ಕೇರಳದಲ್ಲಿ ಕೊನೆಗೂ ಶುರುವಾಯಿತು ಮೋದಿ ಅಲೆ! ಉತ್ತಮ ಆರಂಭ ಪಡೆದು ಖಾತೆ ತೆರೆದ ಬಿಜೆಪಿ

ಕೇರಳದಲ್ಲಿ ಕೊನೆಗೂ ಶುರುವಾಯಿತು ಮೋದಿ ಅಲೆ! ಉತ್ತಮ ಆರಂಭ ಪಡೆದು ಖಾತೆ ತೆರೆದ ಬಿಜೆಪಿ

ಇದೀಗ ದೇಶದಲ್ಲಿ ಎಲ್ಲಿ ನೋಡಿದರೂ ಮೋದಿ ಎಂಬ ಸುನಾಮಿ ತಾಂಡವವಾಡುತ್ತಿದೆ. ಇದೇ ಮೊಟ್ಟಮೊದಲ ಬಾರಿಗೆ ಬಿಜೆಪಿ ಪಕ್ಷವು ಏಕಾಂಗಿಯಾಗಿ ಲೋಕಸಭಾ ಚುನಾವಣೆಯಲ್ಲಿ ಮುನ್ನೂರರ ಗಡಿ ದಾಟಿದೆ. ಇನ್ನು ಎನ್ಡಿಎ ಮೈತ್ರಿಕೂಟಗಳ ಸೀಟುಗಳ ಲೆಕ್ಕ ತೆಗೆದುಕೊಂಡರೆ 350 ರ ಬಳಿ ಹೋಗಿ ನಿಲ್ಲುತ್ತದೆ. ಅಕ್ಷರಸಹ ಮೋದಿ ಎಂಬ ಸುನಾಮಿಗೆ ವಿರೋಧಪಕ್ಷಗಳು ಕೊಚ್ಚಿಕೊಂಡು ಹೋಗಿವೆ. ಇಡೀ ದೇಶದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನರೇಂದ್ರ ಮೋದಿ ರವರು ಕೇರಳದಲ್ಲಿ ಮಾತ್ರ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಮತಗಳ ಶೇಕಡವಾರು ಲೆಕ್ಕ ತೆಗೆದುಕೊಂಡರೆ ಗಮನಾರ್ಹ ಸಾಧನೆ ಮಾಡಿದ್ದರೂ ಗೆಲುವು ದಾಖಲಿಸುವಲ್ಲಿ ವಿಫಲವಾಗಿತ್ತು. ಪಕ್ಷಿಮ ಬಂಗಾಳ ರಾಜ್ಯದಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಬಿಜೆಪಿ ಕೇರಳ ರಾಜ್ಯದಲ್ಲಿ ಮಾತ್ರ ಸಂಪೂರ್ಣವಾಗಿ ವೈಫಲ್ಯ ಕಂಡಿತ್ತು.

