ಕೊನೆಗೂ ಕರ್ನಾಟಕ ರೈತರಿಗೆ ಸಿಹಿ ಸುದ್ದಿ ನೀಡಿದ ಬಿಜೆಪಿ ಮಹಾರಾಷ್ಟ್ರ ಬಿಜೆಪಿ ಮುಖ್ಯಮಂತ್ರಿ ಫಡ್ನವಿಸ್

ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಕೃಷ್ಣಾ ನದಿಗೆ ನೀರು ಬಿಡುವ ವಿಷಯದಲ್ಲಿ ಭಾರೀ ತಿಕ್ಕಾಟ ನಡೆಯುತ್ತಿತ್ತು. ಮಳೆ ಇಲ್ಲದೆ ಕರ್ನಾಟಕ ರಾಜ್ಯದ ರೈತರು ಕಂಗಾಲಾಗಿ ಕುಳಿತಿರುವ ಸಮಯದಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು, ಆದರೆ ಕೊನೆ ಸಮಯದಲ್ಲಿ ಮಹಾರಾಷ್ಟ್ರದ ರಾಜ್ಯ ಸರ್ಕಾರ ನಮ್ಮ ಕಡೆಯಿಂದ ನೀರು ಬಿಡುವ ಯಾವುದೇ ಆದೇಶ ಹೊರಬಿದ್ದಿಲ್ಲ, ಕೇವಲ ಊಹಾಪೋಹಗಳನ್ನು ನೀವು ಕೇಳಿದ್ದೀರಿ ಎಂದು ಸ್ಪಷ್ಟನೆ ನೀಡಿತ್ತು. ಇಷ್ಟಕ್ಕೆ ಸುಮ್ಮನಾಗದ ಕರ್ನಾಟಕ, ಮಹಾರಾಷ್ಟ್ರ ಸರ್ಕಾರದ ಬಳಿ ಕೃಷ್ಣಾನದಿಗೆ ರಾಜಾಪೂರ ಬ್ಯಾರೇಜ್ ಮೂಲಕ ನೀರು ಹರಿಸುವಂತೆ ಮನವಿ ಮಾಡಿಕೊಂಡಿತ್ತು. ಅದ್ಯಾಕೋ ಮಹಾರಾಷ್ಟ್ರ ಸರ್ಕಾರವು ಅಂದು ಕರ್ನಾಟಕ ರೈತರ ಮನವಿಗೆ ವೇಗವಾಗಿ ಸ್ಪಂದಿಸಿರಲಿಲ್ಲ.

ಆದರೆ ಕೊನೆಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರವರು ಹೊಸ ಆದೇಶ ಹೊರಡಿಸಿದ್ದು ಈ ಆದೇಶದ ಮೇರೆಗೆ, ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನ ಮೂಲಕ ಒಂದು ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ. ನೀರಿಲ್ಲದೆ ಬತ್ತಿ ಹೋಗಿದ್ದ ಕೃಷ್ಣಾ ನದಿಯು ಇದೀಗ ಒಂದು ಸಾವಿರ ಕ್ಯೂಸೆಕ್ ನೀರಿನಿಂದ ಇತ್ತ ನದಿತೀರದ ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕುಗಳ ರೈತರು ಹಾಗೂ ಸಾರ್ವಜನಿಕರು ಕುಡಿಯುವ ನೀರು ಯೋಜನೆ ಸೇರಿದಂತೆ ಕೃಷಿಗಾಗಿ ನೀರು ಬಿಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೀಗ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿದ್ದ ಕೃಷ್ಣಾ ನದಿಯು ಮತ್ತೊಮ್ಮೆ ಜೀವಕಳೆಯಿಂದ ತುಂಬಿ ತುಳುಕುತ್ತಿದ್ದು ರೈತರ ಮೊಗದಲ್ಲಿ ಹರ್ಷ ಕಾಣಸಿಗುತ್ತಿದೆ. ಕನ್ನಡಿಗರ ಪರವಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು.

devendra fadnavisKarnataka water crisisKrishna RiverMaharaastra