಭಾರತವು ಒಂದು ಪರ್ಯಾಯ ದ್ವೀಪವಾಗಿದ್ದು ಬರೋಬ್ಬರಿ ಏಳು ಸಾವಿರದ ಎಂಟು ನೂರು ಕಿಲೋಮೀಟರ್ ಸಮುದ್ರ ತೀರವನ್ನು ಹೊಂದಿರುವ ಕಾರಣ ಸಮುದ್ರದ ನೀರನ್ನು ಪರ್ಯಾಯ ರೀತಿಯಲ್ಲಿ ಬಳಸಿಕೊಂಡಲ್ಲಿ ಭಾರತವು ಮುಂದೆಂದೂ ಬರಗಾಲವನ್ನು ನೋಡುವ ಸಾಧ್ಯತೆಗಳಿಲ್ಲ.

ಈ ಟೆಕ್ನಾಲಜಿಯ ಮೂಲಕ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತನೆಗೊಳಿಸಿ ದೇಶದ ವಿವಿಧ ಭಾಗಗಳಿಗೆ ಪೈಪುಗಳ ಮೂಲಕ ಸರಬರಾಜು ಮಾಡಲಾಗುತ್ತದೆ. ಸದ್ಯ ಮಹಾರಾಷ್ಟ್ರದಲ್ಲಿ ಆರಂಭಗೊಂಡಿರುವ ಈ ಯೋಜನೆ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಭಾರತದ ಮೂರು ದಿಕ್ಕುಗಳಲ್ಲಿ ಸಮುದ್ರ ತೀರದ ಭಾಗಗಳಲ್ಲಿ ಆರಂಭಗೊಂಡು ಇಡೀ ದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಒಟ್ಟಿನಲ್ಲಿ ಭಾರತ ದೇಶಕ್ಕೆ ಪ್ರತ್ಯೇಕ ಆದ್ಯತೆಯನ್ನು ನೀಡುವ ನಮ್ಮ ಮಿತ್ರ ರಾಷ್ಟ್ರ ಇಸ್ರೇಲ್ ದೇಶವು, ಭಾರತದ ನೀರಿನ ಕೊರತೆಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ ಈ ರೀತಿಯ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಮುಂದೆ ಬಂದಿದೆ. ಇದೇ ರೀತಿ ಭಾರತ ಹಾಗೂ ಇಸ್ರೇಲ್ ನಡುವಿನ ಸಂಬಂಧ ಮುಂದುವರಿದು ಮತ್ತಷ್ಟು ಟೆಕ್ನಾಲಜಿ ಗಳು ಭಾರತಕ್ಕೆ ಆಗಮಿಸಿ ಭಾರತವು ಮತ್ತಷ್ಟು ಮುಂದುವರೆದ ದೇಶವಾಗಲಿ ಎಂಬುದು ನಮ್ಮ ಆಶಯ. ಧನ್ಯವಾದಗಳು ಇಸ್ರೇಲ್.