ನಾಯ್ಡುಗೆ ಬಿಗ್ ಶಾಕ್- ಮೋದಿ ವಿರುದ್ಧ ತೊಡೆ ತಟ್ಟಿದ್ದ ನಾಯ್ಡು ಪಕ್ಷ ಅಂತ್ಯದತ್ತ, ಬಿಜೆಪಿಗೆ ಆನೆ ಬಲ

ಕೆಲವೇ ಕೆಲವು ದಿನಗಳ ಹಿಂದೆ, ನರೇಂದ್ರ ಮೋದಿಯವರನ್ನು ಸಂಸತ್ತಿನಲ್ಲಿ ಬಹುಮತ ಸಾಬೀತು ಮಾಡಲು ಸವಾಲು ಹಾಕಿ, ತದನಂತರ ನಡೆದ ಚುನಾವಣೆಯಲ್ಲಿ ಮೋದಿ ರವರನ್ನು ಸೋಲಿಸುತ್ತೇನೆ, ತೃತೀಯರಂಗ ಕಟ್ಟಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುತ್ತೇನೆ ಎಂದೆಲ್ಲಾ ಸಭೆಗಳ ಮೇಲೆ ಸಭೆಗಳನ್ನು ನಡೆಸಿ, ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಚಂದ್ರಬಾಬು ನಾಯ್ಡು ರವರಿಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಆಂಧ್ರಪ್ರದೇಶದಲ್ಲಿ ಇದೀಗ ರಾಜಕೀಯ ಕ್ರಾಂತಿ ನಡೆಯುತ್ತಿದೆ ಎಂಬಂತೆ ಬಿಂಬಿತವಾಗುತ್ತಿದ್ದು, ಚಂದ್ರಬಾಬು ಬಾಬು ನಾಯ್ಡುರವರ ಪಕ್ಷ ದಿನೇದಿನೇ ಅಂತ್ಯದತ್ತ ಸಾಗುತ್ತಿದೆ. ಈಗಾಗಲೇ ಅಧಿಕಾರ ಕಳೆದುಕೊಂಡಿರುವ ಚಂದ್ರಬಾಬು ನಾಯ್ಡು ರವರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.

ಚುನಾವಣಾ ಸೋಲಿನಿಂದ ಕಂಗೆಟ್ಟಿದ್ದ ಚಂದ್ರಬಾಬುನಾಯ್ಡು ರವರಿಗೆ ಪಕ್ಷದ ಒಟ್ಟು 6 ರಾಜ್ಯಸಭಾ ಸದಸ್ಯರ ಪೈಕಿ, ನಾಲ್ಕು ಜನ ದೊಡ್ಡ ಹೊಡೆತ ನೀಡಿದ್ದಾರೆ. ಮಹತ್ವದ ವಿದ್ಯಮಾನದಲ್ಲಿ ತೆಲುಗುದೇಶಂ ಪಾರ್ಟಿಯ ನಾಲ್ಕು ರಾಜ್ಯಸಭಾ ಸದಸ್ಯರು ಉಪರಾಷ್ಟ್ರಪತಿಯಾದ ವೆಂಕಯ್ಯನಾಯ್ಡು ರವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲದೆ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ ನಾಲ್ಕು ರಾಜ್ಯಸಭಾ ಸದಸ್ಯರು, ಬಿಜೆಪಿ ಪಕ್ಷಕ್ಕೆ ಬಲ ತುಂಬಲಿದ್ದಾರೆ. ಇನ್ನುಳಿದ ಇಬ್ಬರು ರಾಜ್ಯಸಭಾ ಸದಸ್ಯರಾದ ತೋಟ ಸೀತಾರಾಮ ಲಕ್ಷ್ಮಿ ಮತ್ತು ಕನಕಮೇದಲ ರವೀಂದ್ರ ಕುಮಾರ್ ಅವರು ಸಹ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದು, ಕೇಸರಿ ಪಡೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಇವರಲ್ಲದೇ ಇನ್ನೂ ಕೆಲವರು ಪಕ್ಷ ಬಿಡುವ ಮುನ್ಸೂಚನೆ ನೀಡಿದ್ದು,  ಅವರೂ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

Post Author: Ravi Yadav