ಆದರೆ ಇದೀಗ ಬಿಜೆಪಿ ಪಕ್ಷಕ್ಕೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ, ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಕೇವಲ ಶೇಕಡವಾರು ಮತಗಳ ಗಳಿಕೆಯಲ್ಲಿ ಮಾತ್ರ ಮುಂದುಳಿಯದೆ ಕೆಲವು ಕ್ಷೇತ್ರಗಳನ್ನು ಗೆದ್ದು ಬೀಗಿದೆ. ಈ ಫಲಿತಾಂಶಕ್ಕೆ ಪ್ರತಿಕ್ರಿಯಿಸಿರುವ ಕೇರಳ ರಾಜ್ಯದ ಬಿಜೆಪಿ ವಕ್ತಾರ, ಎಡಪಕ್ಷಗಳಿಂದ ಬಳಲುತ್ತಿರುವ ಕೇರಳ ರಾಜ್ಯದಲ್ಲಿ ಇದೀಗ ನರೇಂದ್ರ ಮೋದಿರವರ ಅಲೆ ಪ್ರಾರಂಭವಾಗಿದೆ, ಕಳೆದ ಬಾರಿ ಚುನಾವಣೆಯಲ್ಲಿ ಕೇವಲ ಶೇಕಡವಾರು ಮತಗಳ ಗಳಿಕೆಯಲ್ಲಿ ನಾವು ತೃಪ್ತಿಪಟ್ಟುಕೊಂಡಿದ್ದೆವು. ಆದರೆ ಕೊನೆಗೂ ಜನರು ನಮ್ಮ ಕೈಹಿಡಿದಿದ್ದಾರೆ ಇದು ಹೀಗೆ ಮುಂದುವರೆದಲ್ಲಿ ಖಂಡಿತ ನಾವು ಕ್ರಮೇಣ ಮುಂದಿನ ಚುನಾವಣೆಗಳಲ್ಲಿಯೂ ಹೆಚ್ಚು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಾ ಮುಂದೆ ಹೋಗುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿ 35 ವಾರ್ಡ್‌ಗಳು, ಬ್ಲಾಕ್‌ ಪಂಚಾಯಿತಿಗಳಲ್ಲಿ ನಾಲ್ಕು ವಾರ್ಡ್‌ಗಳು ಮತ್ತು ರಾಜ್ಯದ 13 ಜಿಲ್ಲೆಗಳ ಪುರಸಭೆಗಳಲ್ಲಿ ಐದು ವಾರ್ಡ್‌ಗಳಿಗೆ ಚುನಾವಣೆ ನಡೆಯಿತು. ಇತ್ತೀಚಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಇದೀಗ ಪ್ರಕಟಣೆಗೊಂಡಿದ್ದು, 44 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕೇರಳದಲ್ಲಿ ಅಧಿಕಾರದಲ್ಲಿರುವ LDF ಪಕ್ಷವು ಊಹಿಸಿದಂತೆ ಮೇಲುಗೈ ಸಾಧಿಸಿದ್ದು 22 ಸೀಟುಗಳಲ್ಲಿ ಗೆಲುವು ಕಂಡಿದೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಪಾರ್ಟಿಗೆ ಭರ್ಜರಿ ಶಾಕ್ ನೀಡಿದ್ದ UDF ಪಕ್ಷವು 17 ಸ್ಥಾನಗಳನ್ನು ಗೆಲ್ಲುವ ಮೂಲಕ ಮುಂದಿನ ಚುನಾವಣೆಯಲ್ಲಿ ಮತ್ತಷ್ಟು ಸಾಧನೆ ಮಾಡುವ ಸೂಚನೆ ನೀಡಿದೆ. ಎರಡು ಪಕ್ಷಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಬಿಜೆಪಿ ಪಕ್ಷವೂ ಸಹ 5 ಸೀಟುಗಳಲ್ಲಿ ಗೆಲುವಿನ ನಗೆ ಬೀರಿದ್ದು, ಮೂರನೇ ಸ್ಥಾನ ಪಡೆದುಕೊಂಡಿದ್ದರೂ ಸಹ ಮೋದಿ ರವರ ಅಲೆ ಇಲ್ಲಿ ಪ್ರಾರಂಭವಾಗಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ ವಾಗಿದೆ.

ಈ ಫಲಿತಾಂಶಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷ ಶ್ರೀಧರನ್ ಪಿಳ್ಳೆ ರವರು, ಹಿಂದೆಂದೂ ಕಾಣದಂತಹ ಮತ ಗಳಿಕೆಯನ್ನು ಈ ಬಾರಿಯ ಚುನಾವಣೆಯಲ್ಲಿ ನಾವು ಕಂಡಿದ್ದೇವೆ, ನಾವು ಮೂರನೇ ಸ್ಥಾನ ಪಡೆದುಕೊಂಡಿರಬಹುದು. ಆದರೆ 5 ಸ್ಥಾನಗಳನ್ನು ಗೆಲ್ಲುವುದರಲ್ಲಿ ಬಿಜೆಪಿ ಪಕ್ಷವು ಮೊದಲ ಬಾರಿಗೆ ಯಶಸ್ಸು ಕಂಡಿದೆ. ಇನ್ನು ಶೇಕಡವಾರು ಮತ ಗಳಿಕೆಯ ಪ್ರಮಾಣ ನೋಡಿದರೆ ಬಿಜೆಪಿ ಪಕ್ಷವು ಅಭೂತಪೂರ್ವ ಯಶಸ್ಸು ದಾಖಲಿಸಿದೆ. ನರೇಂದ್ರ ಮೋದಿರವರ ಅಭೂತಪೂರ್ವ ಆಳ್ವಿಕೆಯು ಕೇರಳ ಜನರ ಮನಗೆಲ್ಲುವಲ್ಲಿ ದಿನೇದಿನೇ ಯಶಸ್ವಿಯಾಗುತ್ತಿದೆ. ಅದರ ಫಲಿತಾಂಶವೇ, ಇಂದಿನ ಚುನಾವಣೆಯ ಫಲಿತಾಂಶ. ಖಂಡಿತ ನಾವು ಮುಂದಿನ ಚುನಾವಣೆಯಲ್ಲಿ ಮತ್ತಷ್ಟು ಸ್ಥಾನಗಳನ್ನು ಗೆಲ್ಲುವ ಮೂಲಕ ಮುಂದೆ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಇದಕ್ಕೆ ರಾಜಕೀಯ ಪಂಡಿತರ ಲೆಕ್ಕಾಚಾರ ಗಳನ್ನು ಗಮನಿಸಿದರೆ, ಎಡಪಕ್ಷಗಳ ಭದ್ರಕೋಟೆಯಲ್ಲಿ ಬಿಜೆಪಿ ಪಕ್ಷವು ಅಸ್ತಿತ್ವ ಕಂಡುಕೊಳ್ಳುವುದು ಬಹಳ ಕ್ಲಿಷ್ಟಕರವಾದ ಸಂಗತಿಯಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಳ್ಳೆಯ ಸಾಧನೆ ಮಾಡಿದ ಬಿಜೆಪಿ ಪಕ್ಷವು ಗೆಲುವು ಕಾಣುವುದರಲ್ಲಿ ವಿಫಲವಾಗಿತ್ತು. ಆದರೆ ದಿನೇದಿನೇ ಕೇರಳದಲ್ಲಿ ಬಿಜೆಪಿ ಪಕ್ಷವು ಗಮನಾರ್ಹ ಫಲಿತಾಂಶ ನೀಡುತ್ತಾ ಮುಂದೆ ಸಾಗುತ್ತಿದೆ, ಅಮಿತ್ ಶಾ ರವರು ಹೇಳಿದಂತೆ ಕೇರಳ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಸರ್ಕಾರ ರಚನೆಯಾದರೂ ಯಾವುದೇ ಆಶ್ಚರ್ಯ ಇರುವುದಿಲ್ಲ. ಯಾಕೆಂದರೆ ಈಗಾಗಲೇ ಅಧಿಕಾರದಲ್ಲಿರುವ ಪಾರ್ಟಿಯ ಹಲವಾರು ವೈಫಲ್ಯಗಳನ್ನು ಕಂಡಿದೆ, ಇದರ ನಡುವೆ UDF ಪಕ್ಷವು ಒಳ್ಳೆಯ ಸಾಧನೆ ಮಾಡುತ್ತಿದೆ, ಒಂದು ವೇಳೆ ಕೊನೆ ಕ್ಷಣದಲ್ಲಿ ಈ ಎರಡು ಪಕ್ಷಗಳ ನಡುವೆ ಜಟಾಪಟಿ ಆರಂಭವಾದಲ್ಲಿ ಬಿಜೆಪಿ ಪಕ್ಷವು ಮತ್ತಷ್ಟು ಮತಗಳಿಕೆಯನ್ನು ಪಡೆದುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.