ಸಂಸತ್ತಿನಲ್ಲಿ ಮೊದಲ ದಿನವೇ ಪ್ರಜ್ವಲಿಸಿದ ಸೂರ್ಯ- ಮೊದಲ ದಿನವೇ ಸಂಸತ್ ನಲ್ಲಿ ಗರ್ಜನೆ

ತಮ್ಮ ನಿಖರವಾದ ಮಾತುಗಳಿಂದ ಪ್ರಸಿದ್ಧಿ ಪಡೆದುಕೊಂಡಿದ್ದ ತೇಜಸ್ವಿ ಸೂರ್ಯ ರವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ದಿವಂಗತ ಅನಂತ್ ಕುಮಾರ್ ರವರ ಸ್ಥಾನದಿಂದ ತೆರವಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಯಾರೂ ಊಹಿಸದ ರೀತಿಯಲ್ಲಿ ಟಿಕೆಟ್ ಪಡೆದುಕೊಂಡು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಬಿಜೆಪಿ ಪಕ್ಷದ ಭದ್ರಕೋಟೆಯಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಅವರು ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು, ಆದರೆ ಕೊನೆ ಗಳಿಗೆಯಲ್ಲಿ ಬಿಜೆಪಿ ಪಕ್ಷದ ಹೈಕಮಾಂಡ್ ತೇಜಸ್ವಿ ಸೂರ್ಯ ರವರ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿತ್ತು. ಚುನಾವಣೆಗೂ ಮೊದಲೇ ಊಹಿಸಿದಂತೆ, ತೇಜಸ್ವಿ ಸೂರ್ಯ ರವರು ಭರ್ಜರಿಯಾಗಿ ಗೆದ್ದು ಸಂಸದರಾದರು.

ಇದೀಗ ಮೊದಲ ಅಧಿವೇಶನದಲ್ಲಿಯೇ ತೇಜಸ್ವಿ ಸೂರ್ಯ ರವರು ಅಭಿವೃದ್ಧಿಯ ಪರ ಧ್ವನಿ ಎತ್ತಿದ್ದಾರೆ. ಹಲವಾರು ವರ್ಷಗಳಿಂದ ಪ್ರತಿಯೊಬ್ಬ ಬೆಂಗಳೂರಿನ ಕನಸಾಗಿರುವ ಹಾಗೂ ಬೆಂಗಳೂರಿನ ಅತಿದೊಡ್ಡ ಟ್ರಾಫಿಕ್ ಸಮಸ್ಯೆಗೆ ಪರಿಹಾರ ವಾಗಿರುವ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಯ ಬಗ್ಗೆ ತೇಜಸ್ವಿ ಸೂರ್ಯ ರವರು ಧ್ವನಿ ಎತ್ತಿ ಎಲ್ಲರ ಮನಗೆದ್ದಿದ್ದಾರೆ. ಹೌದು, ಈ ಯೋಜನೆಯು ಪ್ರತಿಯೊಬ್ಬ ಬೆಂಗಳೂರಿನ ಮೇಲೆ ಪರಿಣಾಮ ಬೀಳುತ್ತದೆ, ಟ್ರಾಫಿಕ್ ಸಮಸ್ಯೆಯಿಂದ ಹಿಡಿದು, ಹಣ ಹಾಗೂ ಸಮಯವನ್ನು ಉಳಿಸುವ ಈ ಯೋಜನೆಯು ಇದೀಗ ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಇದನ್ನು ಗಮನಿಸಿರುವ ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ರವರು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಾತನಾಡುವ ಅವಕಾಶ ಪಡೆದಾಗ, ಈ ಯೋಜನೆಯ ಕುರಿತು ಧ್ವನಿಯೆತ್ತಿದ್ದು, ಕೇಂದ್ರ ಸರ್ಕಾರಕ್ಕೆ ಮಂದಗತಿಯ ಬಗ್ಗೆ ಮನದಟ್ಟು ಮಾಡಿ ಕೊಟ್ಟಿದ್ದಾರೆ.

Post Author: Ravi Yadav