ದೇಶದ ವಿರುದ್ಧ ನಿಂತಿದ್ದಕ್ಕೆ ತಕ್ಕ ತಿರುಗೇಟು ನೀಡಿದ ದೇಶ ಭಕ್ತರು! ಶಾರುಖಾನ್ ಸಿನಿಮಾ ಜೀವನ ಅಂತ್ಯ??

ದೇಶದ ವಿರುದ್ಧ ನಿಂತಿದ್ದಕ್ಕೆ ತಕ್ಕ ತಿರುಗೇಟು ನೀಡಿದ ದೇಶ ಭಕ್ತರು! ಶಾರುಖಾನ್ ಸಿನಿಮಾ ಜೀವನ ಅಂತ್ಯ??

ಕೆಲವೇ ಕೆಲವು ವರ್ಷಗಳ ಹಿಂದೆ ಬಾಲಿವುಡ್ ಕಿಂಗ್ ಎಂದು ಮೆರೆಯುತ್ತಿದ್ದ ಶಾರುಖ್ ಖಾನ್ ಅವರ ಸಿನಿಮಾ ಜೀವನ ಇದೀಗ ಅಂತ್ಯದತ್ತ ಸಾಗಿದೆ, ಕಳೆದ 27 ವರ್ಷಗಳಿಂದ ಬಾಲಿವುಡ್ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಶಾರುಖಾನ್ ರವರು ಇತ್ತೀಚೆಗೆ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ತದನಂತರ ಭಾರತೀಯರು ರೊಚ್ಚಿಗೆದ್ದು, ಶಾರುಖ್ ಖಾನ್ ಅವರ ವಿರುದ್ಧ ನಿಂತಿರುವ ಕಾರಣ ಇದೀಗ ಶಾರುಖಾನ್ ರವರ ಸಿನಿಮಾ ಜೀವನ ಅಂತ್ಯದತ್ತ ಸಾಗುತ್ತಿದ್ದು, ಬಹುಶಹ ಇನ್ನೂ ಯಾವುದೇ ಸಿನಿಮಾಗಳಲ್ಲಿ ಶಾರುಖ್ ಖಾನ್ ರವರು ನಟಿಸುವುದು ಅನುಮಾನವಾಗಿದೆ. ಅಷ್ಟಕ್ಕೂ ವಿಷಯದ ಮೂಲ ಹಾಗೂ ವಿವರಗಳೇನು ಗೊತ್ತಾ?? ತಿಳಿಯಲು ಕೆಳಗಡೆ ಓದಿ.

ಕೆಲವೇ ಕೆಲವು ವರ್ಷಗಳ ಹಿಂದೆ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಶಾರುಖಾನ್ ರವರ ಚಿತ್ರ ಬಿಡುಗಡೆಯಾಗಿದೆ ಎಂದರೆ ಕನಿಷ್ಠ 100 ಕೋಟಿ ಕ್ಲಬ್ ಸೇರುತ್ತಿತ್ತು, ಒಂದರ ನಂತರ ಮತ್ತೊಂದು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡುತ್ತಿದ್ದ ಶಾರುಖ್ ಖಾನ್ ರವರು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದರು. ಬಾಲಿವುಡ್ ಚಿತ್ರರಂಗದಲ್ಲಿ ತಾನೇ ರಾಜ ಎಂದು ಮೆರೆಯುತ್ತಿದ್ದ, ಶಾರುಖ್ ಖಾನ್ ರವರು ಕಳೆದ ನಾಲ್ಕು ವರ್ಷಗಳ ಹಿಂದೆ ಅಂದರೆ 2015ರಲ್ಲಿ ತಮ್ಮದೇ ಆದ ಅವನತಿಯನ್ನು ತಾವೇ ಬರೆದುಕೊಂಡಿದ್ದರು. ಎಲ್ಲವೂ ಸರಿ ಇದೆ ಎನ್ನುವಷ್ಟರಲ್ಲಿ, ಇಂಡಿಯಾ ಟುಡೇ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನ ಶಾರುಖಾನ್ ರವರ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿಬಿಟ್ಟಿತ್ತು, ಯಾಕೆಂದರೆ ಆ ಸಂದರ್ಶನದಲ್ಲಿ ಅವರು ದೇಶದ ವಿರುದ್ಧ ಧ್ವನಿಯೆತ್ತಿದ್ದರು.

