ತನ್ನ ಅಭಿವೃದ್ಧಿಯ ಹಾದಿ ಆರಂಭಿಸಿದ ಸುಮಲತಾ- ಸದಾನಂದಗೌಡರ ಸಾಥ್, ಮಂಡ್ಯ ಜನರ ಕಷ್ಟ ನಿವಾರಣೆ??

ಇಡೀ ದೇಶದಲ್ಲಿಯೇ ಅತಿ ಹೆಚ್ಚು ಕುತೂಹಲಕಾರಿ ಕ್ಷೇತ್ರಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಮಂಡ್ಯ ಜಿಲ್ಲೆಯ ಸಂಸದೆ ಸುಮಲತಾ ಅಂಬರೀಶ್ ರವರು ಕೊಟ್ಟಮಾತಿನಂತೆ ನಡೆದುಕೊಳ್ಳುವ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಕೆಲವು ಬಕೆಟ್ ಮಾಧ್ಯಮಗಳು ಸುಮಲತಾರವರ ಹೇಳಿಕೆಗಳನ್ನು ತಿರುಚಿ, ಮಂಡ್ಯ ಜನರ ಕೈಬಿಟ್ಟ ಸುಮಲತಾ ಎಂದು ಸುದ್ದಿ ಪ್ರಸಾರ ಮಾಡಿದ್ದರು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸುಮಲತಾ ರವರು ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಲಾಗಿದೆ ಎಂದು ನೇರವಾಗಿ ಚಾನಲ್ನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ ಆ ಚಾನಲ್ ನವರು ಬುದ್ಧಿ ಮಾತ್ರ ಇನ್ನೂ ಬಿಟ್ಟಿಲ್ಲ ಮುಂದೆ ಬಿಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಹೀಗಿರುವಾಗ ಸ್ಪಷ್ಟನೆ ನೀಡಿದ ಕೆಲವೇ ಕೆಲವು ಗಂಟೆಗಳಲ್ಲಿ ಸುಮಲತಾ ಅಂಬರೀಶ್ ರವರು ತಮ್ಮ ಸಂಸದ ಕೆಲಸವನ್ನು ಆರಂಭ ಮಾಡಿದ್ದಾರೆ. ಈ ಮೂಲಕ ಸ್ಪಷ್ಟ ಸಂದೇಶವನ್ನು ಮಂಡ್ಯ ಜನರಿಗೆ ನೀಡಿದ್ದಾರೆ. ಈ ವಿಷಯದಲ್ಲಿ ಸುಮಲತಾರವರ ಮನವಿಗೆ ಸಂಸದರಾದ ಸದಾನಂದಗೌಡರು ಸಹ ಅಸ್ತು ಎಂದಿದ್ದು, ಇದೀಗ ಮಂಡ್ಯ ಜನರ ಸಮಸ್ಯೆ ಕೇಂದ್ರದ ಗಮನ ಸೆಳೆದಿದೆ. ಹೌದು ಇತ್ತೀಚೆಗೆ ಸುಮಲತಾ ರವರು ಸದಾನಂದಗೌಡ ರವರನ್ನು ಭೇಟಿಯಾಗಿ ಮಂಡ್ಯ ಜಿಲ್ಲೆಯ ಜನರ ಕಷ್ಟಗಳನ್ನು ವಿವರಣೆ ಮಾಡಿದ್ದರು. ಇದನ್ನು ಸೂಕ್ಷ್ಮವಾಗಿ ಅರಿತ ಸದಾನಂದಗೌಡರು ತಕ್ಷಣವೇ ಕೇಂದ್ರದ ಕದ ತಟ್ಟಿದ್ದಾರೆ.

ಸುಮಲತ ರವರು ಸದಾನಂದಗೌಡ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ನೀರಿನ ಕ್ಷಮತೆಯ ಬಗ್ಗೆ ಸಂಪೂರ್ಣವಾಗಿ ವಿವರಣೆ ನೀಡಿ, ಮಂಡ್ಯ ಜಿಲ್ಲೆಯ ಬಹುತೇಕ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಬರ ತಾಂಡವವಾಡುತ್ತಿದೆ, ರೈತರು ಕಾಯುತ್ತಿದ್ದ ಮುಂಗಾರು ಸಹ ಕೈಕೊಟ್ಟಿದೆ. ಕಾವೇರಿ ನದಿಯಲ್ಲಿಯೂ ಸಹ ನೀರು ಕಡಿಮೆಯಾಗಿರುವ ಕಾರಣ ಮಂಡ್ಯ ಜಿಲ್ಲೆಯ ಜನರು ಬಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ ಕಾರಣದಿಂದ ತಕ್ಷಣವೇ ಕೆಆರ್ಎಸ್ ಅಣೆಕಟ್ಟಿನಿಂದ ಕನಿಷ್ಠ ಎರಡು ಟಿಎಂಸಿ ನೀರು ಬಿಡುವಂತೆ ಮನವಿ ಮಾಡಿಕೊಂಡಿದ್ದರು.

ಸದಾನಂದ ಗೌಡರು ಸುಮಲತಾರವರ ಭೇಟಿಯ ನಂತರ ಕೆಲವೇ ಗಂಟೆಗಳಲ್ಲಿ ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೇನ್ ಹಾಗೂ ಜಲಶಕ್ತಿ ಸಚಿವಾಲಯದ ಮುಖ್ಯಸ್ಥ ಗಜೇಂದ್ರ ಶೇಖಾವತ್ ಅವರಿಗೆ ಮಂಡ್ಯ ಜಿಲ್ಲೆಯ ಜನರ ಕಷ್ಟದ ಕುರಿತು ಸಂಪೂರ್ಣವಾಗಿ ವಿವರಣೆ ನೀಡಿ ಪತ್ರ ಬರೆದಿದ್ದಾರೆ. ಕೂಡಲೇ ಕೆಆರ್ಎಸ್ ಡ್ಯಾಮ್ ನಿಂದ ಕನಿಷ್ಠ 2 ಟಿಎಂಸಿ ನೀರನ್ನು ಮಂಡ್ಯ ಜಿಲ್ಲೆಗೆ ಸೀಮಿತ ಮಾಡಿ ನೀರು ಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದ ಹಲವಾರು ಸಂಸದರು ಈಗಾಗಲೇ ತಮ್ಮ ಕಾರ್ಯಗಳನ್ನು ಆರಂಭ ಮಾಡಿದ್ದು, ಎಲ್ಲಾ ಸಂಸದರು ಒಗ್ಗಟ್ಟಾಗಿ ಇದೇ ರೀತಿಯ ಕಾರ್ಯಗಳನ್ನು ಮುಂದುವರಿಸಿದಲ್ಲಿ ಇನ್ನೈದು ವರ್ಷಗಳಲ್ಲಿ ಕರ್ನಾಟಕವು ಅಭಿವೃದ್ಧಿಯ ಹಾದಿಯಲ್ಲಿ ಮುನ್ನುಗ್ಗಲಿದೆ.

Post Author: Ravi Yadav