ಸಚೇತಕಿ ಹುದ್ದೆ ನಂತರ ಶೋಭಾ ಕರಂದ್ಲಾಜೆ ವರೆಗೆ ಮತ್ತೊಂದು ಮಹತ್ವದ ಹುದ್ದೆ ನೀಡಿದ ಮೋದಿ ಸರ್ಕಾರ.

ಸಚೇತಕಿ ಹುದ್ದೆ ನಂತರ ಶೋಭಾ ಕರಂದ್ಲಾಜೆ ವರೆಗೆ ಮತ್ತೊಂದು ಮಹತ್ವದ ಹುದ್ದೆ ನೀಡಿದ ಮೋದಿ ಸರ್ಕಾರ.

ಕರ್ನಾಟಕದ ರಾಜ್ಯದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಶೋಭಾ ಕರಂದ್ಲಾಜೆ ರವರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದು ಬೀಗಿದ್ದರು‌. ಶೋಭಾ ಕರಂದ್ಲಾಜೆ ರವರು ಎರಡನೇ ಬಾರಿಗೆ ಗೆಲ್ಲುತ್ತಿದ್ದಂತೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ಶೋಭಾ ಕರಂದ್ಲಾಜೆ ರವರಿಗೆ ಮಂತ್ರಿಸ್ಥಾನ ಖಚಿತ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದರು. ಆದರೆ ಅದ್ಯಾಕೋ ಶೋಭಾ ಕರಂದ್ಲಾಜೆಯವರಿಗೆ ಮಂತ್ರಿಯ ಸ್ಥಾನ ಸಿಗಲಿಲ್ಲ, ಸಾಮಾನ್ಯವಾಗಿ ಇದು ಶೋಭಾಕರಂದ್ಲಾಜೆ ಹಾಗೂ ಅವರ ಬೆಂಬಲಿಗರಲ್ಲಿ ನಿರಾಸೆಯನ್ನು ಉಂಟುಮಾಡಿತ್ತು, ಆದರೆ ತದನಂತರ ಶೋಭಾ ಕರಂದ್ಲಾಜೆ ಅವರಿಗೆ ಮಹಿಳಾ ಸಂಸದೆಯರ ಸಚೇತಕರಾಗಿ ಆಯ್ಕೆ ಮಾಡುವ ಮೂಲಕ ಶೋಭಾ ಕರಂದ್ಲಾಜೆ ರವರಿಗೆ ಮಹತ್ವದ ಹುದ್ದೆ ನೀಡಿದ್ದರು.

ತದನಂತರ ಇದೀಗ ಶೋಭಾ ಕರಂದ್ಲಾಜೆಯವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ನರೇಂದ್ರಮೋದಿ ರವರ ತಂಡ ಹೆಗಲೇರಿಸಿದೆ. ಈ ಮೂಲಕ ಕೇಂದ್ರ ರಾಜಕಾರಣದಲ್ಲಿ ಶೋಭಾ ಕರಂದ್ಲಾಜೆ ರವರು ಮತ್ತಷ್ಟು ಬಲಿಷ್ಠ ನಾಯಕಿಯಾಗಲಿದ್ದಾರೆ. ಹೌದು ಕನ್ನಡತಿ ಶೋಭಾಕರಂದ್ಲಾಜೆ ರವರಿಗೆ ಸಂಪೂರ್ಣ ದಕ್ಷಿಣ ಭಾರತದ ಸಂಸದೆಯರ ಮಾರ್ಗದರ್ಶಕಿ ಯಾಗಿ ಹೊಸ ಹುದ್ದೆಯನ್ನು ನೀಡಲಾಗಿದೆ. ದಕ್ಷಿಣ ಭಾರತದಿಂದ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿರುವ ಮಹಿಳೆಯರಿಗೆ ಮಾರ್ಗದರ್ಶಕಿ ಯಾಗಿ ಶೋಭಾ ಕರಂದ್ಲಾಜೆ ರವರು ಸಲಹೆ ಹಾಗೂ ಸೂಚನೆಗಳನ್ನು ನೀಡಲಿದ್ದಾರೆ. ಇದೇ ರೀತಿ ಭಾರತ ದೇಶವನ್ನು ನಾಲ್ಕು ವಿಭಾಗಗಳಾಗಿ ವಿಂಗಡನೆ ಮಾಡಿ, ಬಿಜೆಪಿ ಪಕ್ಷದ ನಾಲ್ಕು ಮಹಿಳಾ ಸಂಸದೆಯರಿಗೆ ಈ ರೀತಿಯ ಜವಾಬ್ದಾರಿಯನ್ನು ನೀಡಲಾಗಿದೆ.