ಭಾರತ ದೇಶದಲ್ಲಿ ಅಸಹಿಷ್ಣುತೆ ಅಸ್ತಿತ್ವದಲ್ಲಿದೆಯೇ ಎಂದು ಪ್ರಶ್ನಿಸಿದಾಗ ಶಾರುಖ್ ಖಾನ್ ರವರು, ಹೌದು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಮತ್ತು ಜನರಲ್ಲಿ ದಿನೇದಿನೇ ಸಹಿಷ್ಣುತೆಯ ಮಟ್ಟ ನಿರಂತರವಾಗಿ ಕಡಿಮೆಯಾಗುತ್ತಾ ಸಾಗುತ್ತಿದೆ. ನಾವು ಪ್ರತಿನಿತ್ಯ ಹೊಸ ಭಾರತ, ಆಧುನಿಕ ಭಾರತದ ಬಗ್ಗೆ ಮಾತನಾಡುತ್ತೇವೆ ಆದರೆ ದೇಶದಲ್ಲಿ ಇರುವ ಅನೇಕರಿಗೆ ಈ ದೇಶ ಇನ್ನೂ ಜಾತ್ಯಾತೀತ ದೇಶವಾಗಿದೆ, ಆದ್ದರಿಂದ ಯುವಕರು ಧಾರ್ಮಿಕ ಅಸಹಿಷ್ಣುತೆ ಯಿಂದ ದೂರವಿರಬೇಕು ಎಂದು ಹೇಳಿಕೆ ನೀಡಿದ್ದರು. ಅತ್ಯಂತ ಸಹಿಷ್ಣು ಮತ್ತು ಶಾಂತಿಪ್ರಿಯ ಭಾರತದೇಶದಲ್ಲಿ ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು.ಸಾಮಾಜಿಕ ಜಾಲತಾಣಗಳಲ್ಲಿ ಶಾರುಖಾನ್ ರವರ ವಿರುದ್ಧ ಜನ ತಿರುಗಿಬಿದ್ದಿದ್ದರು, ಸಿನಿಮಾಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು, ದೇಶ ಭಕ್ತರಲ್ಲಿ ಶಾರುಖಾನ್ ರವರು ವಿಲನ್ ಆಗಿದ್ದರು.

ತದನಂತರ ನಡೆದದ್ದೆಲ್ಲವೂ ನಿಮಗೆ ತಿಳಿದೇ ಇದೆ, ಶಾರುಖಾನ್ ರವರ ಯಾವ ಸಿನಿಮಾ ಸಹ ಗಲ್ಲಾಪೆಟ್ಟಿಗೆಯಲ್ಲಿ ಕಿಂಚಿತ್ತೂ ಸದ್ದು ಮಾಡಲಿಲ್ಲ. ದೇಶಭಕ್ತರು ಒಂದಾದರು, ಶಾರುಖಾನ್ ರವರಿಗೆ ಸಿನಿಮಾ ನೋಡದೆ ತಿರುಗೇಟು ನೀಡಿದರು. ಇದರಿಂದ ದಿನೇದಿನೇ ಶಾರುಖಾನ್ ರವರ ಮಾರ್ಕೆಟ್ ಕಡಿಮೆಯಾಗುತ್ತಾ ಬಂತು. ಇದೀಗ ಹಲವಾರು ವೈಫಲ್ಯಗಳ ನಂತರ ಶಾರುಖ್ ಖಾನ್ ರವರು ಯಾವುದೇ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ, ಇತ್ತೀಚಿಗೆ ಬಹುನಿರೀಕ್ಷಿತ ಜೀವನಚರಿತ್ರೆಯನ್ನು ಸಹ ತಿರಸ್ಕಾರ ಮಾಡಿ ನಾನು ಸಿನಿಮಾದಲ್ಲಿ ನಟನೆ ಮಾಡುವುದಿಲ್ಲ ಎಂದು ನಿರ್ದೇಶಕರನ್ನು ವಾಪಸ್ ಕಳುಹಿಸಿದ್ದಾರೆ. ಭಾರತ ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ, ಇಲ್ಲಿ ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮವನ್ನು ಆಚರಿಸಲು ಅವಕಾಶವಿದೆ, ವಿವಿಧ ಧರ್ಮಗಳ ಜನರು ಅನಾದಿಕಾಲದಿಂದಲೂ ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಾ ಬಂದಿದ್ದಾರೆ. ಅದನ್ನು ಮರೆತು ದೇಶದ ವಿರುದ್ಧ ಹೇಳಿಕೆ ನೀಡಿದ ಶಾರುಖಾನ್ ರವರಿಗೆ ಇದೀಗ ಎಲ್ಲರೂ ತಕ್ಕ ತಿರುಗೇಟು ನೀಡಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.