ದೇವೇಗೌಡರ ತಿರುಗೇಟಿಗೆ ಹೊಸ ಬಾಂಬ್ ಸಿಡಿಸಿದ ಬಿಎಸ್ವೈ- ದೋಸ್ತಿ ಗಳಿಗೆ ಹೊಸ ತಲೆನೋವು

ಕಳೆದ ಕೆಲವು ಗಂಟೆಗಳಿಂದ ದೇವೇಗೌಡರು ನೀಡುತ್ತಿರುವ ಹೇಳಿಕೆಗಳು ಭಾರಿ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ದೋಸ್ತಿ ಸರ್ಕಾರದ ವಿರುದ್ಧ ಇಷ್ಟು ದಿವಸ ಸುಮ್ಮನೆ ಇದ್ದ ದೇವೇಗೌಡರು ಇದೀಗ ಧ್ವನಿಯೆತ್ತಿದ್ದಾರೆ, ಒಂದೇಡೆ ವಿಶ್ವನಾಥ ಅವರ ಬಳಿ ಹೋಗಿ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಹೇಳಿಕೆ ನೀಡುತ್ತಾರೆ. ತದನಂತರ ಇಂದು ಮುಂಜಾನೆಯು ಸಹ ಮಾಧ್ಯಮಗಳಿಗೆ ಯಾವ ಕ್ಷಣದಲ್ಲಿ ಬೇಕಾದರೂ ಮಧ್ಯಂತರ ಚುನಾವಣೆ ನಡೆಯಬಹುದು ಎಂದು ಹೇಳಿಕೆ ನೀಡಿದ್ದರು. ಆದರೆ ಸಂಜೆಯ ಹೊತ್ತಿಗೆ ಯು ಟರ್ನ್ ಹೊಡೆದ ದೇವೇಗೌಡರು ವಿಡಿಯೋ ಸಾಕ್ಷಿ ತೋರಿಸಿದರೂ ಸಹ ನನ್ನ ಹೇಳಿಕೆಯನ್ನು ನೀವು ಇನ್ನೊಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಿದ್ದೀರಿ ಎಂದು ಹೇಳಿಕೆ ನೀಡಿ ಎಲ್ಲರ ಹುಬ್ಬೇರಿಸಿದ್ದರು.

ಒಂದು ವೇಳೆ ಮಧ್ಯಂತರ ಚುನಾವಣೆ ನಡೆದಲ್ಲಿ ಬಿಜೆಪಿ ಪಕ್ಷವು ಸಂಪೂರ್ಣ ಲಾಭವನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಹುಶಃ ಇದನ್ನು ಅರಿತು ದೇವೇಗೌಡರು ಯು-ಟರ್ನ್ ಹೊಡೆದಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು, ಆದರೆ ಬಿಎಸ್ವೈ ಅವರು ಯಾರೂ ಊಹಿಸದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ದೇವೇಗೌಡರ ಮಧ್ಯಂತರ ಚುನಾವಣೆಯ ಹೇಳಿಕೆಯ ಬಗ್ಗೆ ಮಾತನಾಡಿದ ಯಡಿಯೂರಪ್ಪನವರು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ಸನ್ನಿವೇಶ ಸೃಷ್ಟಿಯಾಗಲು ಬಿಡುವುದಿಲ್ಲ, ದೋಸ್ತಿ ಗಳಿಗೆ ಯೋಗ್ಯತೆ ಇದ್ದರೆ ಅಧಿಕಾರ ನಡೆಸಿ ಇಲ್ಲವಾದರೆ ಸರ್ಕಾರ ಉರುಳಿಸಿ, ಕೂಡಲೇ ನಾವು ಸರಕಾರವನ್ನು ರಚಿಸಿ ಬಹುಮತವನ್ನು ಸಾಬೀತುಪಡಿಸುತ್ತವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಜನಾಭಿಪ್ರಾಯಕ್ಕೆ ಬೆಲೆ ಇಲ್ಲವೇ? ಹನ್ನೊಂದು ತಿಂಗಳಲ್ಲಿ ಮತ್ತೊಂದು ಚುನಾವಣೆ ಬೇಡವೇ ಬೇಡ ಎಂದು ಹೇಳಿಕೆ ನೀಡಿದ್ದಾರೆ.

Post Author: Ravi Yadav