ದೇಶ ವಿರೋಧಿಗಳಿಗೆ ಬಿಗ್ ಶಾಕ್ ಸುಗ್ರೀವಾಜ್ಞೆ ಹೊರಡಿಸಿದ ಯೋಗಿ ಆದಿತ್ಯನಾಥ್!

ದೇಶದಲ್ಲಿಯೇ ನಂಬರ್ ಮುಖ್ಯಮಂತ್ರಿ ಎಂದು ಹೆಸರು ಪಡೆದುಕೊಂಡಿರುವ ಯೋಗಿ ಆದಿತ್ಯನಾಥ್ ರವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೇವಲ 24 ಗಂಟೆಗಳ ಹಿಂದಷ್ಟೇ ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯನ್ನು ಪತ್ರಿಕಾ ಭಾಷೆಯನ್ನಾಗಿ ಘೋಷಣೆ ಮಾಡಿ, ದೇಶಪ್ರೇಮಿಗಳ ಮನಗೆದ್ದಿದ್ದ ಯೋಗಿ ಆದಿತ್ಯನಾಥ್ ಅವರು ಇದೀಗ ದೇಶ ವಿರೋಧಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ. ಇತ್ತೀಚೆಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಗುಂಪುಗಾರಿಕೆ ಮಾಡಿಕೊಂಡು, ಸರ್ಕಾರದ ಬಗ್ಗೆ ಮಾತನಾಡದೆ ನೇರವಾಗಿ ದೇಶದ ಬಗ್ಗೆ ಮಾತನಾಡಿ ನಾಲಿಗೆ ಹರಿ ಬಿಡುತ್ತಿದ್ದರು. ಮನಬಂದಂತೆ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ ದೇಶದ್ರೋಹಿಗಳಿಗೆ ಬ್ರೇಕ್ ಹಾಕಲು ಇದೀಗ ಯೋಗಿ ಆದಿತ್ಯನಾಥ್ ಅವರು ಹೊಸ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

ಹೌದು, ಇಂದಿನಿಂದ ಉತ್ತರ ಪ್ರದೇಶದ ಯಾವುದೇ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ದೇಶವಿರೋಧಿ ಚಟುವಟಿಕೆಗಳು ನಡೆಯಲು ಅವಕಾಶ ಮಾಡಿಕೊಡದಂತೆ ನಿಗಾವಹಿಸುವ ಕಾನೂನಿಗೆ ಉತ್ತರ ಪ್ರದೇಶ ಸರ್ಕಾರ ಇದೀಗ ಸುಗ್ರೀವಾಜ್ಞೆ ಹೊರಡಿಸಿದೆ. ದೇಶದ ವಿರುದ್ಧ ನಾಲಿಗೆ ಹರಿ ಬಿಟ್ಟರೆ, ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಪರಿಸ್ಥಿತಿಗೆ ತಕ್ಕಂತೆ ವಿವಿಧ ರೀತಿಯ ಶಿಕ್ಷೆಗಳನ್ನು ನೀಡಲು ಸರ್ಕಾರ ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ. ಇಷ್ಟೇ ಅಲ್ಲದೆ ಪ್ರತಿಯೊಂದು ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ತುಂಬಲು ಕ್ರಮ ಕೈಗೊಳ್ಳಬೇಕು, ಜಾತ್ಯತೀತತೆ, ಪ್ರಜಾಪ್ರಭುತ್ವ ಹಾಗೂ ಸಾರ್ವತ್ರಿಕ ಭಾತೃತ್ವ, ಸಹಿಷ್ಣುತೆಯನ್ನು ಬಿತ್ತಬೇಕು ಎಂದು ಕಾನೂನು ಹೊರಡಿಸಿದ್ದಾರೆ. ಒಟ್ಟಿನಲ್ಲಿ ಇನ್ನು ಮುಂದೆ ದೇಶವಿರೋಧಿ ಹೇಳಿಕೆಗಳನ್ನು ನೀಡುವ ದೇಶದ್ರೋಹಿಗಳಿಗೆ ಉತ್ತರಪ್ರದೇಶದಲ್ಲಿ ಉಳಿಗಾಲವಿಲ್ಲ ಎಂಬುದು ಈ ಕಾನೂನಿನ ಮೂಲಕ ಖಚಿತವಾಗಿದೆ. ನಮ್ಮ ಅನಿಸಿಕೆಯ ಪ್ರಕಾರ ಈ ರೀತಿಯ ನಿರ್ಧಾರಗಳು ಪ್ರತಿಯೊಂದು ರಾಜ್ಯದಲ್ಲಿ ಜಾರಿಗೆ ಬರಬೇಕು. ಏನಂತೀರಾ?? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Post Author: Ravi Yadav