ಕೇವಲ 1 ನಿಮಿಷದಲ್ಲಿ ಶತ್ರುರಾಷ್ಟ್ರಗಳನ್ನು ನಡುಗಿಸಿದ ಭಾರತೀಯ ಸೇನೆ! 1 ನಿಮಿಷದಲ್ಲಿ ಹಾರಿದ ರಾಕೆಟ್ಗಳು ಎಷ್ಟು ಗೊತ್ತಾ??

ಸುತ್ತಲೂ ಶತ್ರು ರಾಷ್ಟ್ರಗಳು ಭಾರತದ ವಿರುದ್ಧ ಕತ್ತಿಮಸೆಯುತ್ತಿರುವ ವಿಷಯದ ಬಗ್ಗೆ ನಿಮಗೆ ತಿಳಿದೇ ಇದೆ. ಇನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ದಿನೇದಿನೇ ಏರಿಕೆಯಾಗುತ್ತಿರುವ ಕಾರಣ ಶತ್ರು ರಾಷ್ಟ್ರಗಳು ಇದನ್ನು ಸಹಿಸುತ್ತಿಲ್ಲ, ಅದಕ್ಕಾಗಿಯೇ ಭಾರತಕ್ಕೆ ಕಪ್ಪುಚುಕ್ಕೆ ತರಬೇಕು ಎಂಬ ಉದ್ದೇಶದಿಂದ ಇತ್ತೀಚೆಗೆ ಯೋಧರ ಮೇಲೆ ಪುಲ್ವಾಮ ಪ್ರದೇಶದಲ್ಲಿ ಆತ್ಮಹುತಿ ದಾಳಿ ನಡೆಸಿದ್ದರು. ಒಂದು ಕೈಲಾಗದ ರಾಷ್ಟ್ರ ಬೇರೆ ವಿಧಿ ಇಲ್ಲದೆ ಬೆನ್ನಿಗೆ ಚೂರಿ ಹಾಕುತ್ತಿದ್ದರೆ, ಇನ್ನೊಂದು ಕುತಂತ್ರಿ ರಾಷ್ಟ್ರ ಸದಾ ಭಾರತದ ವಿರುದ್ಧ ಕತ್ತಿಮಸೆಯುತ್ತ ಕಾಲುಕೆರೆದು ಜಗಳಕ್ಕೆ ನಿಂತಿರುತ್ತದೆ. ಹೀಗಿರುವಾಗ ಭಾರತೀಯ ಸೇನೆಯು ಬಲಿಷ್ಠ ಗೊಳ್ಳುವುದು ಬಹಳ ಮುಖ್ಯವಾದ ಸಂಗತಿ, ಇದನ್ನು ಚೆನ್ನಾಗಿ ಅರಿತಿರುವ ನರೇಂದ್ರಮೋದಿ ಇರುವ ಸರ್ಕಾರ ದಿನೇದಿನೇ ಸೈನ್ಯವನ್ನು ಬಲಪಡಿಸಿಕೊಂಡು ಮುಂದೆ ಸಾಗುತ್ತಿದೆ. ಇದೀಗ ಇದೇ ವಿಚಾರವಾಗಿ ರಶಿಯಾ ದೇಶದಿಂದ ಆಮದು ಮಾಡಿಕೊಂಡ ಆಯುಧದ ಪರೀಕ್ಷೆಯನ್ನು ನಡೆಸಲಾಯಿತು. ಈ ಬ್ರಹ್ಮಾಸ್ತ್ರದ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಪರೀಕ್ಷೆಯ ವಿಚಾರಗಳಿಗಾಗಿ ಕೆಳಗಡೆ ಓದಿ.

