ಬಿಗ್ ನ್ಯೂಸ್: ಅಖಾಡಕ್ಕೆ ಬಿಜೆಪಿ ಸಂಸದರು! ನಿರ್ಮಲಾ ಸೀತಾರಾಮನ್ ರವರ ಬಳಿ ಎರಡು ವಿಶೇಷ ಮನವಿ !

ಬಿಗ್ ನ್ಯೂಸ್: ಅಖಾಡಕ್ಕೆ ಬಿಜೆಪಿ ಸಂಸದರು! ನಿರ್ಮಲಾ ಸೀತಾರಾಮನ್ ರವರ ಬಳಿ ಎರಡು ವಿಶೇಷ ಮನವಿ !

ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಪಕ್ಷವು ಹಿಂದೆಂದೂ ಕಾಣದಂತಹ ಭರ್ಜರಿ ಗೆಲುವು ದಾಖಲಿಸಿದೆ. 28ಲೋಕಸಭಾ ಕ್ಷೇತ್ರಗಳಲ್ಲಿ 25ರ ಪೈಕಿ ಗೆಲುವನ್ನು ಸಾಧಿಸಿರುವ ಬಿಜೆಪಿ ಪಕ್ಷವು, ಜನರ ಊಹೆಗೆ ತಕ್ಕಂತೆ ಕೆಲಸ ಮಾಡುವತ್ತ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಕೆಲವು ದಿನಗಳಲ್ಲಿ ಕರ್ನಾಟಕದ ಬಿಜೆಪಿಯ ಸಂಸದರು ಆಖಾಡಕ್ಕೆ ಇಳಿದಿದ್ದಾರೆ. ಹೌದು ಇಂದು ಮಹತ್ವದ ಬೆಳವಣಿಗೆಯಲ್ಲಿ ಭಾರತದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ರವರನ್ನು ಭೇಟಿ ಮಾಡಿರುವ ಕರ್ನಾಟಕದ ಹಲವಾರು ಬಿಜೆಪಿ ಸಂಸದರು ಎರಡು ವಿಷಯಗಳ ಬಗ್ಗೆ ಪ್ರಮುಖವಾಗಿ ನಿರ್ಮಲ ಸೀತಾರಾಮನ್ ರವರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹೌದು, ಈಗಾಗಲೇ ದೇಶಾದ್ಯಂತ ಸದ್ದು ಮಾಡುತ್ತಿರುವ IMA ಜ್ಯುವೆಲರಿ ಹಗರಣವನ್ನು ಸೂಕ್ಷ್ಮವಾಗಿ ತೆಗೆದುಕೊಂಡಿರುವ ಬಿಜೆಪಿ ಪಕ್ಷದ ಸಂಸದರು, ಸಾವಿರಾರು ಸಾಮಾನ್ಯ ಜನರ ಕಷ್ಟವನ್ನು ನಿವಾರಿಸಲು ನಿರ್ಮಲಾ ಸೀತಾರಾಮನ್ ರವರ ಮೊರೆಹೋಗಿದ್ದಾರೆ. ಸಾಮಾನ್ಯ ಜನರಿಗೆ ಆಗಿರುವ ಅನ್ಯಾಯದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ನೇತೃತ್ವದಲ್ಲಿ ತನಿಖೆ ನಡೆಸುವಂತೆ ನಿರ್ಮಲ ಸೀತಾರಾಮನ್ ರವರಿಗೆ ಇದೀಗ ಮನವಿಯನ್ನು ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಬ್ಯಾಂಕಿಂಗ್ ವಲಯದ ನೇಮಕಾತಿಗಳಲ್ಲಿ ಕನ್ನಡಿಗರಿಗೆ ನಡೆಯುತ್ತಿರುವ ಅನ್ಯಾಯವನ್ನು ಸ್ಪಷ್ಟವಾಗಿ ನಿರ್ಮಲಾ ಸೀತಾರಾಮನ್ ರವರ ಮುಂದೆ ಇಟ್ಟು, ಮುಂದಿನ ದಿನಗಳಲ್ಲಿ ಸ್ಥಳೀಯ ಭಾಷಾಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲು ಮನವಿ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಎಲ್ಲಾ ಸಂಸದರು ಕಾರ್ಯನಿರತರಾಗಿದ್ದಾರೆ. ಇದು ಹೀಗೇ ಮುಂದುವರೆದು ಕರ್ನಾಟಕ ರಾಜ್ಯವು ಅಭಿವೃದ್ಧಿಯ ಹಾದಿಗೆ ತಲುಪಲಿ ಎಂಬುದು ನಮ್ಮ ಆಶಯ.