ಈ ಬ್ರಹ್ಮಾಸ್ತ್ರ ರಾಕೆಟ್ ಲಾಂಚರ್ ನಲ್ಲಿ ಮೂರು ಜನ ಸೈನಿಕರು ಕೂರುವ ವ್ಯವಸ್ಥೆ ಮಾಡಲಾಗಿದ್ದು, ಬರೋಬ್ಬರಿ 12.71 ತನ್ ತೂಕವನ್ನು ಹೊಂದಿದೆ. ಮೂರು ಜನ ಸೈನಿಕರು ಪ್ರತ್ಯೇಕವಾಗಿ ರಾಕೆಟ್ ಲಾಂಚರ್ ಗಳನ್ನು ನಿರ್ವಹಣೆ ಮಾಡಲು ಸ್ಥಳಾವಕಾಶವನ್ನು ಒದಗಿಸಲಾಗಿದೆ. ಬಿಎಮ್-21 ಗ್ರಾಡ್ ಬ್ಯಾಟರಿ ಎಂಬ ಹೆಸರಿನ ಈ ಅತ್ಯಾಧುನಿಕ ರಾಕೆಟ್ ಬಾಂಬ್ ಲಾಂಚರ್, ವಿಶ್ವದಲ್ಲಿಯೇ ಅತ್ಯಂತ ಶಕ್ತಿ ಸಾಮರ್ಥ್ಯ ಮತ್ತು ನಿಕರತೆಯನ್ನು ಹೊಂದಿರುವ ಆಯುಧ ಎಂಬ ಖ್ಯಾತಿಗೆ ಒಳಗಾಗಿದೆ. ಇತ್ತೀಚೆಗೆ ರಷ್ಯಾ ದೇಶದಿಂದ ಆಮದು ಮಾಡಿಕೊಂಡ ಈ ಆಯುಧವನ್ನು ಭಾರತೀಯ ಸೇನೆಯು ಪರೀಕ್ಷೆಗೆ ಒಳಪಡಿಸಿದ್ದು, ಕೇವಲ ಒಂದು ನಿಮಿಷದಲ್ಲಿ 240 ರಾಕೆಟ್ ಬಾಂಬ್ ಗಳನ್ನು ನಿಖರವಾದ ಗುರಿಯನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಬರೋಬ್ಬರಿ 6 ಲಾಂಚರ್ ಗಳನ್ನು ಪರೀಕ್ಷಿಸಲಾಗಿದ್ದು ಪ್ರಯೋಗದ ವಿಡಿಯೋ ಶತ್ರುರಾಷ್ಟ್ರಗಳ ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ.( ಸಂಪೂರ್ಣ ವೀಡಿಯೋಗಾಗಿ ಕೆಳಗಡೆ ನೋಡಿ). ಸಾಲಾಗಿ ನಿಂತ ವಾಹನಗಳು ಕೇವಲ ಕಣ್ಣು ರೆಪ್ಪೆ ಮಿಡಿಸುವಷ್ಟರಲ್ಲಿ ಒಂದರ ಹಿಂದೆ ಒಂದರಂತೆ ಬೆಂಕಿಯುಂಡೆ ಗಳು ಚಲಿಸುವ ರೀತಿಯಲ್ಲಿ ಭಾರಿ ವೇಗದಲ್ಲಿ ಆಗಸಕ್ಕೆ ಚಿಮ್ಮಿ, ನಿಗದಿತ ಗುರಿಯನ್ನು ಬಹಳ ಸುಲಭವಾಗಿ ತಲುಪಿವೆ. ರಷ್ಯಾದಿಂದ ಆಮದು ಮಾಡಿಕೊಂಡಿರುವ ಈ ಬ್ರಹ್ಮಾಸ್ತ್ರವು 20 ಕಿಲೋಮೀಟರ್ ದೂರದಿಂದ ಇಡಿದು 45 ಕಿಲೋಮೀಟರ್ ದೂರದ ಗುರಿಯನ್ನು ಬಹಳ ಸುಲಭವಾಗಿ ಕ್ಷಣಮಾತ್ರದಲ್ಲಿ ಮುಗಿಸಿಬಿಡುತ್ತದೆ. ಒಟ್ಟಿನಲ್ಲಿ ಈ ಆಯುಧವೂ ಭಾರತೀಯ ಸೇನೆ ಸೇರಿರುವುದು ಬಹಳ ಸಂತಸದ ಸಂಗತಿ, ಭಾರತೀಯ ಸೇನೆಯು ದಿನೇ ದಿನೇ ಮತ್ತಷ್ಟು ಬಲಿಷ್ಠವಾಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ. (ವಿಡಿಯೋ)

ಈ ಆಯುಧ ಪರೀಕ್ಷೆಯು ಪಾಕಿಸ್ತಾನ ದೇಶಕ್ಕೆ ಸ್ಪಷ್ಟ ಸಂದೇಶ ಎಂದೇ ಬಣ್ಣಿಸಲಾಗುತ್ತಿದ್ದು, ಈ ಪ್ರಯೋಗ ನೋಡಿದ ಪಾಕಿಸ್ತಾನ ಗಡಗಡ ನಡುಗಿದೆ. ಅಷ್ಟೇ ಯಾಕೆ ಚೀನಾ ದೇಶವು ಸಹ ಈ ಆಯುಧದಿಂದ ಕೊಂಚ ಬೆದರಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಇಡೀ ವಿಶ್ವದಲ್ಲಿ ಈ ರೀತಿಯ ಸೂಪರ್ ಆಯುಧವನ್ನು ಬಳಸುತ್ತಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಈ ರಾಕೆಟ್ ಬಾಂಬ್ ಲಾಂಚರ್ ಆಯುಧವನ್ನು ರಷ್ಯಾ, ಇರಾನ್, ಕತಾರ್ ಹಾಗೂ ವಿಯೆಟ್ನಾಮ್ ದೇಶಗಳು ಬಳಸುತ್ತಿವೆ. ಈಗಾಗಲೇ ಸರ್ಜಿಕಲ್ ಸ್ಟ್ರೈಕ್, ಬಾಲ ಕೋಟೆ ಸೈಟ್ ನಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆಗೆ ಈ ಬ್ರಹ್ಮಾಸ್ತ್ರದ ಸೇರ್ಪಡೆ ಹೊಸ ತಲೆನೋವಾಗಿ ಪರಿಣಮಿಸಿದೆ. ವಿಶ್ವದ ದೊಡ್ಡಣ್ಣ ಎಂದು ಖ್ಯಾತಿ ಪಡೆದುಕೊಂಡಿರುವ ಅಮೆರಿಕ ದೇಶದ ವಿರೋಧದ ನಡುವೆಯೂ ನರೇಂದ್ರಮೋದಿ ರವರು ಸೇನೆಯನ್ನು ಬಲಿಷ್ಠಗೊಳಿಸಲು ರಷ್ಯಾ ದೇಶದಿಂದ ಆಯುಧವನ್ನು ಆಮದು ಮಾಡಿಕೊಂಡಿದ್ದಾರೆ.

Post Author: Ravi Yadav